ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಕೋರ್ಟ್ ಅನುಮತಿ

Public TV
2 Min Read
nirav modi 1

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆಗೈದು ಪರಾರಿಯಾಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯುಕೆಯ ಲಂಡನ್‍ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ಕೋರ್ಟ್ ಅನುಮತಿ ನೀಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಬರೋಬ್ಬರು 14 ಸಾವಿರ ಕೋಟಿ ರೂ.ಗಳನ್ನು ವಂಚನೆ ಹಾಗೂ ಅಕ್ರಮ ಹಣಕಾಸು ಪ್ರಕರಣದಲ್ಲಿ ಅಪರಾಧಿಯಾಗಿರುವ ಚಿನ್ನಾಭರಣ ವ್ಯಾಪಾರಿ ನೀರವ್ ಮೋದಿ(49) ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಇಂದು ತನ್ನ ಆದೇಶವನ್ನು ಪ್ರಕಟಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ)ಗೆ 13,500 ಕೋಟಿಯನ್ನು ವಂಚನೆ ಮಾಡಿ ದೇಶ ಬಿಟ್ಟು ಓಡಿ ಹೋಗಿರುವ ಉದ್ಯಮಿ ನೀರವ್ ಮೋದಿಯನ್ನು ಯುಕೆ ಪೊಲೀಸರು ಬಂಧಿಸಿದ್ದರು. ನೀರವ್ ಮೋದಿ ಅಪರಾಧಿಯಾಗಿದ್ದು, ಶಿಕ್ಷೆಗೊಳಪಡಿಸಬಹುದು ಎಂಬುದಕ್ಕೆ ಭಾರತ ಸರ್ಕಾರ ನೀಡಿದ ಸಾಕ್ಷ್ಯಗಳಿಗೆ ನನಗೆ ತೃಪ್ತಿ ಇದೆ ಎಂದು ಜಡ್ಜ್ ಹೇಳಿದ್ದಾರೆ.

ನೈಋತ್ಯ ಲಂಡನ್‍ನ ವಾಂಡ್ಸ್ ವರ್ತ್ ಜೈಲಿನಿಂದ ನೀರವ್ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ. ವೆಸ್ಟ್‍ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‍ನ ಡಿಸ್ಟ್ರಿಕ್ಟ್ ಜಡ್ಜ್ ಸ್ಯಾಮ್ಯುಯೆಲ್ ಗೂಜಿ ತೀರ್ಪು ಪ್ರಕಟಿಸಿದರು.

Nirav Modi 1 0

ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಆರೋಪಿ ನೀರವ್ ಮೋದಿ ಲಂಡನ್ ನ್ಯಾಯಾಲಯದಲ್ಲಿ ಈ ಹಿಂದೆ ಹೇಳಿದ್ದ.

ಜಾಮೀನಿಗಾಗಿ ಹೊಸ ಅರ್ಜಿ ಸಲ್ಲಿಸಿದ್ದ ನೀರವ್ ಮೋದಿ ಭದ್ರತಾ ಠೇವಣಿಗಾಗಿ 18.28 ಕೋಟಿ ರೂ. ಬದಲಾಗಿ 36.57 ಕೋಟಿ ರೂ. ಇರಿಸುತ್ತೇನೆ. ನನ್ನನ್ನು ಗೃಹ ಬಂಧನದಲ್ಲಿ ಇಡುವಂತೆ ಆದೇಶಿಸಿ ಎಂದು ಮನವಿ ಮಾಡಿದ್ದ. ಆದರೆ ಕೋರ್ಟ್ ನಾಲ್ಕನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದ್ದರಿಂದ ನೀರವ್ ಮೋದಿ ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.

pnb 660 052218074928

ಪಿಎನ್‍ಬಿ ಬ್ಯಾಂಕ್ ನಲ್ಲಿ ಸಾಲ ಪಡೆದು ವಂಚಿಸಿರುವ ಪ್ರಕರಣದಲ್ಲಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಮುಖ್ಯ ಅಪರಾಧಿಗಳಾಗಿದ್ದು, ಈ ಹಗರಣ ಬೆಳಕಿಗೆ ಬರುವ ಮುನ್ನವೇ ಇವರಿಬ್ಬರು ಭಾರತ ಬಿಟ್ಟು ಓಡಿಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 49 ವರ್ಷದ ನೀರವ್ ಮೋದಿಯನ್ನು 2019ರ ಮಾರ್ಚ್ 19 ರಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ಬಂಧಿಸಿ, ಲಂಡನ್‍ನ ವಾಂಡ್ಸ್‍ವರ್ತ್ ಜೈಲಿನಲ್ಲಿ ಇರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *