– ಡ್ರಾದಲ್ಲಿ ಮೂರನೇ ಟೆಸ್ಟ್ ಪಂದ್ಯ ಅಂತ್ಯ
ಸಿಡ್ನಿ: ರಿಷಬ್ ಪಂತ್ ಅವರ ಭರ್ಜರಿ ಬ್ಯಾಟಿಂಗ್ ಹನುಮ ವಿಹಾರಿಯ ತಾಳ್ಮೆಯುತ ಇನ್ನಿಂಗ್ಸ್ ಆರ್ ಅಶ್ವಿನ್ ಸಾಥ್ ನಿಂದಾಗಿ ಬಾರ್ಡರ್ ಗಾವಸ್ಕಾರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯ ಡ್ರಾ ಮೂಲಕ ಅಂತ್ಯವಾಗಿದೆ.
Advertisement
88.2 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 272 ರನ್‍ಗಳಿಸಿ ಸಂಕಷ್ಟದಲ್ಲಿದ್ದಾಗ ಜೊತೆಯಾದ ಅಶ್ವಿನ್ ಮುರಿಯದ 7ನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. 407 ರನ್‍ಗಳ ಗುರಿಯನ್ನು ಬೆನ್ನೆಟ್ಟಿದ ಭಾರತ 131 ಓವರ್‍ಗಳಲ್ಲಿ 334 ರನ್‍ಗಳಿಗೆ 5 ವಿಕೆಟ್ ಕಳೆದೆÀಕೊಂಡಿದ್ದಾಗ ಡ್ರಾ ತೀರ್ಮಾನಕ್ಕೆ ಬರಲಾಯಿತು.
Advertisement
Advertisement
ಭಾರತಕ್ಕೆ ಐದನೇ ದಿನದಾಟ ಅಕ್ಷರಶಃ ಕಬ್ಬಿಣದ ಕಡಲೆಯಾಗಿತ್ತು. 9 ರನ್ ಹೊಡೆದ ಚೇತೇಶ್ವರ ಪೂಜಾರ ಮತ್ತು 4 ರನ್ ಹೊಡೆದಿದ್ದ ರಹಾನೆ ಐದನೇ ದಿನ ಬ್ಯಾಟಿಂಗ್ ಇಳಿದರು. ಆದರೆ ರಹಾನೆ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಇತ್ತ ಪೂಜಾರ ಮಾತ್ರ ಮತ್ತೆ ತಾನೂ ಟೆಸ್ಟ್ ಸ್ಪೆಷಲಿಸ್ಟ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
Advertisement
ರಹಾನೆ ಔಟ್ ಆದ ಬಳಿಕ ಬ್ಯಾಟಿಂಗ್ ಬಡ್ತಿ ಪಡೆದು ಬಂದ ರಿಷಬ್ ಪಂತ್ ಏಕದಿನ ಪಂದ್ಯಾಟದ ರೀತಿಯಲ್ಲಿ ಬ್ಯಾಟ್ ಬೀಸಿ 97 ರನ್ (118 ಎಸೆತ 12 ಬೌಡಂರಿ 3 ಸಿಕ್ಸರ್) ಸಿಡಿಸಿ ಪೂಜಾರ ಜೊತೆ 4 ನೇ ವಿಕೆಟ್ 148 ರನ್‍ಗಳ ಜೊತೆಯಾಟವಾಡಿದರು. ಪೂಜಾರ 77ರನ್ (205 ಎಸೆತ 12 ಬೌಡಂರಿ,) ಹೊಡೆದು ಭಾರತಕ್ಕೆ ಆಧಾರವಾದರೂ. ಶತಕದ ಹೊಸ್ತಿಲಿನಲ್ಲಿದ್ದ ಪಂತ್ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರೆ, ಅವರ ಬೆನ್ನಲ್ಲೇ ಪೂಜಾರ ಹ್ಯಾಝಲ್‍ವುಡ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರೂ ನಂತರ ಬಂದ ಅನುಮ ವಿಹಾರಿ 23 ರನ್ (161 ಎಸೆತ 4 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 39 ರನ್ (128 ಎಸೆತ 7 ಬೌಂಡರಿ) ಹೊಡೆದು ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು.