– ಡಾ.ಪಾಲಾಕ್ಷ ಸಖತ್ ಸ್ಟೆಪ್ಸ್ ವೀಡಿಯೋ ವೈರಲ್
ಚಿತ್ರದುರ್ಗ: ಕೊರೊನಾ ರಣಕೇಕೆಯಿಂದಾಗಿ ಒಂದು ಕ್ಷಣವೂ ವಿಶ್ರಾಂತಿ ಇಲ್ಲದಂತಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಲಾಕ್ಷ ಕೋವಿಡ್ ಬ್ಯುಸಿ ನಡುವೆಯೂ ಮನೆಯಲ್ಲಿ ಅವರ ಪತ್ನಿಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಕಳೆದ ಎರಡು ತಿಂಗಳುಗಳಿಂದ ಕೊರೊನಾ ಎರಡನೆಯ ಅಲೆ ರೌದ್ರಾವತಾರ ತಾಳಿರುವ ಹಿನ್ನೆಲೆಯಲ್ಲಿ ಪ್ರತಿದಿನ ಹಗಲಿರುಳು ಎನ್ನದೆ ಕೋವಿಡ್ ಹರಡದಂತೆ ಶ್ರಮಿಸುತ್ತಿರುವ ಚಿತ್ರದುರ್ಗ ಪಾಲಾಕ್ಷ ಅವರು ಪತ್ನಿ ಜೊತೆ ಬಿಂದಾಸ್ ಡಾನ್ಸ್ ಮಾಡುವ ಮೂಲಕ ಕೊಂಚ ಮೈಂಡ್ ರಿಲೀಫ್ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಬಹಳ ದಿನಗಳ ನಂತರ ಕೊರೊನಾ ಡ್ಯೂಟಿ ನಡುವೆ ಕುಟುಂಬಸ್ಥರೊಂದಿಗೆ ಕೆಲಕಾಲ ಸಮಯ ಕಳೆದ ಡಿಹೆಚ್ ಓ ಡಾ.ಪಾಲಾಕ್ಷ ಅವರು “ನಿನ್ನ ರಾಜ ನಾನು ನನ್ನ ರಾಣಿ ನೀನು ಹಾಡಿಗೆ” ಪತ್ನಿ ಜೊತೆ ಡಾನ್ಸ್ ಮಾಡಿರೋ ವಿಡಿಯೋ ಸಖತ್ ವೈರಲ್ ಆಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದ್ದೇ ತಡ ತಮ್ಮದೇ ಆದ ಶೈಲಿಯಲ್ಲಿ ಡಾನ್ಸ್ ಮಾಡಿ ಎಂಜಾಯ್ ಮಾಡಿರುವ ಡಿಹೆಚ್ ಓ ಸ್ಟೆಪ್ಪಿಗೆ ಜಿಲ್ಲೆಯ ಜನರು ಫುಲ್ ಫಿದಾ ಆಗಿದ್ದಾರೆ.