ನವದೆಹಲಿ: ಕೊರೊನಾ ಸಂದರ್ಭದಲ್ಲಿ ಹೆಚ್ಚು ಜನ ಸೇರುವ ಸಮಾರಂಭಗಳಿಗೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಆದರೆ ಇಲ್ಲೊಂದು ಜೋಡಿ ತಮ್ಮ ವಿವಾಹಕ್ಕೆ ಆಗಮಿಸುವವರು ಮಾಸ್ಕ್ ಹಾಕಿಕೊಂಡು ಬರಬೇಡಿ ಎಂದು ಹೇಳಿದೆ.
ಅರೇ ಇದೇನಪ್ಪಾ ಮಾಸ್ಕ್ ಹಾಕ್ಕೊಂಡು ಬರಬೇಡಿ ಅಂತಿದಾರೆ ಎಂದು ಯೋಚಿಸಬೇಡಿ, ಇದು ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ವಿವಾಹ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಡ್ಯಾನ್ ವೈಟ್ ಎಂಬ ಖಾತೆಯಿಂದ ಇದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಜೋಡಿ ಭಾವಚಿತ್ರವಿದ್ದು, ಕೋವಿಡ್-19 ಟು ಗೋ ಅವೇ ಎಂದು ಕಲರ್‍ಫುಲ್ ಅಕ್ಷರಗಳಲ್ಲಿ ಬರೆಯಲಾಗಿದೆ.
Advertisement
Damn. Just got this in the mail. pic.twitter.com/Vqd9mPFxav
— Dan White (@atdanwhite) September 21, 2020
Advertisement
ಬಹುತೇಕ ಈಗಿನ ಆಮಂತ್ರಣ ಪತ್ರಿಕೆಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಕಡ್ಡಾಯ ಎಂದು ಇರುತ್ತದೆ. ಆದರೆ ಈ ಆಮಂತ್ರಣ ಪತ್ರಿಕೆಯಲ್ಲಿ ಮಾತ್ರ ಅಚ್ಚರಿ ಎಂಬಂತೆ ಮಾಸ್ಕ್‍ಗಳಿಗೆ ಅನುಮತಿ ಇಲ್ಲ. ನಾವು ನಿಮ್ಮೆಲ್ಲರ ಸುಂದರ ಮುಖವನ್ನು ನೋಡಲು ಬಯಸುತ್ತೇವೆ ಎಂದು ಬರೆಯಲಾಗಿದೆ. ಆದರೆ ಕೊರೊನಾ ಮಹಾಮಾರಿ ಹೊತ್ತಲ್ಲಿ ಇದೇನಪ್ಪ ಹೀಗೆ ಬರೆದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆ ನಡೆಯುತ್ತಿದೆ.
Advertisement
ಅಲ್ಲದೆ ಕೆಮ್ಮುವವರಿಗಾಗಿ ಕಾಫ್ ರೂಮ್ ಸಹ ಇವೆ ಎಂದು ಈ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಇದರಲ್ಲಿ ಜೋಡಿಯ ಹೆಸರನ್ನು ಎರಿಕಾ ಫಾರ್ಟ್‍ಲ್ಯಾಂಡರ್ ಹಾಗೂ ಡಸ್ಟಿನ್ ವೀನ್ ಎಂದು ಬರೆಯಲಾಗಿದೆ. ಈ ಆಹ್ವಾನ ಪತ್ರಿಕೆ ಇದೀಗ ಸಖತ್ ವೈರಲ್ ಆಗಿದೆ. ಹಲವರು ಶೇರ್ ಮಾಡಿಕೊಂಡರೆ, ಇನ್ನೂ ಹಲವರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
Advertisement
ಕೊರೊನಾ ಹಿನ್ನೆಲೆ ಯಾವುದೇ ಸಭೆ ಸಮಾರಂಭಗಳಲ್ಲಿ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂಬ ನಿಯಮವಿದೆ. ಅಲ್ಲದೆ ಕೊರೊನಾ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸೂಚಿಸಲಾಗಿದೆ. ಈ ಹಿನ್ನೆಲೆ ಬಹುತೇಕರು ತಮ್ಮ ವಿವಾಹ ಸಮಾರಭಗಳನ್ನು ಮುಂದೂಡಿದ್ದಾರೆ. ಇನ್ನೂ ಹಲವರು ಸರಳವಾಗಿ ಮದುವೆಯಾಗಿದ್ದಾರೆ. ಇನ್ನೂ ಹಲವರು ವಿಡಿಯೋ ಚಾಟಿಂಗ್ ಮೂಲಕ ವಿವಾಹವಾಗಿ ಗಮನ ಸೆಳೆದಿದ್ದಾರೆ.