– ತಾಯಿ ಹಾಲಿಗಾಗಿ ಹಾತೊರೆಯ್ತಿದೆ ಪುಟ್ಟ ಕಂದಮ್ಮ
ಚಿಕ್ಕಬಳ್ಳಾಪುರ: ಗಂಡ, ಮೂವರು ಗಂಡು ಮಕ್ಕಳನ್ನು ಬಿಟ್ಟು ಮಹಿಳೆಯೊಬ್ಬಳು ಬೇರೊಬ್ಬ ಯುವಕನ ಜೊತೆ ಪರಾರಿಯಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ದರ್ಗಾಮೊಹಲ್ಲಾ ನಿವಾಸಿ ತಸ್ಮಿಯಾ ತಾಜ್(23)ಗೆ ನಕ್ಕಲಕುಂಟೆ ಬಡಾವಣೆಯ ನಿವಾಸಿ ಆಸೀಫ್‍ವುಲ್ಲಾ ಎಂಬಾತನ ಜೊತೆ ಕಳೆದ 8 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರ ಸುಂದರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಮೂವರು ಗಂಡು ಮಕ್ಕಳು ಹುಟ್ಟಿದವು. ಆದರೂ ಮಹಿಳೆಗೆ ಅದೇನು ಕೊರತೆಯಾಗಿತ್ತೋ ಗೊತ್ತಿಲ್ಲ. ಇದೇ ತಿಂಗಳ 6ರಂದು ಮೆಡಿಕಲ್ ಶಾಪ್ ಗೆ ಹೋಗಿ ಬರುವುದಾಗಿ ಹೇಳಿ ತಾಯಿ ಮನೆಯಿಂದ ಹೋದವಳು ಮತ್ತೆ ವಾಪಸ್ ಮನೆಗೆ ಬಂದಿಲ್ಲ.
ತಸ್ಮಿಯಾ ತಾಜ್‍ಗೆ ಹಾಲು ಕುಡಿಯೋ ಒಂದೂವರೆ ವರ್ಷದ ಮಗು ಇದ್ದು, ಇದೀಗ ಪುಟ್ಟ ಕಂದಮ್ಮ ತಾಯಿಗಾಗಿ ಹಾತೊರೆಯುತ್ತಿದೆ. ಉಳಿದ ಇಬ್ಬರು ಮಕ್ಕಳು ಅಮ್ಮಾ.. ಅಮ್ಮಾ ಅಂತ ಅಳುತ್ತಿವೆ. ಮತ್ತೊಂದೆಡೆ ಮಕ್ಕಳನ್ನು ಆರೈಕೆ ಮಾಡಲಾಗದೆ ಮಹಿಳೆಯ ಪತಿ ಆಕೆಯ ತಾಯಿ ಮನೆಯಲ್ಲಿ ಮಕ್ಕಳನ್ನ ಕರೆ ತಂದು ಬಿಟ್ಟಿದ್ದಾನೆ.
ತನ್ನ ಪತ್ನಿಯ ಹಿಂದೆ ನಕ್ಕಲಕುಂಟೆಯ ಆಟೋ ಚಾಲಕ ಶಬೀರ್ ಅನ್ನೋ ಯುವಕ ಹಿಂದೆ ಬಿದ್ದಿದ್ದು, ಆಕೆಯ ಮನಸ್ಸು ಹಾಳು ಮಾಡಿ ಪ್ರೀತಿಸುವ ನಾಟಕ ಮಾಡುತ್ತಿದ್ದ. ಇದೀಗ ಆತನೇ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ ಅಂತ ತಸ್ಮಿಯಾ ಪತಿ ಆರೋಪ ಮಾಡುತ್ತಿದ್ದಾನೆ. ಅಲ್ಲದೆ ಆಟೋ ಚಾಲಕನ ವಿರುದ್ಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಆಟೋ ಚಾಲಕ ಶಬೀರ್, ಯುವತಿಯರ, ಮಹಿಳೆಯರನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಕರೆದುಕೊಂಡು ಹೊಗುವ ಅಭ್ಯಾಸವಿದೆ. ಇದೇ ರೀತಿ ಈ ಹಿಂದೆಯೂ ಇಬ್ಬರು ಮಹಿಳೆಯರಿಗೆ ಮೋಸ ಮಾಡಿದ್ದ ಎನ್ನಲಾಗಿದೆ. ಈಗ ಅವನೇ ತಸ್ಮಿಯಾ ತಾಜ್‍ಳನ್ನು ಕರೆದುಕೊಂಡು ಹೋಗಿದ್ದಾನೆ ಅಂತ ಆಕೆಯ ಪೋಷಕರು ಹಾಗೂ ಆಕೆಯ ಗಂಡ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಇತ್ತ ತಸ್ಮಿಯಾ ತಾಜ್ ನ ಮಕ್ಕಳು ಮಾತ್ರ ಅಮ್ಮ ಅಮ್ಮ ಅಂತ ಅಮ್ಮನಿಗಾಗಿ ಹಾತೊರೆಯುತ್ತಿದ್ದು ಎಲ್ಲರ ಕರಳು ಕಿವಿಚುವಂತಿದೆ.