ನೋಡ ನೋಡುತ್ತಿದ್ದಂತೆ ಕಟ್ಟಡದ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದ – ಸಿಸಿಟಿವಿಯಲ್ಲಿ ದೃಶ್ಯ ಸೆರೆ

Public TV
1 Min Read
crime

ಗಾಂಧಿನಗರ: ಕಟ್ಟಡದ ಐದನೇ ಮಹಡಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ನೋಡ ನೋಡುತ್ತಿದ್ದಂತೆ ಕೆಳಗೆ ಬಿದ್ದಿದ್ದಾರೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

crime medium

ಬಿದ್ದ ವ್ಯಕ್ತಿಯನ್ನು ಕೇರಳ ಮೂಲದ 65 ವರ್ಷದ ಜೈಪ್ರಕಾಶ್ ಕೊಂಡಿಯಾರ ಎಂದು ಗುರುತಿಸಲಾಗಿದೆ. ಇವರು ಅಹಮದಾಬಾದ್‍ನ ಘಟ್ಲೋಡಿಯಾದ ಕೆಕೆಆರ್ ನಗರ ಪ್ರದೇಶದಲ್ಲಿರುವ ಸಮರ್ಪನ್ ಟವರ್ಸ್‍ನಲ್ಲಿ ವಾಸಿಸುತ್ತಿದ್ದರು.

ಈ ವ್ಯಕ್ತಿ ಕಟ್ಟಡದ ಮೇಲಿನ ಮಹಡಿಯ ತನ್ನ ಮನೆಯ ಬಾಲ್ಕನಿಯಲ್ಲಿ ನಿಂತಿದ್ದರು. ಈ ಸಂದರ್ಭ ಏಕಾಏಕಿ ಕೆಳಕ್ಕೆ ಬಿದ್ದಿದ್ದಾರೆ. ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ಅಲ್ಲೇ ಪಕ್ಕದಲ್ಲೇ ಇದ್ದ ಕಾವಲುಗಾರ ನೋಡಿದ್ದಾನೆ. ಆದರೆ ಈತ ಎಲ್ಲಿಂದ ಬಿದ್ದಿದ್ದಾನೆ ಎಂದು ತಿಳಿಯಲೆಂದು ಸಿಸಿಟಿವಿ ಗಮನಿಸಿದಾಗ ಐದನೇ ಮಹಡಿಯಿಂದ ಬಿದ್ದಿರುವುದು ಸೆರೆಯಾಗಿದೆ.

91

ಮಹಡಿಯಿಂದ ಬಿದ್ದ ಕೂಡಲೇ ಕಟ್ಟಡದ ಭದ್ರತಾ ಸಿಬ್ಬಂದಿ ಗಮನಿಸಿ 108 ಅಂಬುಲೆನ್ಸ್, ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ನಾವು ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದೇವೆ. ಇದರ ಕುರಿತು ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಘಟ್ಲೋಡಿಯಾದ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೊಂಡಿಯಾರ ಮೊಬೈಲ್ ಟವರ್‍ನ ವ್ಯವಹಾರದಲ್ಲಿ ತೊಡಗಿದ್ದರು. ಅವರ ಪತ್ನಿ ಭವಿಷ್ಯ ನಿಧಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬಾಕೆ ಕೆನಡಾದಲ್ಲಿದ್ದರೆ, ಇನ್ನೊಬ್ಬಳು ಅಹಮದಾಬಾದ್‍ನ ನರೋಡದಲ್ಲಿ ವಾಸಿಸುತ್ತಿದ್ದಾಳೆ.

crime

ಪೊಲೀಸರು ಹೇಳುವ ಪ್ರಕಾರ ಇದು ಆತ್ಮಹತ್ಯೆಯಾಗಿದ್ದು ಆ ವ್ಯಕ್ತಿ ಮಹಡಿಯಿಂದ ಬಿಳುವ ಮುನ್ನ ಒಂದು ಡೇತ್ ನೋಟ್ ಬರೆದಿರುವುದು ಸಿಕ್ಕಿದೆ. ಕೊಂಡಿಯಾರ ಮತ್ತು ಅವರ ಪತ್ನಿ ಜೊತೆ ಫ್ಲಾಟ್‍ನಲ್ಲಿ ವಾಸಿಸುತ್ತಿದ್ದರು. ಬೆಳಗ್ಗಿನ ಜಾವ 1 ಗಂಟೆ ಸುಮಾರಿಗೆ ಹಸಿವಾಗುದಾಗಿ ತಿಳಿಸಿ ಹೆಂಡತಿಯನ್ನು ಕರೆದ ಕಂಡಿಯಾರಗೆ ಬಡಿಸಿದ ನಂತರ ಅವರು ಮಲಗಿದ್ದಾರೆ. ಆದರೆ ಕಂಡಿಯಾರ ಟಿವಿ ನೋಡುತ್ತಿದ್ದರಂತೆ ನಂತರ ಕೆಲ ಸಮಯಗಳ ನಂತರ ಬಾಲ್ಕನಿಗೆ ತೆರಳಿ ಕೆಳಗೆ ಹಾರಿದ್ದಾರೆಂದು ಪೊಲೀಸ್ ಒಬ್ಬರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *