– ಇತ್ತ ಕಲಾಸಿಪಾಳ್ಯ ಹತೋಟಿಗೆ ತಂದ ಮಾರ್ಷಲ್‍ಗಳು
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ನಗರದ ಕೆ.ಆರ್.ಮಾರ್ಕೆಟ್ ಹಾಗೂ ಕಲಾಸಿಪಾಳ್ಯದಲ್ಲಿ ನಡುರಸ್ತೆಯಲ್ಲಿಯೇ ವ್ಯಾಪಾರ- ವ್ಯವಹಾರಗಳು ಜೋರಾಗಿ ನಡೆಯುತ್ತಿದ್ದವು. ಈ ಬಗ್ಗೆ ಪಬ್ಲಿಕ್ ಟಿವಿ ನಿರಂತರವಾಗಿ ವರದಿ ಬಿತ್ತರಿಸಿತ್ತು.
ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ವರದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು, ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಕೆ.ಆರ್ ಮಾರ್ಕೆಟ್ ಸಂಪೂರ್ಣ ಬಂದ್ ಮಾಡಿದ್ದಾರೆ. ಸಿಟಿ ಮಾರ್ಕೆಟ್ ನ ಎಂಟ್ರಿಯಲ್ಲೇ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಿದ್ದು, ವ್ಯಾಪಾರ- ವಹಿವಾಟುಗಳನ್ನು ತೆರವುಗೊಳಿಸಲಾಗಿದೆ.
Advertisement
Advertisement
ಮಾರ್ಕೆಟ್ ನ ಮಸೀದಿ ಬಳಿ ಮಾತ್ರ ಹೂವಿನ ವ್ಯಾಪಾರ ನಡೆಯುತ್ತಿದೆ. ಸದ್ಯ ಜನ ವಿರಳ ಸಂಖ್ಯೆಯಲ್ಲಿ ವ್ಯಾಪಾರಕ್ಕೆ ಬರುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಹೂವಿನ ವ್ಯಾಪಾರ ಹೊರತುಪಡಿಸಿ ಬೇರೆ ಯಾವುದೇ ವ್ಯಾಪಾರ ಇಲ್ಲ. ಈ ಮೂಲಕ ಮಾರ್ಕೆಟ್ ಸಂಪೂರ್ಣ ಲಾಕ್ ಡೌನ್ ಆದ ಸ್ಥಿತಿಯಲ್ಲಿ ಕಾಣುತ್ತಿದೆ. ಅಲ್ಲದೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.
Advertisement
Advertisement
ಇಂದು ಬೆಳಗ್ಗೆ ಕೊತ್ತಂಬರಿ ಮಂಡಿಯಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಲಾಕ್ ಡೌನ್ ನಿಯಮಗಳ ಉಲ್ಲಂಘನೆ ಮಾಡಿದ್ದಲ್ಲದೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಪೊಲೀಸರ ಮಾತನ್ನೂ ಯಾರೊಬ್ಬರೂ ಕೇಳುತ್ತಿರಲಿಲ್ಲ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ಬಳಿಕ ಅಲರ್ಟ್ ಆದ ಬಿಬಿಎಂಪಿ ಅಧಿಕಾರಿಗಳು, ಕೊತ್ತಂಬರಿ ಸೊಪ್ಪು ಮಾರ್ಕೆಟ್ ಸಂಪೂರ್ಣ ಬಂದ್ ಮಾಡಿದ್ದಾರೆ. ಅಲ್ಲದೆ ಮಾರ್ಕೆಟ್ ಏರಿಯಾದಲ್ಲಿನ ಸಣ್ಣಪುಟ್ಟ ವ್ಯಾಪಾರಿ ಗಳು ಸೇರಿ ಎಲ್ಲ ಅಂಗಡಿಗಳ ತೆರವು ಮಾಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಲಾಠಿ ಹಿಡಿದು ಎಲ್ಲಾ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡಿಸಿದ್ದಾರೆ.
ಇತ್ತ ಕಲಾಸಿಪಾಳ್ಯ ಮುಖ್ಯ ರಸ್ತೆಯನ್ನು ಕೂಡ ಮಾರ್ಷಲ್ ಗಳು ಹತೋಟಿಗೆ ತಂದಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ತುಂಬಿದ್ದ ಹೂವಿನ ವ್ಯಾಪಾರಿಗಳ ಜಾಗ ಖಾಲಿ ಮಾಡಿಸಿದ್ದಾರೆ. ಅರ್ಧ ಗಂಟೆ ಹಿಂದೆ ಜನರಿಂದ ತುಂಬಿ ತುಳುಕ್ತಿದ್ದ ರಸ್ತೆ ಇದೀಗ ಖಾಲಿ ಖಾಲಿಯಾಗಿದೆ.
ಕಲಾಸಿಪಾಳ್ಯದಲ್ಲಿ ಸೀಲ್ ಡೌನ್ ಗೆ ಜನ ಡೋಂಟ್ ಕೇರ್ ಅಂದಿದ್ದು, ಕಲಾಸಿಪಾಳ್ಯದ ಮುಖ್ಯ ರಸ್ತೆ ತುಂಬೆಲ್ಲಾ ಜನ ತುಂಬಿಕೊಂಡಿದ್ದರು. ಪಕ್ಕದಲ್ಲೇ ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್ ಇದ್ದರೂ ಜನ ಕ್ಯಾರೇ ಎಂದಿರಲಿಲ್ಲ. ಹೂ, ತರಕಾರಿ ಹಾಗೂ ಹಣ್ಣು ಸೇರಿ ಹಲವು ರೀತಿಯ ವ್ಯಾಪಾರಗಳು ರಸ್ತೆಯಲ್ಲೇ ನಡೆಯುತ್ತಿತ್ತು.
ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿದ ಬಳಿಕ ಸ್ಥಳಕ್ಕೆ ಮಾರ್ಷಲ್ ಗಳು ದೌಡಾಯಿಸಿ ಜನರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ವ್ಯಾಪಾರ ಮಾಡೋಕೆ ಆಗುತ್ತೆ ಮಾಸ್ಕ್ ಹಾಕೋಕೆ ಆಗಲ್ವ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಯುವಕನೊಬ್ಬ ಸಾರ್ ಸಾವಿಗೆ ಹೋಗ್ತಿದ್ದೀನಿ ಸರ್ ಎಂದಿದ್ದಾನೆ. ಆಗ ಅಧಿಕಾರಿ, ನೀನೆಲ್ಲಿಗಾದರೂ ಹೋಗಪ್ಪ, ಮಾಸ್ಕ್ ಹಾಕಬೇಕು ತಾನೆ ಎಂದು ಹೇಳಿ ಆತನಿಗೆ ದಂಡ ವಿಧಿಸಿದ್ದಾರೆ.
ಅಪ್ಪು ಎಂಬ ಯುವಕನ ವೆಹಿಕಲ್ ತಡೆದು ಮಾರ್ಷಲ್ ಗಳು 200ರೂ. ದಂಡ ಹಾಕಿದ್ದಾರೆ. ಅಲ್ಲದೆ ಕಲಾಸಿಪಾಳ್ಯದಲ್ಲಿ ಮಾಸ್ಕ್ ಹಾಕದ ಹೂ ವ್ಯಾಪಾರಿಗೆ ದಂಡ ವಿಧಿಸಲಾಗಿದೆ.