ಚಿಕನ್ ಎಂದರೆ ಮಾಂಸ ಪ್ರಿಯರಿಗೆ ಬಾಯಲ್ಲಿ ನೀರುಬರುತ್ತದೆ. ವೀಕೆಂಡ್ನಲ್ಲಿ ಮಾಂಸದ ಊಟ ಮಾಡದೇ ಇರಲು ಸಾಧ್ಯವಿಲ್ಲ. ಹೀಗಾಗಿ ನೀವು ಹೋಟೆಲ್ ರುಚಿಕೊಡುವ ಚಿಕನ್ ಕುರ್ಮವನ್ನು ಮನೆಯಲ್ಲಿಯೇ ಮಾಡುವ ವಿಧಾನ ಇಲ್ಲಿದೆ..
Advertisement
ಬೇಕಾಗುವ ಸಾಮಗ್ರಿಗಳು:
* ಚಿಕನ್- ಒಂದು ಕೆ.ಜಿ
* ಈರುಳ್ಳಿ- 4 ರಿಂದ 5
* ಎಣ್ಣೆ- 1ಕಪ್
* ಗೋಡಂಬಿ 5
* ಶುಂಠಿ, ಬೆಳ್ಳುಳ್ಳಿ ಪೇಸ್ಟ್
* ಏಲಕ್ಕಿ -4 ರಿಂದ 5
* ಕೊತ್ತಂಬರಿ ಪುಡಿ – 2 ಟೀ ಸ್ಪೂನ್
* ಕಾಳು ಮೆಣಸು – 4 ಕಾಳು
* ಒಂದು ಇಂಚಿನ ಚಕ್ಕೆ
* ಟೋಮ್ಯಾಟೋ- 2
* ಜೀರಿಗೆ ಪುಡಿ- 1 ಟೀ ಸ್ಪೂನ್
* ಒಣ ಮೆಣಸು- 3 ರಿಂದ4
* ರುಚಿಗೆ ತಕ್ಕಷ್ಟುಉಪ್ಪು
* ಖಾರದ ಪುಡಿ- 1 ಟೀ ಸ್ಪೂನ್
* ಲವಂಗದ ಎಲೆ-2
* ಮೊಸರು- 1 ಕಪ್
* ಕೊತ್ತಂಬರಿ ಸೊಪ್ಪು ಇದನ್ನೂ ಓದಿ: ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ
Advertisement
Advertisement
ಮಾಡುವ ವಿಧಾನ:
* ಮೊದಲು ಚಿಕನ್ಗೆ ನೀರು ಹಾಕಿ ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿಣದೊಂದಿಗೆ ಕಲಸಿಟ್ಟಿರಬೇಕು.
Advertisement
* ನಂತರ ಈರುಳ್ಳಿ, ಟೊಮ್ಯಾಟೋವನ್ನು ಕತ್ತರಿಸಿಕೊಳ್ಳಿ. ಆ ಬಳಿಕ 20 ಗೋಡಂಬಿ ಮೊಸರಿನೊಂದಿಗೆ ಸೇರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.
* ಗ್ಯಾಸ್ ಮೇಲೆ ಒಂದು ಪಾತ್ರೆಯನ್ನಿಟ್ಟು ಅದಕ್ಕೆ ಒಂದು ಕಪ್ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಕತ್ತರಿಸಿಕೊಂಡ ಈರಳ್ಳಿಯನ್ನು ಹಾಕಿ ಕಂದು ಬಣ್ಣ ಆಗುವವರೆಗೂ ಫ್ರೈ ಮಾಡಿ.
* ಈರುಳ್ಳಿ ಕಂದು ಬಣ್ಣ ಬಂದ ನಂತರ ಅದನ್ನು ಎಣ್ಣೆಯಿಂದ ಹೊರಗೆ ತೆಗೆಯಿರಿ. ಅದೆ ಎಣ್ಣೆಗೆ ಲವಂಗ ಎಲೆ, ಏಲಕ್ಕಿ, ಚಕ್ಕೆ, ಒಣ ಮೆಣಸು, ಕಾಳು ಮೆಣಸು ಜೀರಿಗೆ ಸೇರಿಸಿ ಫ್ರೈ ಮಾಡಿ. ಸ್ವಲ್ಪ ಈರುಳ್ಳಿ, ಒಣ ಮೆಣಸು, ಟೋಮ್ಯಾಟೋ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹಾಕಿ. ಇದಕ್ಕೆ ಕೊತ್ತಂಬರಿ ಪುಡಿ ಸೇರಿದಂತೆ ತಿಳಿಸಿದ ಎಲ್ಲ ಮಸಾಲೆಗಳನ್ನು ಹಾಕಬೇಕು.
* ಮಾಂಸ ಬೇಯುವಾಗ ಅದಕ್ಕೆ ಮೊಸರು, ಗೋಡಂಬಿಯನ್ನು ನಿಧಾನವಾಗಿ ಸೇರಿಸಿ 3 ರಿಂದ 4 ನಿಮಿಷ ಹಾಗೆ ಬಿಡಿ. ಆಮೇಲೆ ಫ್ರೈ ಮಾಡಿಕೊಂಡ ಈರುಳ್ಳಿಯನ್ನು ಹಾಕಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಕುರ್ಮಾ ಅವಿಯಲು ಸಿದ್ಧವಾಗುತ್ತದೆ.