ಪಂತರಪಾಳ್ಯದಲ್ಲಿ 200 ಹಾಸಿಗೆಗಳ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗೆ ಸೋಮಣ್ಣ ಭೂಮಿಪೂಜೆ

Public TV
1 Min Read
somanna 3

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡಿನ ಪಂತರಪಾಳ್ಯದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ವಸತಿ ಸಚಿವ ವಿ.ಸೋಮಣ್ಣ ಇಂದು ಭೂಮಿಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

somanna 1 3 medium

ಈ ಆಸ್ಪತ್ರೆಯು 2.47 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದ್ದು, ನಾಲ್ಕು ಮಹಡಿಗಳ ಈ ಸುಸಜ್ಜಿತ ಆಸ್ಪತ್ರೆಯ ನೆಲ ಮಹಡಿಯಲ್ಲಿ ತುರ್ತು ವಿಭಾಗ, ಮೈನರ್ ಒಟಿ ಹಾಗೂ ರೆಡಿಯಾಲಜಿ ವಿಭಾಗ ಇರಲಿದೆ. ಮೊದಲನೇ ಮಹಡಿಯಲ್ಲಿ ಶಸ್ತ್ತ ಚಿಕಿತ್ಸಾ ಕೊಠಡಿ ಸೇರಿದಂತೆ ಮತ್ತಿತರ ಪ್ರಮುಖ ಸೌಲಭ್ಯಗಳಿರುತ್ತವೆ. ಎರಡನೆ ಮಹಡಿ ಐಸಿಯು ಹಾಸಿಗೆಗಳನ್ನು ಒಳಗೊಂಡಿರುತ್ತದೆ, ಮೂರು ಹಾಗೂ ನಾಲ್ಕನೆ ಮಹಡಿಗಳಲ್ಲಿ ತಲಾ 100 ಹಾಸಿಗೆಗಳ ಪ್ರತ್ಯೇಕ ಕೊಠಡಿಗಳು ಸಿದ್ಧವಾಗಲಿದ್ದು, ಈ ಭಾಗದ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಈ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಹೇಳಿದರು.

somanna 1 2 medium

ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರಾದ ಸವಿತಾ ಕೃಷ್ಣ, ಶಕುಂತಲ ದೊಡ್ಡಲಕ್ಕಪ್ಪ, ರಾಜೇಶ್ವರಿ ಬೆಳಗೋಡು ಮುಂತಾದವರು ಭಾಗವಹಿಸಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲು – ಸುಧಾಕರ್

somanna 1 1 medium

Share This Article
Leave a Comment

Leave a Reply

Your email address will not be published. Required fields are marked *