ಬೆಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತಕೊಂಂಡಿದ್ದು, ನೈಟ್ ನೈಟ್ ಕರ್ಫ್ಯೂ ಹಾಕಲಾಗುತ್ತಿದೆ. ರಾತ್ರಿ 10 ಗಂಟೆ ಬಳಿಕ ಸಂಚರಿಸುವ ವಾಹನಗಳನ್ನು ಸೀಜ್ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಪಂಥ್ ಹಾಗೂ ಜಂಟಿ ಆಯುಕ್ತ ರವಿಕಾಂತೇಗೌಡ, ರಾತ್ರಿ 9 ರಿಂದಲೇ ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಂಗಡಿ, ಮುಂಗಟ್ಟುಗಳನ್ನು ಸಮಯಕ್ಕೆ ಸರಿಯಾಗಿ ಬಂದ್ ಮಾಡಿದರೆ ಅವರ ಸಿಬ್ಬಂದಿ ಮನೆಗೆ ತೆರಳಲು ಅನುಕೂಲವಾಗುತ್ತದೆ. ಇಂದು ಸಂಜೆಯಿಂದಲೇ ಬಂದೋಬಸ್ತ್ ಕೈಗೊಳ್ಳಲಾಗುವುದು, ರಾತ್ರಿ 9 ರಿಂದ ನಮ್ಮ ಸಿಬ್ಬಂದಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸಲಿದ್ದಾರೆ. ಜನರನ್ನೂ ಸಹ ವಾಪಸ್ ಕಳುಹಿಸಲಿದ್ದಾರೆ. ಆದೇಶದಲ್ಲಿ ರಿಯಾಯಿತಿ ನೀಡಿದವರನ್ನು ಹೊರತುಪಡಿಸಿ ರಾತ್ರಿ 9ರ ಬಳಿಕ ಸಂಚರಿಸಲು ಯಾರಿಗೂ ಅವಕಾಶವಿಲ್ಲ. ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡಿ ದುರ್ವರ್ತನೆ ತೋರಬಾರದು ಎಂದು ಮನವಿ ಮಾಡಿದ್ದಾರೆ.
Advertisement
Advertisement
ನಾವು ಯಾರಿಗೂ ಪಾಸ್ ನೀಡುತ್ತಿಲ್ಲ. ಯಾರೂ ಪಾಸ್ ಕೇಳಲು ಆಗಮಿಸಬಾರದು. ರಸ್ತೆಗಳಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರಮುಖ ಮೇಲ್ಸೇತುವೆ, ರಸ್ತೆಗಳನ್ನು ಬಂದ್ ಮಾಡಲಾಗಿದೆ. ಆದೇಶದಲ್ಲಿ ತಿಳಿಸಿದಂತೆ ತುರ್ತು ಕಾರಣವಿದ್ದರೆ ಮಾತ್ರ ಹೊರಗಡೆ ಬರಬೇಕು. ರಾತ್ರಿ 10 ಗಂಟೆ ಬಳಿಕ ರಾತ್ರಿ ಯಾರೂ ಹೊರಗೆ ಬರಬಾರದು, ಅಷ್ಟರಲ್ಲಿ ಎಲ್ಲರೂ ಮನೆಯೊಳಗಿರಬೇಕು. ಅಂಗಡಿ, ಮುಂಗಟ್ಟು ಸೇರಿದಂತೆ ಇತರೆ ಸ್ಥಳಗಳನ್ನು ಬಂದ್ ಮಾಡಬೇಕು. ರಾತ್ರಿ 10ರೊಳಗೆ ಎಲ್ಲರೂ ಮನೆಯಲ್ಲಿರಬೇಕು, ಯಾರೂ ಹೊರಗಡೆ ಬರಬಾರದು ಎಂದು ಕಮಲ್ ಪಂಥ್ ಮನವಿ ಮಾಡಿದರು.
Advertisement
ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಿಸಲು ಅನುಮತಿ ಇದೆ. ಆದರೆ ಈ ಅವಕಾಶವನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕಮಲ್ ಪಂಥ್ ಮನವಿ ಮಾಡಿದರು.
Advertisement
ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮಾತನಾಡಿ, ರಾತ್ರಿ 9.50ಕ್ಕೆ ಎಲ್ಲ ಮೇಲ್ಸೇತುವೆ, ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಅಗತ್ಯ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಂಗಡಿಗಳನ್ನು ಬಂದ್ ಮಾಡುವವರು ಈ ಬಗ್ಗೆ ಯೋಚಿಸಬೇಕು, 10 ಗಂಟೆಗೆ ಅಂಗಡಿ ಬಂದ್ ಮಾಡುವುದಲ್ಲ, ಸಿಬ್ಬಂದಿ ಮನೆ ತೊಲುಪಲು ಎಷ್ಟು ಸಮಯ ಬೇಕು ಎಂಬುದನ್ನು ಅಂದಾಜಿಸಿ 10 ಗಂಟೆ ಒಳಗೆ ಅವರು ಮನೆ ತಲುಪುವಂತೆ ಕಳುಹಿಸಬೇಕು ಎಂದರು.
ಲಾಕ್‍ಡೌನ್ ಸಮಯದಲ್ಲಿ ಇದ್ದ ರೀತಿಯಲ್ಲೇ ಒಂದು ಬದಿಯ ರಸ್ತೆಯಲ್ಲಿ ಒಡಾಡೋದಕ್ಕೆ ಅವಕಾಶ ನೀಡಲಾಗುವುದು. ಅಗತ್ಯ ಸೇವೆ ವಾಹನಗಳನ್ನು ಬಿಡುತ್ತೇವೆ. ಅನವಶ್ಯಕವಾಗಿ ಸಂಚರಿಸುಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವೀಡಿಯೋ ವಾಲ್ ದಿನದ 24 ಗಂಟೆಯೂ ಕೆಲಸ ಮಾಡಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಬೈಕ್ ಗಳಿಗೆ ಮೀರರ್ ಹಾಗೂ ಇಂಡಿಕೇಟರ್ ಗಳು ಕಡ್ಡಾಯವಾಗಿದ್ದುಯ, ಹಾಕದೇ ಇರುವವಗೆ 500 ರೂಪಾಯಿ ದಂಡ ವಿಧಿಸಲಾಗುವುಯದು ಎಂದು ರವಿಕಾಂತೇಗೌಡ ತಿಳಿಸಿದರು. 1,500 ಪೊಲೀಸರು ಹಾಗೂ ಹೋಮ್ ಗಾರ್ಡ್ ಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.