– ಮರ್ಡರ್ ಮಿಸ್ಟರಿಯನ್ನು ಬೇಧಿಸಿದ ಪೊಲೀಸರು
ಬೆಂಗಳೂರು: ಪತ್ನಿ ಹಾಗೂ ಮಗ ಸೇರಿ ಸುಪಾರಿ ಕೊಟ್ಟು ರೈತನನ್ನು ಕೊಲೆ ಮಾಡಿಸಿದ್ದಾರೆ. ಅಚ್ಚರಿ ವಿಚಾರ ಎಂಬಂತೆ ಕೊಲೆ ಬಗ್ಗೆ ಯಾರಿಗೂ ಸುಳಿವು ಸಿಗಬಾರದು, ಅಪಘಾತದ ರೀತಿ ಕೊಲೆಯಾಗಬೇಕು. ಇದಕ್ಕೆ ಆಯ್ಕೆ ಮಾಡಿಕೊಂಡಿದ್ದು ಸಿಸಿಟಿವಿ ಕ್ಯಾಮೆರಾಗಳಿಲ್ಲದ ರಸ್ತೆ. ಭಯಾನಕ ಕೊಲೆ ಪ್ರಕರಣವನ್ನು ವೈಟ್ ಫೀಲ್ಡ್ ಪೊಲೀಸರು ಬೇಧಿಸಿದ್ದಾರೆ.
Advertisement
ಜನವರಿ 21ರಂದು 58 ವರ್ಷದ ರೈತ ಸುಬ್ಬರಾಯಪ್ಪ ಕೊಲೆಯಾಗಿದ್ದು, ವ್ಯಕ್ತಿಯೊಬ್ಬರನ್ನು ಭೇಟಿಯಾಗಲು ತೆರಳುವಾಗ ಕಾರ್ ಗುದ್ದಿಸಿ ಕೊಲೆ ಮಾಡಲಾಗಿದೆ. ಆದರೆ ಸುಬ್ಬರಾಯಪ್ಪ ಅವರ ಮಗ ದೇವರಾಜ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಸಹ ಬೈಕ್‍ನಿಂದ ಬಿದ್ದು ಗಾಯಗೊಂಡು ಸುಬ್ಬರಾಯಪ್ಪ ಸಾವನ್ನಪ್ಪಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಬಳಿಕ ಪೊಲೀಸರು ಅಪಘಾತ ನಡೆದ ಸ್ಥಳ ಪರೀಕ್ಷೆಗೆ ತೆರಳಿದ್ದು, ಈ ವೇಳೆ ಅವರಿಗೆ ಅನುಮಾನ ಬಂದಿದೆ. ರಸ್ತೆಯಲ್ಲಿ ತುಂಬಾ ಪ್ಯಾಚ್‍ಗಳಿವೆ, ಅಲ್ಲದೆ ರೋಡ್ ಹಂಪ್ಸ್ ಗಳಿವೆ. ಅಲ್ಲದೆ ಈ ರಸ್ತೆಯಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾಗಳಿಲ್ಲ ಎಂಬುದನ್ನು ಪೊಲೀಸರು ಅರಿತಿದ್ದಾರೆ. ಬಳಿಕ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಳವಾದ ತನಿಖೆ ನಡೆಸಿದ್ದು, ಪ್ರಕರಣದ ಸತ್ಯವನ್ನು ಪತ್ತೆಹಚ್ಚಿದ್ದಾರೆ.
Advertisement
Advertisement
ಅದೇ ರಸ್ತೆಯ ಇನ್ನೊಂದು ಬದಿಯಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಗಮನಿಸಿದ್ದು, ಈ ವೇಳೆ ಅಪಘಾತ ನಡೆದ ಸ್ಥಳಕ್ಕೆ ರಿಜಿಸ್ಟ್ರೇಶನ್ ನಂಬರ್ ಇಲ್ಲದ ಎಸ್‍ಯುವಿ ಕಾರ್ ಹೋಗಿರುವುದನ್ನು ಗಮನಿಸಿದ್ದಾರೆ. ಬಳಿಕ ಪೊಲೀಸರು ಕಾರ್ ಮಾಲೀಕನನ್ನು ಟ್ರೇಸ್ ಮಾಡಿದ್ದು, ಬಾಡಿಗೆ ಕಂಪನಿಯ ಸ್ಟಿಕ್ಕರ್ ಆಧಾರದ ಮೇಲೆ ಅನಿಲ್ ಕುಮಾರ್ ಹಾಗೂ ಕಾರನ್ನು ಪತ್ತೆ ಹಚ್ಚಿದ್ದಾರೆ.
ಬಳಿಕ ಕಾಲ್ ರೆಕಾರ್ಡ್ ದಾಖಲೆಗಳನ್ನು ಪರಿಶೀಲಿಸಿದ್ದು, ಅನಿಲ್ ಕುಮಾರ್ ಸಂತ್ರಸ್ತ ಸುಬ್ಬರಾಯಪ್ಪ ಅವರಿಗೆ ಕರೆ ಮಾಡಿ, ಕೃಷಿ ಪರಿಕರಗಳನ್ನು ಖರೀದಿಸುವ ನೆಪದಲ್ಲಿ ಆ ರಸ್ತೆಗೆ ಕರೆಸಿರುವುದು ಬೆಳಕಿಗೆ ಬಂದಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಅನಿಲ್ ಕುಮಾರ್ ಕರೆ ಮಾಡಿದ ಫೋನ್‍ನ್ನು ಸುಬ್ಬರಾಯಪ್ಪ ಪತ್ನಿ ಯಶೋಧಮ್ಮ ಅವರಿಂದ ಪಡೆದಿದ್ದ. ಬಳಿಕ ಅನಿಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಯಶೋಧಮ್ಮ ಹಾಗೂ ಮಗ ದೇವರಾಜ್ 6 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು ಎಂದು ಅನಿಲ್ ತಪ್ಪೊಪ್ಪಿಕೊಂಡಿದ್ದಾನೆ.
ಸುಬ್ಬರಾಯಪ್ಪ ಅನೈತಿಕ ಸಂಬಂಧ ಹೊಂದಿದ್ದು, ಇದರಿಂದಾಗಿ ಆಸ್ತಿ ಕಡಿಮೆ ಸಿಗುತ್ತದೆ ಎಂಬ ಉದ್ದೇಶದಿಂದ ಯಶೋಧಮ್ಮ ಹಾಗೂ ಮಗ ದೇವರಾಜ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾರೆ. ಬಳಿಕ ಅನಿಲ್‍ಗೆ 6 ಲಕ್ಷ ರೂ.ಗೆ ಸುಪಾರಿ ನೀಡಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.