ದುಬೈ: ಪಡಿಕ್ಕಲ್, ಡಿವಿಲಿಯರ್ಸ್, ಫಿಂಚ್ ಅರ್ಧ ಶತಕದ ಆಟದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ಗೆ 202 ರನ್‍ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ದೇವದತ್ ಪಡಿಕ್ಕಲ್ ಹಾಗೂ ಫಿಂಚ್ ಆರಂಭಿಕ ಆಟಗಾರರಾಗಿ ಉತ್ತಮ ಪ್ರದರ್ಶನ ನೀಡಿದರು. ಎಬಿ ಡಿವಿಲಿಯರ್ಸ್ ಸಹ ಅರ್ಧ ಶತಕ ಬಾರಿಸಿದರು. ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಔಟಾದರು. ಮೂವರ ಪ್ರಯತ್ನದಿಂದಾಗಿ ಆರ್‍ಸಿಬಿ ತಂಡ ಮುಂಬೈಗೆ 202 ರನ್ ಟಾರ್ಗೆಟ್ ನೀಡಿದೆ.
ಆರಂಭಿಕ ಆಟಗಾರರಾಗಿ ಎಂಟ್ರಿ ಕೊಟ್ಟ ದೇವದತ್ ಪಡಿಕ್ಕಲ್ ಹಾಗೂ ಫಿಂಚ್ ಉತ್ತಮ ಜೊತೆಯಾಟವಾಡಿದರು. ಆದರೆ 35 ಎಸೆತಗಳಲ್ಲಿ 52ರನ್ ಗಳಿಸಿ ಫಿಂಚ್ ಕ್ಯಾಚ್ ನೀಡಿದರು. ಫಿಂಚ್ ತಮ್ಮ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ನಂತರ ಐದು ಓವರ್ ನಲ್ಲಿ 49 ರನ್ ಸಿಡಿಸಿದರು. ಪಡಿಕ್ಕಲ್ ತಮ್ಮ ಇನ್ನಿಂಗ್ಸ್ ನಲ್ಲಿ 40 ಎಸೆತಗಳಲ್ಲಿ 54 ರನ್ ಗಳಿಸಿದರು. 2 ಸಿಕ್ಸ್ ಹಾಗೂ 5 ಬೌಂಡರಿ ಸಿಡಿಸಿ ವಿಕೆಟ್ ಒಪ್ಪಿಸಿದರು. ಇಬ್ಬರ ಜೊತೆಯಾಟದಲ್ಲಿ 81 ರನ್ ಸಿಡಿಸಿದರು. ಈ ಮೂಲಕ ತಂಡವನ್ನು ಒಂದು ಹಂತಕ್ಕೆ ತಂದರು.
ಫಿಂಚ್ ಕ್ಯಾಚ್ ಬಳಿಕ ತಂಡದ ನಾಯಕ ವಿರಾಟ್ ಕೊಹ್ಲಿ ಆಗಮಿಸಿ, 11 ಬಾಲ್‍ಗೆ ಕೇವಲ 3 ರನ್ ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್ ಗೆ ತೆರಳಿದರು. ಈ ಮೂಲಕ ಆಟವಾಡದೆ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದರು. ನಂತರ ಆಗಮಿಸಿದ ಎಬಿ ಡಿವಿಲಿಯರ್ಸ್ ಪಡಿಕ್ಕಲ್‍ಗೆ ಸಾಥ್ ನೀಡಿದರು. ಮತ್ತೆ ಇವರಿಬ್ಬರ ಜೊತೆಯಾಟದಲ್ಲಿ 62ರನ್ ಸಿಡಿಸಿದರು.
ಎಬಿ ಡಿವಿಲಿಯರ್ಸ್ ಸಹ ಔಟಾಗದೆ 24 ಎಸೆತಗಳಿಗೆ 55 ರನ್ ಸಿಡಿಸಿ ಅಭಿಮಾನಿಗಳ ಮೊಗದಲ್ಲಿ ಸಂತಸ ತಂದರು. 4 ಸಿಕ್ಸ್ ಹಾಗೂ 4 ಬೌಂಡರಿಗಳ ಮೂಲಕ ಡಿವಿಲಿಯರ್ಸ್ ಅಬ್ಬರದ ಆಟವಾಡಿದರು. ಅಷ್ಟರಲ್ಲೇ ಪಡಿಕ್ಕಲ್ ಔಟಾದರು. ಕೊನೆಯ ಮೂರು ಓವರ್ ಇರುವಾಗ ಆಗಮಿಸಿದ ಶಿವಂ ದುಬೆ ಔಟಾಗದೆ 10 ಬಾಲ್‍ಗೆ 27 (3 ಸಿಕ್ಸ್, 1 ಫೋರ್) ರನ್ ಪೇರಿಸಿದರು. ಪಡಿಕ್ಕಲ್, ಫಿಂಚ್ ಹಾಗೂ ಎಬಿ ಡಿವಿಲಿಯರ್ಸ್ ಮೂವರ ಅರ್ಧ ಶತಕದಿಂದಾಗಿ ಆರ್ ಸಿಬಿ ತಂಡ ಮುಂಬೈ ಇಂಡಿಯನ್ಸ್ ಗೆ 202 ರನ್ ಟರ್ಗೆಟ್ ನೀಡಿತು.