ಇಸ್ಲಾಮಾಬಾದ್: ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಆಟಗಾರ ಮೊಹಮ್ಮದ್ ಹಫೀಜ್ ಬ್ಯಾಟಿಂಗ್ ಮಧ್ಯದಲ್ಲಿ ಮೂತ್ರವಿಸರ್ಜನೆಗೆ ತೆರಳಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಗೆಪಾಟಲಿಗೀಡಾಗಿದ್ದಾರೆ.
ಕೊರೊನಾ ಅಬ್ಬರಿಸುವ ಮುಂಚೆಯೇ ಲೀಗ್ ಹಂತದ ಪಿಎಸ್‍ಎಲ್ ಪಂದ್ಯಗಳು ಮುಗಿದಿದ್ದವು. ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗುವ ಮೊದಲೇ ಕೊರೊನಾ ಆರಂಭವಾಗಿತ್ತು. ಈಗ ಕೊರೊನಾ ನಂತರ ಮತ್ತೆ ಪಿಎಸ್‍ಎಲ್ ಶುರುವಾಗಿ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯುತ್ತಿವೆ.
ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್ ಪಂದ್ಯ ಪೇಶಾವರ್ ಜಲ್ಮಿ ಮತ್ತು ಲಾಹೋರ್ ಖಲಂದರ್ಸ್ ತಂಡಗಳ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ತಂಡ ಸುಲಭ ಜಯ ಸಾಧಿಸಿದೆ. ಆದರೆ ಪೇಶಾವರ್ ಜಲ್ಮಿ ತಂಡ ನೀಡಿದ ಟಾರ್ಗೆಟ್ ಅನ್ನು ಬೆನ್ನಟ್ಟುತ್ತಿದ್ದ ಲಾಹೋರ್ ಖಲಂದರ್ಸ್ ತಂಡದ ಮೊಹಮ್ಮದ್ ಹಫೀಜ್, ಬ್ಯಾಟಿಂಗ್ ಆಡುವ ಮಧ್ಯದಲ್ಲಿ ಮೈದಾನದಿಂದ ಹೊರಹೋಗಿ ಮೂತ್ರ ವಿಸರ್ಜನೆ ಮಾಡಿ ಬಂದಿದ್ದಾರೆ. ಈ ಕಾರಣಕ್ಕೆ ಸಖತ್ ಟ್ರೋಲ್ ಕೂಡ ಆಗಿದ್ದಾರೆ.
Imam, Shoaib, Wahab and Ramiz walk onto a cricket pitch…
Enjoy your all-access pass to the #HBLPSLV with HBL Parvaz#PhirSeTayyarHain #HBLPSLV #PZvLQ pic.twitter.com/yFVxaTajwL
— PakistanSuperLeague (@thePSLt20) November 14, 2020
ಹಫೀಜ್‍ನನ್ನು ಪೇಶಾವರ್ ಜಲ್ಮಿ ತಂಡದ ವಿಕೆಟ್ ಕೀಪರ್ ಇಮಾಮ್-ಉಲ್-ಹಕ್ ಟ್ರೋಲ್ ಮಾಡಿದ್ದು, ಆತ ಕಳೆದ ಎರಡು ಓವರಿನಿಂದ ಸೂಸು ಮಾಡಬೇಕು ಎನ್ನುತ್ತಿದ್ದ ಎಂದು ಹೇಳಿ ಹಾಸ್ಯ ಮಾಡಿದ್ದಾರೆ. ಪಂದ್ಯದ ಮಧ್ಯೆ ಕಮೆಂಟೆಟರ್ ಜೊತೆ ವಹಾಬ್ ರಿಯಾಜ್, ಶೊಯೇಬ್ ಮಲ್ಲಿಕ್ ಮತ್ತು ಇಮಾಮ್-ಉಲ್-ಹಕ್ ಮಾತನಾಡುತ್ತಿರುತ್ತಾರೆ. ಈ ವೇಳೆ ಇಮಾಮ್ ಹಫೀಜ್ ಎರಡು ಓವರಿನಿಂದ ಸೂಸು ಮಾಡಬೇಕು ಎಂದು ಹೇಳುತ್ತಿದ್ದ ಎಂದಿದ್ದಾರೆ.