ನೂರಕ್ಕೆ ನೂರರಷ್ಟು ಮನೆ ಹಾಳು ಕೆಲಸ ಮಾಡಿದ್ದು ಕಾಂಗ್ರೆಸ್: ಎಸ್.ಟಿ.ಸೋಮಶೇಖರ್ ಆರೋಪ

Public TV
2 Min Read
S T Somashekhar 2

– ಮಾಜಿ ಸಚಿವರ ರಾಸಲೀಲೆ ವೀಡಿಯೋ ಪ್ರಕರಣ
– ಮುಂಬೈ ಟೀಂನ ಸಚಿವರನ್ನ ಟಾರ್ಗೆಟ್ ಮಾಡಲಾಗ್ತಿದೆ
– ರಕ್ಷಣೆ ಕೇಳಿ ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಾ?

ಬೆಂಗಳೂರು: ಸಿಡಿ ಬಿಡುಗಡೆ ಮಾಡುವ ಮನೆ ಹಾಳು ಕೆಲಸವನ್ನ ಮಾಡಿದ್ದು ನೂರಕ್ಕೆ ನೂರರಷ್ಟು ಕಾಂಗ್ರೆಸ್ ಎಂದು ಸಚಿವ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

ನಮ್ಮನ್ನ ಟಾರ್ಗೆಟ್ ಮಾಡಲಾಗ್ತಿದೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರ ರಾಸಲೀಲೆ ವಿರುದ್ಧ ದಾಖಲಾದ ದೂರು ವಾಪಸ್ ಪಡೆದರು. ಆದ್ರೆ ಹೋದ ಗೌರವ ಮತ್ತೆ ಹಿಂದಿರುಗುತ್ತಾ? ಇಡೀ ರಾಜ್ಯದ ಜನತೆಯ ಮೊಬೈಲ್ ನಲ್ಲಿ ವೀಡಿಯೋ ಹರಿದಾಡಿತು. ದೆಹಲಿ ಮಟ್ಟದ ಎಷ್ಟೋ ಜನರು ಸಹ ಬೇಲ್ ಮೇಲೆ ಹೊರಗಿದ್ದಾರೆ. ಅವರೆಲ್ಲ ತಪ್ಪು ಮಾಡಿದ್ದಾರೆ ಎಂದರ್ಥ ಅಲ್ಲ. ಉದ್ದೇಶಪೂರ್ವಕವಾಗಿ ನಮ್ಮನ್ನ ಗುರಿಯಾಗಿಸಿ ತೇಜೋವಧೆಗೆ ಮುಂದಾಗುವ ಮಾಹಿತಿ ಲಭ್ಯವಾಗಿದ್ದರಿಂದ ಕೋರ್ಟ್ ಮೊರೆ ಹೋಗಿದ್ದೇವೆ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಅವಕಾಶ ಬಳಸಿಕೊಂಡಿದ್ದೇವೆ. ಬೇರೆ ರೀತಿ ರಾಜಕೀಯ ದ್ವೇಷ ಸಾಧಿಸಿದ್ರೂ ಅದನ್ನೆಲ್ಲ ನಾವು ಎದುರಿಸಲು ಸಿದ್ಧವಿದ್ದೇವೆ.

S T Somashekhar 1

ಕೋರ್ಟಿಗೆ ಹೋಗಿದ್ದು ತಪ್ಪಾ?: ನಮ್ಮನ್ನು ಕೇಳುವ ನೈತಿಕತೆ ಅವರಿಗಿಲ್ಲ. ಅವರ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ಸಮ್ಮಿಶ್ರ ಸರ್ಕಾರ ಆಗಿದ್ದೆ ನಾಯಕರು ಅನೈತಿಕ ಒಪ್ಪಂದದಿಂದ ಆಗಿದ್ದೆರಿಂದ ಮೈತ್ರಿ ಮುರಿದು ಬಿತ್ತು. ಮುಂಬೈಗೆ ಹೋಗಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ವಿಷಯ ತಿಳಿದಾಗ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಆದ್ರೆ ಮಾಧ್ಯಮಗಳಲ್ಲಿ ಈ ವಿಷಯವೇ ಬೇರೆ ರೂಪ ಪಡೆದುಕೊಂಡಿತು. ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಾ ಎಂದು ಎಸ್‍ಟಿಎಸ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

S T Somashekhar 2

ಕಾಂಗ್ರೆಸ್‍ನವರಿಂದ ಸಿಡಿ ಕೆಲಸ: ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್‍ನವರೇ ಮಾಡಿದ್ದಾರೆ. ಇದನ್ನೂ ಓದಿ: ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

ಈಗಾಗಲೇ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಬಿಐ ತನಿಖೆ ಆಗಲಿ ಅನ್ನೋದು ಬೇಡಿಕೆ. ಇಂದು ಸಂಜೆಯೊಳಗೆ ತನಿಖೆ ಕುರಿತಾಗಿ ಆದೇಶ ಪ್ರಕಟವಾಗಲಿದೆ. ತನಿಖೆ ಆದ್ರೆ ಯಾರೆಲ್ಲ ಮಿಕ್ಸ್ ಮಾಡಿದ್ದಾರೆ? ಯಾರು ಇದ್ದಾರೆ ಅನ್ನೋದು ತಿಳಿಯಲಿದೆ ಎಂದರು. ಇದನ್ನೂ ಓದಿ: ಕಷ್ಟಪಟ್ಟು ಮೇಲೆ ಬಂದವರ ವಿರುದ್ಧ ಷಡ್ಯಂತ್ರ ಅಂದ್ರು ಬಿ.ಸಿ.ಪಾಟೀಲ್

Share This Article
Leave a Comment

Leave a Reply

Your email address will not be published. Required fields are marked *