ನವದೆಹಲಿ: ಕಳೆದ ಏಳು ದಿನಗಳಿಂದ ಇಂಧನ ಬೆಲೆಯನ್ನು ನಿರಂತರವಾಗಿ ಆರು ಬಾರಿ ಏರಿಕೆ ಮಾಡಲಾಗಿದೆ. ಪರಿಣಾಮ ಕಳೆದೊಂದು ವಾರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರವು 3.31 ರೂ. ಹಾಗೂ ಡೀಸೆಲ್ 3.42 ರೂ. ಏರಿಕೆಯಾಗಿದೆ.
ದೇಶಾದ್ಯಂತ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 59 ಪೈಸೆ ಮತ್ತು ಡೀಸೆಲ್‍ಗೆ 58 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ ಬೆಂಗಳೂರಿನಲ್ಲಿ 77.57 ರೂ., ದೆಹಲಿಯಲ್ಲಿ 75.16 ರೂ., ಮುಂಬೈ 82.10 ರೂ., ಚೆನ್ನೈ 78.99 ರೂ. ಮತ್ತು ಕೋಲ್ಕತಾ 77.05 ರೂ. ಬೆಲೆ ನಿಗಧಿಯಾಗಿದೆ.
Advertisement
Advertisement
ಪ್ರತಿ ಲೀಟರ್ ಡೀಸೆಲ್ ದರ ಬೆಂಗಳೂರಿನಲ್ಲಿ 69.22 ರೂ., ದೆಹಲಿಯಲ್ಲಿ 73.39ರೂ., ಮುಂಬೈ 72.03 ರೂ., ಚೆನ್ನೈ 71.64 ರೂ. ಮತ್ತು ಕೋಲ್ಕತಾ 69.23 ರೂ. ಬೆಲೆ ನಿಗಧಿಯಾಗಿದೆ.
Advertisement
ಪೆಟ್ರೋಲ್ ಮತ್ತು ಡೀಸೆಲ್ ದರವು 12 ವಾರಗಳ ವಿರಾಮದ ನಂತರ ಸತತ ಆರು ದಿನಗಳಲ್ಲಿ ಏರಿಕೆ ಕಂಡಿದೆ. ಹೆಚ್ಚಿನ ದೇಶೀಯ ಸುಂಕದ ಹಿನ್ನೆಲೆಯಲ್ಲಿ ಇಂಧನ ಬೆಲೆಗಳು ಮತ್ತಷ್ಟು ಏರಿಕೆಯಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಡಾಲರ್ ಎದುರು ರೂಪಾಯಿ ದರದ ಕುಸಿತವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಿದೆ.