ಕೊಪ್ಪಳ: ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಎ ಮೂರನೇ ಸೆಮೆಸ್ಟರ್ ನ ಇತಿಹಾಸ ವಿಷಯದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
Advertisement
ಮಂಗಳವಾರ ಕೊಠಡಿಯೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುರಿಸಿ ಪರೀಕ್ಷೆ ಬರೆಯಿಸಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಕಾಲೇಜು ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿಗೆ ಒಳಪಡುತ್ತದೆ. ಪರೀಕ್ಷಾ ಕಾರ್ಯಕ್ಕೆ ಖಾಯಂ, ಅತಿಥಿ ಉಪನ್ಯಾಸಕರು ಗೈರಾಗಿದ್ದರಿಂದ ಅನ್ಯವ್ಯಕ್ತಿಗಳ ಮೂಲಕ ಕೊಠಡಿ ಮೇಲ್ವಿಚಾರಣೆ ಕಾರ್ಯ ನಡೆಸಿದ ಆರೋಪ ಇದೀಗ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ವಿರುದ್ಧ ಕೇಳಿಬಂದಿದೆ.
Advertisement
Advertisement
ಮಂಗಳವಾರ ಬಿಎ ಮೂರನೇ ಸೆಮಿಸ್ಟರ್ ನ ಇತಿಹಾಸ ವಿಷಯದ ಪರೀಕ್ಷೆ ಇತ್ತು. ಈ ವೇಳೆ ಪ್ರಾಚಾರ್ಯ ಡಾ.ಗಣಪತಿ ಲಮಾಣಿ ವಿದ್ಯಾರ್ಥಿಗಳಿಂದ ಹಣ ಪಡೆದು ಒಂದು ಕೊಠಡಿಯಲ್ಲಿ ಇಬ್ಬರೇ ವಿದ್ಯಾರ್ಥಿನಿಯರನ್ನು ಕುರಿಸಿ, ಪರೀಕ್ಷೆ ಬರೆಯಿಸಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಡಾ.ಗಣಪತಿ ವಿರುದ್ಧ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ತನಿಖೆ ಆರಂಭವಾಗಿದ್ದು, ಕಾಲೇಜಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಾಜಕುಮಾರ್ ಪಾಟೀಲ್, ಸಹಾಯಕ ಪ್ರಾಧ್ಯಾಪಕ ಪ್ರಕಾಶ್ ಬಡಿಗೇರ್, ನಗರ ಠಾಣೆ ಇನ್‍ಸ್ಪೆಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ತನಿಖಾ ತಂಡ ಕುಲಪತಿಗಳಿಗೆ ವರದಿ ಸಲ್ಲಿಸಲಿದೆ.