ಹುಬ್ಬಳ್ಳಿ: ನೈಋತ್ಯ ರೈಲ್ವೆ ನೂತನ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ಅಧಿಕಾರ ಸ್ವೀಕರಿಸಿದ್ದಾರೆ.
ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಗಜಾನನ್ ಮಲ್ಯ ಅವರು ಕಳೆದ ಏಪ್ರಿಲ್ ನಿಂದ ಇಲ್ಲಿಯವರೆಗೆ ಹೆಚ್ಚುವರಿಯಾಗಿ ನೈಋತ್ಯ ರೈಲ್ವೆ ಹುದ್ದೆಯನ್ನು ನಿಭಾಯಿಸಿದ್ದರು. ಇದೀಗ ಸಂಜೀವ ಕಿಶೋರ್ ನೂತನ ಮಹಾಪ್ರಬಂಧಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Advertisement
ಕಿಶೋರ್ ಅವರು ಈಶಾನ್ಯ ರೈಲ್ವೆ, ರೈಲ್ ಕೋಚ್ ಫ್ಯಾಕ್ಟರಿ, ಕಪುರ್ಥಾಲಾ, ಸೆಂಟ್ರಲ್ ರೈಲ್ವೆ, ರೈಟ್ಸ್, ಕೋಫೋ, ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ, ನವದೆಹಲಿ, ರೈಲ್ವೆ ಮಂಡಳಿ ಮತ್ತು ರೈಲ್ವೆ ವೀಲ್ ಫ್ಯಾಕ್ಟರಿ, ಯಲಹಂಕದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಶ್ರೇಷ್ಠ ಸೇವೆಗಾಗಿ 2003ರಲ್ಲಿ ರಾಷ್ಟ್ರೀಯ ಪ್ರಶಸ್ತಿ (ರೈಲ್ವೇಸ್ ಮಂತ್ರಿ ಪ್ರಶಸ್ತಿ) ಪಡೆದಿದ್ದಾರೆ.
Advertisement
Advertisement
ಇನ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್ ಇಂಡಿಯಾ ಮತ್ತು ಯುನೈಟೆಡ್ ಕಿಂಗ್ಡಂನ ಇನ್ಸಿಟ್ಯೂಷನ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ ಫೆಲೋಶಿಪ್ ಸಹ ಕಿಶೋರ್ ಸಂಜೀವ ಪಡೆದಿದ್ದಾರೆ.