ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಡ್ಡೆಗಳ ಎದೆಬಡಿತ ಹೆಚ್ಚಿಸಿವೆ.
ಬ್ಯಾಕ್ ಲೇಸ್ ಟಾಪ್ ಹಾಕಿರುವ ಜಾಕ್ವೆಲಿನ್ ಹಾಟ್ ಆಗಿ ಫೋಸ್ ಕೊಟ್ಟಿರುವ ಫೋಟೋಗೆ ನೀವು ಕೆಟ್ಟವರಲ್ಲ, ಸಮಾಜ ಕೆಟ್ಟದ್ದು, ಎಂದು ಈ ಫೋಟೋಗೆ ಜಾಕ್ವೆಲಿನ್ ಕ್ಯಾಪ್ಷನ್ ನೀಡಿ ಹಾಟ್ ಆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.
View this post on Instagram
ಇನ್‍ಸ್ಟಾಗ್ರಾಮ್‍ನಲ್ಲಿ ಈ ಫೋಟೋವನ್ನು ಅಧಿಕ ಜನರು ಲೈಕ್ ಮಾಡಿದ್ದಾರೆ. ಸಾವಿರಾರೂ ಕಮೆಂಟ್‍ಗಳು ಬಂದಿವೆ. ಈ ಫೋಟೋಗೆ ನೀಡಿರುವ ಕ್ಯಾಪ್ಷನ್ ಕೌತುಕಕ್ಕೆ ಕಾರಣ ಆಗಿದೆ. ಅದರ ಹೊರತಾಗಿ ಈ ಫೋಟೋಶೂಟ್ ಬಗ್ಗೆ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
View this post on Instagram
ಸ್ಯಾಂಡಲ್‍ವುಡ್‍ನ ಅತ್ಯಂತ ನೀರಿಕ್ಷೆಯ ಸಿನಿಮಾವಾಗಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ವೆಲಿನ್ ಅವರು ವಿಶಿಷ್ಟ, ಮತ್ತು ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಜಾಕ್ವೆಲಿನ್ ಕಾಣಿಸಿಕೊಳ್ಳುತ್ತಿರುವ ಹಾಡಿನ ಚಿತ್ರೀಕರಣವನ್ನು ಇತ್ತೀಚೆಗೆ ಮುಗಿಸಿದ್ದಾರೆ.
ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್‍ನಲ್ಲಿ ಭಾಗವಹಿಸಿದ ಬಳಿಕ ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜಾಕ್ವೆಲಿನ್ ಖುಷಿ ಹಂಚಿಕೊಂಡಿದ್ದರು. ನಿರ್ದೇಶಕ ಅನೂಪ್ ಭಂಡಾರಿಯ ಕಾರ್ಯವೈಖರಿಗೆ ಅವರು ಮೆಚ್ಚುಗೆ ಸೂಚಿಸಿದ್ದರು. ಖಂಡಿತವಾಗಿಯೂ ವಿಕ್ರಾಂತ್ ರೋಣ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರಲಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ.