– ಕೊಲೆ ಎಂದು ಗಂಭೀರ ಆರೋಪ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಇಂದು ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತ ಶಾಸಕರನ್ನು ದೇವೆಂದ್ರನಾಥ್ ರೇ ಎಂದು ಗುರುತಿಸಲಾಗಿದೆ. ತಮ್ಮ ಮನೆಯಿಂದ 1 ಕಿ.ಮೀ ದೂರದಲ್ಲಿರುವ ಮಾರ್ಕೆಟ್ ನಲ್ಲಿ ಶಾಸಕರ ಮೃತದೇಹ ಪತ್ತೆಯಾಗಿದೆ. ಅದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸುತ್ತಿದೆ.
Advertisement
Body of Debendra Nath Ray, BJP MLA from Hemtabad, a reserved seat, in Uttar Dinajpur, was found hanging in Bindal near his village home. People are of the clear opinion that he was first killed and then hung: BJP West Bengal
— ANI (@ANI) July 13, 2020
Advertisement
ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶಾಸಕರ ಮನೆಗೆ ಕೆಲವು ಮಂದಿ ಬಂದಿದ್ರು. ಅಲ್ಲದೆ ಅವರನ್ನು ಬಲವಂತವಾಗಿ ಮನೆಯಿಂದ ಹೊರಬರುವಂತೆ ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಶೀಘ್ರವೇ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
Advertisement
We demand CBI inquiry into the killing of BJP MLA from Hemtabad, Debendra Nath Ray. Trinamool Congress is behind this killing and has made it look like a suicide. I request West Bengal CM to order CBI inquiry to find the truth behind the killing: BJP leader Rahul Sinha pic.twitter.com/b6q41zVwSp
— ANI (@ANI) July 13, 2020
Advertisement
ಇಂದು ಬೆಳಗ್ಗೆ ಸ್ಥಳೀಯರು ನೇಣುಬಿಗಿದ ಸ್ಥಿತಿಯಲ್ಲಿದ್ದ ಶಾಸಕರನ್ನು ಕಂಡು ಗಾಬರಿಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇತ್ತ ಬಿಜೆಪಿಯೂ ನಮ್ಮ ಶಾಸಕರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಅಲ್ಲದೆ ಈ ಸಂಬಂಧ ಬಿಜೆಪಿ ಮುಖಂಡರೊಬ್ಬರು ಟ್ವೀಟ್ ಮಾಡಿ, ಬಂಗಾಳದಲ್ಲಿ ಬಿಜೆಪಿ ನಾಯಕರ ಹತ್ಯೆಗೆ ಅಂತ್ಯ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ದೇವೇಂದ್ರನಾಥ್ ರೇ ಅವರು 2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಆ ಬಳಿಕ ಅಂದರೆ ಕಳೆದ ವರ್ಷ ಲೋಕಸಭಾ ಚುನಾವಣೆಯ ನಂತರ ಅವರು ಬಿಜೆಪಿ ಸೇರಿದ್ದರು.
The suspected heinous killing of Debendra Nath Ray, BJP MLA from Hemtabad in West Bengal, is extremely shocking and deplorable. This speaks of the Gunda Raj & failure of law and order in the Mamta govt: BJP President JP Nadda https://t.co/0RU3bsqSlS pic.twitter.com/BysWRgMMST
— ANI (@ANI) July 13, 2020