ಬೆಂಗಳೂರು: ಕೇವಲ ಸಂಗೀತ ನಿರ್ದೇಶಕರು ಮಾತ್ರವಲ್ಲ. ತಮ್ಮ ಸಿನಿಮಾಗಳ ಹಾಡುಗಳಿಗೆ ಬಾಲು ಕಂಠ ಕಡ್ಡಾಯವಾಗಿ ಬೇಕೇಬೇಕು ಎಂದು ಖ್ಯಾತ ಸಿನಿಮಾ ನಟರು ಪಟ್ಟು ಹಿಡಿದು ಕುಳಿತುಕೊಳ್ಳುತ್ತಿದ್ದರು. ಬಾಲು ಧ್ವನಿಗಾಗಿ ತಿಂಗಳುಗಟ್ಟಲೇ ಕಾದಿದ್ದು ಉಂಟು.
ಕನ್ನಡದಲ್ಲಿ ಶ್ರೀನಾಥ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‍ನಾಗ್, ಅನಂತ್‍ನಾಗ್, ರವಿಚಂದ್ರನ್ ಸಿನಿಮಾಗಳಲ್ಲಿ ಬಾಲು ಹಾಡುಗಳು ಇರಲೇಬೇಕಿತ್ತು. ತೆಲುಗಿನಲ್ಲಿ ಎನ್‍ಟಿಆರ್, ಎಎನ್‍ಆರ್,ಕೃಷ್ಣ, ಶೋಭನ್ ಬಾಬು, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ತಮಿಳಿನಲ್ಲಿ ಎಂಜಿಆರ್, ಶಿವಾಜಿಗಣೇಶನ್, ಕಮಲ್ ಹಾಸನ್, ರಜಿನಿಕಾಂತ್ ಅವರ ಸಿನಿಮಾಗಳಿಗೂ ಎಸ್‍ಪಿಬಿ ಗಾಯನ ಕಡ್ಡಾಯವಾಗಿದ್ದ ಕಾಲವೊಂದಿತ್ತು. ಇದನ್ನೂ ಓದಿ: ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದ ಬಾಲುಗೆ ಪ್ರಶಸ್ತಿ ಸಿಕ್ಕಿತ್ತು
Advertisement
Advertisement
ರಾಜ್‍ಕುಮಾರ್, ಶಿವರಾಜ್‍ಕುಮಾರ್ ಸಿನಿಮಾಗಳಲ್ಲೂ ಎಸ್‍ಪಿಬಿ ಹಾಡಿದ್ರು. ಎಷ್ಟೋ ದಿನಗಳು, ಮನೆಗೆ ಹೋಗಲಾಗದೇ ಬರೀ ವಿಮಾನ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಓಡಾಡುತ್ತಾ ಬ್ಯುಸಿ ಇದ್ದ ದಿನಗಳು ಇವೆ. ಒಂದೇ ದಿನದಲ್ಲಿ 10ರಿಂದ 15 ಹಾಡುಗಳನ್ನು ಹಾಡಿದ ಗರಿಮೆ ಕೇವಲ ಎಸ್ಪಿಬಿಗೆ ಮಾತ್ರ ದಕ್ಕುತ್ತದೆ. ಜೊತೆಗೆ ಒಂದೇ ಕುಟುಂಬದ ಮೂರು ತಲೆಮಾರುಗಳ ನಟರಿಗೆ ಹಾಡು ಹಾಡಿದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.
Advertisement
Advertisement
ತಮ್ಮ ಕಾಲಾವಧಿಯ ಖ್ಯಾತನಾಮ ಸಂಗೀತ ನಿರ್ದೇಶಕರೊಂದಿಗೆ ಹಾಡುವ ಅವಕಾಶ ಎಸ್‍ಪಿಬಿಗೆ ಸಿಕ್ಕಿತ್ತು. 1969ರಿಂದಲೇ ಬಾಲು ಫುಲ್ ಬ್ಯುಸಿ ಆದರು. ಪೆಂಡ್ಯಾಲ, ಎಂಎಸ್ ವಿಶ್ವನಾಥನ್, ಕೆವಿ ಮಹದೇವನ್, ಇಳಯರಾಜ, ಜಿಕೆ ವೆಂಟಕೇಶ್, ಚಕ್ರವರ್ತಿ, ರಾಜನ್-ನಾಗೇಂದ್ರ, ರಾಜ್-ಕೋಟಿ, ಕೀರವಾಣಿ, ಹಂಸಲೇಖ ಅವರಂತಹ ನಿರ್ದೇಶಕರ ಸಾರಥ್ಯದಲ್ಲಿ ಕೆಲವು ಸಾವಿರದಷ್ಟು ಮರೆಯಲಾಗದ ಹಾಡುಗಳನ್ನು ಬಾಲು ಹಾಡಿದ್ರು. ಇತ್ತೀಚಿನ ಸಂಗೀತ ನಿರ್ದೇಶಕರ ಜೊತೆಗೂ ಎಸ್‍ಪಿಬಿ ಕೆಲಸ ಮಾಡಿದ್ದರು.