– 7,500 ಟ್ಯಾಬ್ ಕೊಡಿಸೋದಾಗಿ ಸುಧಾಕರ್ ಹೇಳಿಕೆ
ಬೆಂಗಳೂರು: ಕೊರೊನಾ ಸಂಕಷ್ಟದ ಹೊತ್ತಲ್ಲಿ ರೋಟರಿ ಸಹಯೋಗದಲ್ಲಿ ಪಬ್ಲಿಕ್ ಟಿವಿ ಮಹಾಯಜ್ಞ ಕೈಗೊಂಡಿದೆ. ‘ಜ್ಞಾನ ದೀವಿಗೆ’ ಹೆಸರಿನಲ್ಲಿ ಉಚಿತವಾಗಿ ಟ್ಯಾಬ್ ಕೊಡ್ತಿದೆ. ಇದಕ್ಕೆ ರಾಜ್ಯದೆಲ್ಲೆಡೆ ಬೆಂಬಲ ವ್ಯಕ್ತವಾಗ್ತಿದೆ.
Advertisement
ಗ್ರಾಮೀಣ ಭಾಗದ ಬಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸುವ ಜ್ಞಾನದೀವಿಗೆ ಮಹಾ ಅಭಿಯಾನಕ್ಕೆ ನಿನ್ನೆ ಚಾಲನೆ ಸಿಕ್ಕಿದೆ. ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ ಪಬ್ಲಿಕ್‍ಟಿವಿ ಕೈಗೊಂಡಿರುವ ಈ ಮಹಾಯಜ್ಞಕ್ಕೆ ಪಬ್ಲಿಕ್ ಟಿವಿ ವಾಹಿನಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್, ರೋಟರಿ ಸಂಸ್ಥೆಯ ಅಧಿಕಾರಿಗಳು, ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಹೊಸಕೋಟೆಯ ವಿದ್ಯಾರ್ಥಿನಿ ನಂದಿನಿ ದೀಪಬೆಳಗುವ ಮೂಲಕ ಚಾಲನೆ ನೀಡಿದ್ದರು. ಇದನ್ನೂ ಓದಿ: ನಾನು 100 ಟ್ಯಾಬ್ ನೀಡ್ತೀನಿ, ಸಾಧ್ಯವಾದ್ರೆ ನೀವೂ ಟ್ಯಾಬ್ ನೀಡಿ- ಶಿವಣ್ಣ ಮನವಿ
Advertisement
Advertisement
ಶಿವಮೊಗ್ಗದಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಪಬ್ಲಿಕ್ ಟಿವಿ ಅಭಿಯಾನವನ್ನು ಶ್ಲಾಘಿಸಿದ್ರು. ಸರ್ಕಾರದಿಂದ ಯಾವೆಲ್ಲ ರೀತಿಯ ಸಹಕಾರ ಬೇಕೋ ಎಲ್ಲವನ್ನು ನೀಡುವುದಾಗಿ ಘೋಷಿಸಿದ್ರು. ಶಿಕ್ಷಣ ಮಂತ್ರಿ ಸುರೇಶ್ ಕುಮಾರ್, ಪಬ್ಲಿಕ್ ಟಿವಿ ನೀಡುವ ಟ್ಯಾಬ್‍ಗಳನ್ನು ಎಲ್ಲಾ ಶಾಲೆಗಳಿಗೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ತಲುಪಿಸಲು ಅಗತ್ಯ ರೂಟ್‍ಮ್ಯಾಪ್ ರೂಪಿಸಲಾಗುವುದು ಎಂದರೆ, ಆರೋಗ್ಯ ಸಚಿವ ಸುಧಾಕರ್ ಅವರು 7,500 ಟ್ಯಾಬ್ ಕೊಡಿಸೋದಾಗಿ ಹೇಳಿದ್ರು. ಇದನ್ನೂ ಓದಿ: ಮಕ್ಕಳು ಟ್ಯಾಬ್‍ಗಳನ್ನು ಉಪಯುಕ್ತವಾಗುವಂತೆ ಬಳಸಿ: ವೀರೇಂದ್ರ ಹೆಗ್ಗಡೆ
Advertisement
ಇಂದು ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಟ್ಯಾಬ್ ವಿತರಿಸುವ 'ಜ್ಞಾನದೀವಿಗೆ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ 7,500 ಮಕ್ಕಳಿಗೆ ಶ್ರೀ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟ್ಯಾಬ್ ವಿತರಿಸುವ ಮೂಲಕ ನಾನೂ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರ್ಧರಿಸಿದ್ದೇನೆ. pic.twitter.com/HTcCEz7Huj
— Dr Sudhakar K (@mla_sudhakar) November 8, 2020
ಜ್ಞಾನದೀವಿಗೆ ಮಹಾ ಅಭಿಯಾನಕ್ಕೆ ಸಮಾಜದ ವಿವಿಧ ವಲಯಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪಬ್ಲಿಕ್ ಟಿವಿ ಬೆಂಗಳೂರು ಕಚೇರಿಯಲ್ಲಿ ಮಕ್ಕಳಿಗೆ ಟ್ಯಾಬ್ ನೀಡಲಾಯ್ತು. ಇತ್ತ ಹುಬ್ಬಳ್ಳಿ, ಯಾದಗಿರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆ ಇಂದು ಸಾಂಕೇತಿಕವಾಗಿ ಟ್ಯಾಬ್‍ಗಳನ್ನು ನೀಡಲಾಯಿತು. ಧಾರವಾಡದ ಶಿವಳ್ಳಿ ಗ್ರಾಮದಲ್ಲಿ 50 ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು. ಯಾದಗಿರಿ ತಾಲೂಕಿನ ಹತ್ತಿಕುಣಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೂ ಟ್ಯಾಬ್ ನೀಡಲಾಯ್ತು. ಇದನ್ನೂ ಓದಿ: ಬೆಳಕಿನ ಹಬ್ಬದ ಸಂದರ್ಭದಲ್ಲಿ ಮಕ್ಕಳ ಬಾಳಿಗೆ ಬೆಳಕು ನೀಡ್ತಿದ್ದೀರಿ: ಸಿದ್ದಗಂಗಾ ಸ್ವಾಮೀಜಿ
ಈ ಟ್ಯಾಬ್‍ಗೆ ಸಿಮ್ ಅಳವಡಿಸಲು ಆಗಲ್ಲ. ಸಿದ್ಧಪಠ್ಯ ಮಾತ್ರ ಟ್ಯಾಬ್‍ನಲ್ಲಿ ಇರಲಿದ್ದು, ಕಾಲಕ್ಕೆ ತಕ್ಕಂತೆ ಅದಕ್ಕೆ ಅಪ್‍ಡೇಟ್ ಮಾಡುವ ಕೆಲಸವೂ ನಿರಂತರವಾಗಿ ಆಗುತ್ತಿರುತ್ತದೆ. ಹೀಗಾಗಿ, ಇದು ದುರುಪಯೋಗವಾಗುವ ಮಾತೇ ಇಲ್ಲ. ಅಭಿಯಾನಕ್ಕೆ ನೀವೂ ಕೈಜೋಡಿಸಿ ಮಕ್ಕಳ ಭವಿಷ್ಯ ರೂಪಿಸಿ. ಎರಡು ಕೈಸೇರಿದರೆ ಚಪ್ಪಾಳೆ ಅನ್ನೋ ತರಾ ನೀವೂ ಕೈಜೋಡಿಸಿದ್ರೆ ಯಾವುದೂ ಅಸಾಧ್ಯವಲ್ಲ. ಈ ಮ್ಯಾರಥಾನ್ ಅಭಿಯಾನದಲ್ಲಿ ನೀವು ಕೂಡ ಕೈಜೋಡಿಸಬಹುದು. ಮಕ್ಕಳ ಭವಿಷ್ಯ ಬೆಳಗಿಸುವ ಸಂಕಲ್ಪದೊಂದಿಗೆ ನಿಮ್ಮ ಕೈಲಾದಷ್ಟು ದೇಣಿಗೆ ನೀಡಬಹುದು. ಒಂದು ಟ್ಯಾಬ್ ದರ 3,495 ರೂಪಾಯಿ. ಬನ್ನಿ ಸಹಾಯ ಮಾಡೋಣ. ಇದನ್ನೂ ಓದಿ: ರಂಗನಾಥ್ ಪ್ರಯತ್ನ ಮಾಡಿದರೆ ಯಾವುದೂ ಅಸಾಧ್ಯವಲ್ಲ: ಸಿಎಂ
ದೇಣಿಗೆ ನೀಡ ಬಯಸುವ ಮಹಾದಾನಿಗಳಿಗಾಗಿ ಬ್ಯಾಂಕ್ ವಿವರ:
PUBLIC TV EDUCATIONAL & CHARITABLE TRUST
NAME OF THE BANK : AXIS BANK
ACCOUNT NO : 916010043440024
BRANCH : R T NAGAR BRANCH
IFSC CODE : UTIB0000363