ಹುಬ್ಬಳ್ಳಿ: ಪಬ್ಲಿಕ್ ಟಿವಿಯ ನಿರೂಪಕ ಅರುಣ್ ಬಡಿಗೇರ್ಗೆ ಪಿತೃ ವಿಯೋಗವಾಗಿದೆ. 68 ವರ್ಷದ ಚಂದ್ರಶೇಖರ್ ಬಡಿಗೇರ್ ಅವರು ಕೊರೊನಾದಿಂದಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಚಂದ್ರಶೇಖರ್ ಬಡಿಗೇರ್ ಕೆಇ ಬೋರ್ಡ್ ಶಾಲೆಯ ನಿವೃತ್ತ ಶಿಕ್ಷಕರಾಗಿದ್ದರು. ಇದೀಗ ಅರುಣ್ ಬಡಿಗೇರ್ ಸೇರಿ ಮೂವರು ಮಕ್ಕಳನ್ನು ಚಂದ್ರಶೇಖರ್ ಅವರು ಅಗಲಿದ್ದಾರೆ. ಮೂರು ದಿನಗಳ ಹಿಂದೆ ಕಳೆದ 27 ರಂದು ಅರುಣ್ ತಾಯಿ 53 ವರ್ಷದ ಕಸ್ತೂರಮ್ಮ ಬಡಿಗೇರ್ ನಿಧನವಾಗಿದ್ದರು. ಅಂದಿನಿಂದ ಮತ್ತಷ್ಟು ಗಂಭೀರವಾಗಿದ್ದ ಅರುಣ್ ತಂದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಅರುಣ್ ಸಹೋದರ, ಸಹೋದರಿ ಇಬ್ಬರಿಗೂ ಕೂಡ ಸೋಂಕು ತಗುಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ, ಇದೇ 25ಕ್ಕೆ ಅರುಣ್ ಸಹೋದರಿಯ ಮದುವೆ ನಿಶ್ಚಿತವಾಗಿತ್ತು.
ನಿರೂಪಕ ಅರುಣ್ ಬಡಿಗೇರ್ಗೆ ತಂದೆ ನಿಧನಕ್ಕೆ ಪಬ್ಲಿಕ್ ಟಿವಿ ಬಳಗ ಕಂಬನಿ ಮಿಡಿದಿದೆ.