ನಿನ್ನ ಹೆಂಡ್ತೀನ ನಾನು ಮದ್ವೆ ಆಗ್ತೀನಿ ಅಂದ – ಬೇಡ ಅಂದಿದ್ದಕ್ಕೆ ಅದೇ ಹೆಂಡ್ತಿ ಜೊತೆಗೂಡಿ ಕೊಂದ

Public TV
3 Min Read
CKM Husband Murder copy

– ಶ್ರೀನಿವಾಸ್ ಮಾಮಾ, ರಾಗಿಣಿ ಆಂಟಿ ಅಂದರ್

ಚಿಕ್ಕಮಗಳೂರು: ನಿನ್ನ ಹೆಂಡತಿಯನ್ನ ನಾನು ಮದುವೆ ಆಗ್ತೀನಿ. ಒಂದು ಡಿವೋರ್ಸ್ ಕೊಡು ಇಲ್ಲ, ಬಿಟ್ಟೋಗು ಎಂದು ಪತ್ನಿಯ ಪ್ರಿಯಕರ ಹೇಳಿದ್ದಾನೆ. ಡಿವೋರ್ಷ್ ನೀಡಲು ವಿರೋಧ ವ್ಯಕ್ತಪಡಿಸಿದ 32 ವರ್ಷದ ವ್ಯಕ್ತಿಯನ್ನ ಹೆಂಡತಿಯೇ ಪ್ರಿಯಕರನ ಜೊತೆ ಸೇರಿ ಕೊಲೆಗೈದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ದೊಡ್ಡಿಹಟ್ಟಿ ಗ್ರಾಮದಲ್ಲಿ ನಡೆದಿದೆ.

CKM Husband Murder 3

ಮೃತನನ್ನ 32 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಪ್ರಿಯಕರನ ಜೊತೆ ಸೇರಿ ಗಂಡನನ್ನ ಕೊಂದ ಪತ್ನಿ ರಾಗಿಣಿ ಹಾಗೂ ಅಫ್ಟರ್ ಮ್ಯಾರೇಜ್ ಲವ್ವರ್ ಶ್ರೀನಿವಾಸ್ ಇಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಪ್ರದೀಪ್ ಹಾಗೂ ರಾಗಿಣಿ ಮದುವೆಯಾಗಿತ್ತು. ಇಬ್ಬರಿಗೂ 10 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾನೆ. ಗಾರೆ ಕೆಲಸ ಮಾಡಿಕೊಂಡಿದ್ದ ಪ್ರದೀಪ್ ಮದ್ಯವ್ಯಸನಿಯೂ ಆಗಿದ್ದ. ಆಗಾಗ ಗಂಡ-ಹೆಂಡತಿ ಮಧ್ಯೆ ಜಗಳವೂ ನಡೆಯುತ್ತಿತ್ತು.

CKM Husband Murder 1

ಶ್ರೀನಿವಾಸ್ ಮೇಲೆ ರಾಗಿಣಿಗೆ ಲವ್: ಪ್ರದೀಪನ ವೃತ್ತಿ ಮಿತ್ರ ಶ್ರೀನಿವಾಸ್ ಕೆಲಸ ಹಣ ನೀಡಲು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆಗ ರಾಗಿಣಿ ಹಾಗೂ ಪತಿಯ ಮಿತ್ರ ಶ್ರೀನಿವಾಸ್ ಜೊತೆ ಆತ್ಮೀಯಳಾಗಿದ್ದಳು. ರಾಗಿಣಿಯೂ ಕೂಡ ಸರ್ಕಾರಿ ಇಲಾಖೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು. ರಾಗಿಣಿಗೆ ಯಾವಾಗ ಶ್ರೀನಿವಾಸನ ಮೇಲೆ ಪ್ರೀತಿ ಆಸಕ್ತಿ ಮೂಡತೊಡಗಿತೋ ಆಗ ಪತಿ ಪ್ರದೀಪ್ ಮೇಲಿನ ವ್ಯಾಮೋಹ ಕಡಿಮೆಯಾಗ ತೊಡಗಿತ್ತು. ಕಳೆದ ರಾತ್ರಿ ರಾಗಿಣಿ ಹಾಗೂ ಲವರ್ ಜೊತೆಗಿದ್ದಾಗ ಮನೆಗೆ ಬಂದ ಪ್ರದೀಪನ ಜೊತೆ ಗಲಾಟೆ ನಡೆದಿದೆ. ರಾಗಿಣಿ ನನ್ನನ್ನ ಬಿಡು ಎಂದಿದ್ದಾಳೆ. ಲವ್ವರ್ ಶ್ರೀನಿವಾಸ್ ಕೂಡ ಒಂದು ಡಿವೋರ್ಸ್ ಕೊಡು. ಇಲ್ಲ ಬಿಟ್ಟುಬಿಡು ಎಂದಿದ್ದಾನೆ. ಅದಕ್ಕೆ ಪ್ರದೀಪ್ ಒಪ್ಪದಿದ್ದಾಗ ರಾಗಿಣಿ ಹಾಗೂ ಶ್ರೀನಿವಾಸ್ ಇಬ್ಬರೂ ಸೇರಿ ಪ್ರದೀಪ್ ನನ್ನ ಮುಗಿಸಿದ್ದಾರೆ.

CKM Husband Murder

ಅಪ್ಪ ಮಲಗಿದ್ದಾರೆ: ಮೊದಲಿಗೆ ಪ್ರದೀಪ್ ಮುಖಕ್ಕೆ ಟವೆಲ್ ಮುಚ್ಚಿ ಉಸಿರುಗಟ್ಟಿಸುವ ಪ್ರಯತ್ನಿ ಮಾಡಿದ್ದಾರೆ. ಅದು ಸಾಧ್ಯವಾಗಿಲ್ಲ. ಇವನು ಬೆಳಗ್ಗೆ ಎಲ್ಲರಿಗೂ ಹೇಳುತ್ತಾನೆಂದು ಹೆದರಿ ವೇಲ್ ನಿಂದ ಕುತ್ತಿಗೆ ಬಿಗಿದು ಕೊಂದಿದ್ದಾರೆ. ಅಪ್ಪನಿಗೆ ಒಂದು ಗತಿ ಕಾಣಿಸಲೆಂದೇ ಅಮ್ಮ ರಾಗಿಣಿ ಮಕ್ಕಳನ್ನ ಟಿವಿ ನೋಡಲು ಪಕ್ಕದ ಮನೆಗೆ ಕಳಿಸಿದ್ದಳು. ಮಕ್ಕಳು ಬಂದು ಅಪ್ಪ ಎಂದಾಗ ಸತ್ತ ಅಪ್ಪನನ್ನ ತೋರಿಸಿ ಮಲಗಿದ್ದಾರೆ ಎಂದು ಮಕ್ಕಳನ್ನ ಮಲಗಿಸಿದ್ದಳು. ಸಹಜ ಸಾವು ಎಂದು ಕಾಣಲು ಮಾಡಬೇಕಾಗಿರೋದನ್ನೆಲ್ಲಾ ಮಾಡಿ ಶ್ರೀನಿವಾಸ್ ಹಾಗೂ ರಾಗಿಣಿಯೂ ಮಲಗಿದಳು. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ್ರೂ ಅಕ್ರಮ ಸಂಬಂಧ – ಪ್ರಶ್ನಿಸಿ ದೂರವಾದ ಪತ್ನಿಯ ಬರ್ಬರ ಹತ್ಯೆ

COUPLE

ಬೆಳಗ್ಗೆ ಏಳುವಷ್ಟರಲ್ಲಿ ಮತ್ತೊಂದು ನಡೆದಿತ್ತು. ಮೃತದೇಹದಿಂದ ರಕ್ತ ಹರಿದಿತ್ತು. ಪ್ರದೀಪ್ ಶರ್ಟ್ ನಿಂದಲೇ ರಕ್ತ ಒರೆಸಿದ ಶ್ರೀನಿವಾಸ್ ಕೊಲೆಗೆ ಬಳಸಿದ ವೇಲೆ, ರಕ್ತದ ಶರ್ಟ್ ಎಲ್ಲವನ್ನೂ ಗಂಟು ಕಟ್ಟಿಕೊಂಡು ಹೊತ್ತೊಯ್ದಿದ್ದ. ಬೆಳಗ್ಗೆ ಎಲ್ಲರೂ ಬಂದು ನೋಡಿದಾಗ ಕುತ್ತಿಗೆಯಲ್ಲಿ ಬಲವಾದ ಮಾರ್ಕುಗಳಿದ್ದವು. ಸ್ಥಳಕ್ಕೆ ಬಂದ ಪೊಲೀಸರು ನೋಡಿದ ಕೂಡಲೇ ಇದು ಕೊಲೆ ಎಂದರು. ಮಕ್ಕಳನ್ನ ಕೇಳಿದಾಗ, ನಾವು ರಾತ್ರಿ ಟಿವಿ ನೋಡಲು ಪಕ್ಕದ ಮನೆಗೆ ಹೋಗಿದ್ದೇವು. ಆಗ ಶ್ರೀನಿವಾಸ್ ಮಾಮಾ ಬಂದಿದ್ದರು ಹೇಳಿದ್ದಾರೆ. ಇದನ್ನೂ ಓದಿ: ಗೆಳತಿ ಜೊತೆ 2 ದಿನ ಕಳೆಯಲು ಫ್ಲ್ಯಾಟ್‍ಗೆ ಬಂದವ ಶವವಾಗಿ ಪತ್ತೆ – ಪ್ರೇಯಸಿ ನಾಪತ್ತೆ

COUPLE medium

ಪೊಲೀಸರು ಪೊಲೀಸ್ ಭಾಷೆಯಲ್ಲಿ ಕೇಳಿದಾಗ ರಾಗಿಣಿ ಆಂಟಿ ಎಲ್ಲವನ್ನೂ ಬಾಯಿ ಬಿಟ್ಟಿದ್ದಾಳೆ. ಪ್ರಿಯಕರ ಶ್ರೀನಿವಾಸ್ ಹೊತ್ತೊಯ್ದಿದ್ದ ವೇಲ್, ಶರ್ಟ್ ಎಲ್ಲವನ್ನೂ ತಂದ. ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರೋ ಸಖರಾಯಪಟ್ಟಣ ಪೊಲೀಸರು ಶ್ರೀನಿವಾಸ್ ಮಾಮಾ ಹಾಗೂ ರಾಗಿಣಿ ಆಂಟಿಯನ್ನ ಅಂದರ್ ಮಾಡಿದ್ದಾರೆ. ಅಪ್ಪ ಸತ್ತ, ಅಮ್ಮ ಜೈಲು ಪಾಲಾದ್ಲು. ಮಕ್ಕಳು ಮಾತ್ರ ಅನಾಥರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *