ಪತ್ನಿ ಬಿಟ್ಟು ಹೋದ ದುಃಖ – ತಾನು ಪೂಜಿಸ್ತಿದ್ದ ದೇವಿಯ ಮುಂದೆಯೇ ಅರ್ಚಕ ಆತ್ಮಹತ್ಯೆ

Public TV
1 Min Read
CKD 1 1

ಚಿಕ್ಕೋಡಿ(ಬೆಳಗಾವಿ): ಪತ್ನಿ ಬಿಟ್ಟು ಹೋದಳೆಂಬ ದುಃಖದಲ್ಲಿ ತಾನು ಪೂಜಿಸುತ್ತಿದ್ದ ದೇವಿಯ ಎದುರೇ ಅರ್ಚಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಹುಕ್ಕೇರಿ ಪಟ್ಟಣದ ಲಕ್ಷ್ಮೀ ಗಲ್ಲಿಯಲ್ಲಿರುವ ಲಕ್ಷ್ಮೀ ದೇವಸ್ಥಾನದಲ್ಲಿ ಅಶೋಕ ಪೂಜೇರಿ(36) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣು ಹಾಕಿಕೊಂಡಿರುವ ದೇವಸ್ಥಾನದಲ್ಲೇ ಅರ್ಚಕನಾಗಿದ್ದ ಅಶೋಕ ಪೂಜೇರಿ, ತಾನು ಪೂಜೆ ಮಾಡುತ್ತಿದ್ದ ದೇವಿಯ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

CKD 5 medium

ದಿನನಿತ್ಯ ಪತ್ನಿ ಜೊತೆಗೆ ಜಗಳವಾಡುತ್ತಿದ್ದ ಅಶೋಕನಿಗೆ ಬೇಸತ್ತು ಕಳೆದು ನಾಲ್ಕೈದು ದಿನಗಳ ಹಿಂದೆ ಆತನ ಪತ್ನಿ ಬಿಟ್ಟು ತವರು ಮನೆಗೆ ಹೋಗಿದ್ದಳು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅಶೋಕ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಅರ್ಚಕನಿಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಸ್ಥಳಕ್ಕೆ ಹುಕ್ಕೇರಿ ಪಿ ಎಸ್ ಐ ಸಿದ್ದರಾಮಪ್ಪ ಉನ್ನದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದುಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

4a473781 efe3 4015 b5b9 ea76cd36a6a4 e1625816882296

Share This Article