ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದ ಒಂದು ದಿನದಲ್ಲಿ 4 ನಿಗಮಗಳಿಗೆ ಕೋಟ್ಯಂತರ ರೂ. ನಷ್ಟವಾಗಲಿದೆ. ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.
ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು 2.5 ರಿಂದ 3 ಕೋಟಿ ರೂ. ಇದೆ. ಕೆಎಸ್‌ಆರ್‌ಟಿಸಿ ನಿತ್ಯದ ಆದಾಯ 7 ಕೋಟಿ ರೂ., ವಾಯುವ್ಯ ಸಾರಿಗೆಯ ಆದಾಯ 2 ಕೋಟಿ ರೂ., ಈಶಾನ್ಯ ಸಾರಿಗೆ ನಿಗಮದ ಪ್ರಸ್ತುತ ನಿತ್ಯದ ಆದಾಯ 2 ಕೋಟಿ ರೂ. ಇದೆ.
Advertisement
Advertisement
ಕೊರೊನಾದಿಂದ ಈಗಾಗಲೇ ಸಾರಿಗೆ ಇಲಾಖೆ ಮೊದಲೇ ನಷ್ಟದಲ್ಲಿದೆ. ಈಗ ಮುಷ್ಕರಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಲಿದೆ. ಸಾರಿಗೆ ಇಲಾಖೆ ಮಂಗಳವಾರವೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಇದ್ದರೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.