ನೀನು ಯಾರ್ ಗುರು, ನೀನಂತೂ ಘನಘೋರ: ಚಕ್ರವರ್ತಿ ಚಂದ್ರಚೂಡ್

Public TV
2 Min Read
chakravarthy

ಮನೆಯಲ್ಲೀಗ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ. ಪ್ರಶಾಂತ್ ಸಂಬರಗಿ ಕಂಡರೆ ಕೆಲವರಂತೂ ಉರಿದು ಬೀಳ್ತಾರೆ. ಪ್ರಶಾಂತ್ ಸಂಬರಗಿ ಸುಳ್ಳು, ಮುಂದಾಲೋಚನೆ,  ಮಾತಿನ ದಾಟಿ, ಅವರು ಬಳಸುವ ಶಬ್ದಗಳು ಕೂಡ ಸ್ಪರ್ಧಿಗಳಿಗೆ ಸಿಟ್ಟು ತರಿಸುತ್ತವೆ. ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಮಧ್ಯೆ ಅನೇಕ ಬಾರಿ ಮಾತಿನ ಚಕಮಕಿ ನಡೆದಿದೆ. ಈ ಕುರಿತಾಗಿ ಚಕ್ರವರ್ತಿ ಮತ್ತು ಸಂಬರಗಿ ಮಾತನಾಡಿದ್ದಾರೆ.

chakravarthy2

ಅಡುಗೆ ಮನೆಯಲ್ಲಿ ಅಕ್ಕಿ ರೊಟ್ಟಿ ರೆಡಿಯಾಗುತ್ತಿತ್ತು. ದಿವ್ಯಾ ಉರುಡುಗ ರೊಟ್ಟಿ ತಟ್ಟುವ ಪ್ರಯತ್ನದಲ್ಲಿದ್ದರು. ಪ್ರಶಾಂತ್ ಸಂಬರಗಿ ಅವರು ದಿವ್ಯಾಗೆ ಎಣ್ಣೆ ಹಚ್ಚಿಕೊಂಡು ರೊಟ್ಟಿ ತಟ್ಟಿ ಅಂತ ಹೇಳಿದ್ದಾರೆ. ಅದನ್ನು ಕೇಳಿದ ದಿವ್ಯಾ ಉರುಡುಗ ಸುಮ್ಮನೆ ಹೇಳೋಕೆ ಬರಬೇಡಿ, ಅಕ್ಕಿ ರೊಟ್ಟಿ ಎಣ್ಣೆ ಹಾಕಿಕೊಂಡು ತಟ್ಟಿ ಅಂತ ಹೇಳಿದ್ದಕ್ಕೆ ಬುರುಡೆ ಬಿಡಬೇಡಿ ಅಂತ ದಿವ್ಯಾ ಉರುಡುಗ ಹೇಳಿದ್ದಾರೆ. 10 ನಿಮಿಷದ ಹಿಂದೆ ನಾನು ಅವಳ ಹತ್ರ ಒಳ್ಳೆಯದಾಗಲಿ ಅಂತ ಹೇಳಿದ್ದೆ. ಹೆಂಗಿರತ್ತೆ ಕೋಪ? ಮುಖವಾಡ ಹಾಕಿಕೊಂಡು ಬದುಕ್ತಾರೆ. ಅರವಿಂದ್ ಆಯ್ಕೆಯಾಗಿದ್ದು ಒಳ್ಳೆಯ ದೃಷ್ಟಿಯಿಂದ ಎನ್ನುವ ಮೆಸೇಜ್ ಎಲ್ಲ ಕಡೆ ಹೋಗ್ತಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಚರ್ಚೆ ಮಾಡಿದ್ದಾರೆ.

 ನೀನು ಯಾರ್ ಗುರು, ನೀನಂತೂ ಘನಘೋರ. ಎಷ್ಟುಸಲ ಅಂತ ಆ ಹುಡುಗಿ ಹತ್ರ ಹೇಳ್ತ್ಯ. ಅರವಿಂದ್, ಮಂಜು ಬಗ್ಗೆ ಮಾತನಾಡಿದ್ರೆ ದಿವ್ಯಾ ಕೆಟ್ಟದಾಗಿ ಮಾತನಾಡ್ತಾಳೆ. ಇದು ಗೊತ್ತಿರುವ ವಿಷಯ, ನೀನು ಯಾಕೆ ತಲೆ ಸವರೋಕೆ ಹೋಗ್ತೀಯಾ? ನೀನು ಹೋದ ಸಲ ದೇವರ ತರ ತಂಗಿ ಅಂದಿದೀನಿ, ಪಾದಪೂಜೆ ಮಾಡೋದೊಂದು ಬಾಕಿ ಅಂತ ಅಂದಿದ್ದೀಯ. ಆದರೂ ಇಂಟರ್ಯಾಕ್ಷನ್ ಇಲ್ಲ. ಅಷ್ಟೆಲ್ಲ ಮುದ್ದು ಮಾಡಬೇಡ ಅಂತ ಹೋದ ವಾರ ಹೇಳಿದ್ದೆ. ಹೆಣ್ಣುಮಕ್ಕಳ ವಿರುದ್ಧ ಮಾತನಾ ಮತ್ತೆ ಮಾತನಾಡೋಕೆ ಬಂದ ಅಂತ ಹೇಳ್ತಾರೆ. ನಾನು ಶುಭ, ನಿಧಿ ಹತ್ರ ಜಾಸ್ತಿ ಮಾತನಾಡಲ್ಲ. ಎಲ್ಲರ ಹತ್ರ ಗುಡ್‍ನೈಟ್, ಗುಡ್ ಮಾನಿರ್ಂಗ್ ಅಂತಷ್ಟೇ ಹೇಳ್ತೀನಿ. ಕೆಟ್ಟ ಮಹಿಳೆಯರನ್ನು ನಾನು ಗೌರವಿಸಲ್ಲ. ಗಂಡಿಗಿಂತ ಹೆಣ್ಣು ಕೆಟ್ಟರೆ ಭಾರೀ ಕಷ್ಟ. ಪ್ರಿಯಾಂಕಾ ಕೂತಿದ್ದ ಕಡೆ ನಾವು ಹೋಗಬೇಕು, ನಾವು ಕೂತಿದ್ದ ಕಡೆ ಬರಲ್ಲ. ಆಟಿಡ್ಯೂಡ್ ಇದೆ ಅವಳಿಗೆ ಎಂದು ಮನೆಮಂದಿ ಬಗ್ಗೆ ಕೆಲವು ವಿಚಾರಗಳನ್ನು ಚಕ್ರವರ್ತಿ ಮತ್ತು ಪ್ರಶಾಂತ್ ಮಾತನಾಡುತ್ತಾ ಬೇಸರವ್ಯಕ್ತ ಪಡಿಸುತ್ತಿದ್ದಾರೆ.

ಮನೆಯಲ್ಲಿ ಕೆಲವು ಗುಂಪುಗಳಾಗಿವೆ. ಅವರು ಅವರದ್ದೇ ಗುಂಪಿನಲ್ಲಿ ಮನೆ ಮಂದಿಯ ಕುರಿತಾಗಿ ಮಾತನಾಡಿಕೊಳ್ಳುತ್ತಾರೆ. ಬಿಗ್‍ಬಾಸ್ ಮನೆಯಲ್ಲಿ ಮುಂದೆ ಏನೇಲ್ಲಾ ಹೊಸ ವಿಚಾರಗಳು ನಡೆಯಲಿದೆ. ಪ್ರಶಾಂತ್ ಸಂಬರಗಿ ಹೇಗೆ ಆಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *