Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಿನ್ನ ಶುಭಾಶಯಗಳನ್ನು ಮಿಸ್ ಮಾಡ್ತಿದ್ದೀನಿ ಚಿರು ಮಗನೇ – ಅರ್ಜುನ್ ಸರ್ಜಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಿನ್ನ ಶುಭಾಶಯಗಳನ್ನು ಮಿಸ್ ಮಾಡ್ತಿದ್ದೀನಿ ಚಿರು ಮಗನೇ – ಅರ್ಜುನ್ ಸರ್ಜಾ

Bengaluru City

ನಿನ್ನ ಶುಭಾಶಯಗಳನ್ನು ಮಿಸ್ ಮಾಡ್ತಿದ್ದೀನಿ ಚಿರು ಮಗನೇ – ಅರ್ಜುನ್ ಸರ್ಜಾ

Public TV
Last updated: August 15, 2020 5:30 pm
Public TV
Share
2 Min Read
Arjun Sarja Chiranjeevi Sarj
SHARE

ಬೆಂಗಳೂರು: ನಿನ್ನ ಶುಭಾಶಯಗಳನ್ನು ಮಿಸ್ ಮಾಡುತ್ತಿದ್ದೇನೆ ಚಿರು ಮಗನೇ ಎಂದು ನಟ ಅರ್ಜುನ್ ಸರ್ಜಾ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಇಂದು ಅರ್ಜುನ್ ಸರ್ಜಾ ಅವರು 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಮೃತ ತಮ್ಮ ತಂಗಿಯ ಮಗ ಚಿರಂಜೀವಿ ಸರ್ಜಾರನ್ನು ನೆನಪು ಮಾಡಿಕೊಂಡಿರುವ ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಪೋಸ್ಟ್ ಹಾಕಿಕೊಂಡಿದ್ದಾರೆ. ಜೊತೆಗೆ ಚಿರುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CD6BAVInBiP/

ಇಂದು ಅರ್ಜುನ್ ಸರ್ಜಾ ಅವರು ಚಿರು ಜೊತೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದು, ನನ್ನ ಹುಟ್ಟುಹಬ್ಬದ ದಿನದೊಂದು ನನ್ನ ನೆಚ್ಚಿನ ಹುಡುಗನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಶುಭಾಶಯಗಳನ್ನು ಮಿಸ್ ಮಾಡುತ್ತಿದ್ದೇನೆ ಚಿರು ಮಗನೇ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿರು ಜೊತೆ ನಿಂತಿರುವ ಮತ್ತು ಚಿರುವಿಗೆ ಅರ್ಜುನ್ ಸರ್ಜಾ ಅವರೇ ಮೇಕಪ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

chiranjeevi sarja 1

ಲಾಕ್‍ಡೌನ್ ವೇಳೆ ಮನೆಯವರ ಜೊತೆ ಕಾಲಕಳೆಯುತ್ತಾ, ಆಟವಾಡುತ್ತಾ ಚೆನ್ನಾಗಿದ್ದ ಚಿರು, ಬಹುವೇಗವಾಗಿ ನಮ್ಮನ್ನು ಅಗಲುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಹೃದಯಾಘಾತಕ್ಕೆ ಒಳಗಾದ ಚಿರು, ಜೂನ್ 07ರಂದು ಚಿರನಿದ್ರೆಗೆ ಜಾರಿಬಿಟ್ಟಿದ್ದರು. ಈ ಮೂಲಕ ತೋಳಿಗೆ ತೋಳು ಕೊಟ್ಟು ಜೊತೆಗೆ ನಿಂತಿದ್ದ ತಮ್ಮ, 10 ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತ್ನಿ, ಜೇನುಗೂಡಿನಂತ ಕೂಡುಕುಟುಂಬವನ್ನು ಬಿಟ್ಟು ಹೋಗಿದ್ದಾರೆ.

arjun sarja dhruva sarja 2

ಪ್ರೀತಿಸಿ ಮದುವೆಯಾದ ಚಿರುವನ್ನು ಕಳೆದುಕೊಂಡು ಅವರ ಪ್ರತಿರೂಪವನ್ನು ಉದರದಲ್ಲಿ ಅಪ್ಪಿಕೊಂಡು ಮೇಘನಾ ಅವರು ದಿನದೂಡುತ್ತಿದ್ದಾರೆ. ಪತಿಯ ಹೆಸರು ತನ್ನ ಹೆಸರಿನಲ್ಲಿ ಬೆರೆತು ಹೋಗಲಿ ಎಂದು ಮೇಘನಾ ರಾಜ್ ಎಂದು ಇದ್ದ ಅವರ ಹೆಸರನ್ನು ಮೇಘನಾ ರಾಜ್ ಸರ್ಜಾ ಎಂದು ಬದಲಿಸಿಕೊಂಡಿದ್ದಾರೆ. ಚಿರು ಬಿಟ್ಟು ಹೋದ ನೆನಪುಗಳನ್ನು ಬಿಗಿದಪ್ಪಿಕೊಂಡು ಮಗುವಿನ ರೂಪದಲ್ಲಿ ಚಿರು ಹಬ್ಬೆಗಾಲಿಟ್ಟು ಬರುವುದನ್ನು ಕಾಯುತ್ತಿದ್ದಾರೆ.

arjun sarja chiru sarja

ಇತ್ತ ಅಣ್ಣ ಕೊನೆಯವರೆಗೂ ನನ್ನ ಕಣ್ಣಮುಂದೆ ಇರಲಿ ಎಂದು ತನ್ನದೇ ತೋಟದಲ್ಲಿ ಅಣ್ಣನ ಅಂತ್ಯಸಂಸ್ಕಾರ ಮಾಡಿದ ನಟ ಧ್ರುವ ಸರ್ಜಾ, ಅಣ್ಣನ ನೆನಪಿನಲ್ಲಿ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸೋತು ಕೂತಿರುವ ಅತ್ತಿಗೆಯ ನೆರವಿಗೆ ನಿಂತಿದ್ದಾರೆ. ಇತ್ತ ಮಗನಂತಿದ್ದ ತಂಗಿಯ ಮಗನನ್ನು ಕಳೆದಕೊಂಡ ನಟ ಅರ್ಜುನ್ ಸರ್ಜಾ ಮಿಸ್ ಯೂ ಮೈ ಬಾಯ್ ವಿಧಿ ತುಂಬಾ ಕ್ರೂರಿ ಎಂದು ಚಿರು ಸಾವಿನ ನಂತರ ಪೋಸ್ಟ್ ಹಾಕಿಕೊಂಡಿದ್ದರು.

TAGGED:Arjun SarjabengalurubirthdayChiranjeevi SarjainstagramPublic TVಅರ್ಜುನ್ ಸರ್ಜಾಇನ್‍ಸ್ಟಾಗ್ರಾಮ್ಚಿರಂಜೀವಿ ಸರ್ಜಾಪಬ್ಲಿಕ್ ಟಿವಿಬೆಂಗಳೂರುಹುಟ್ಟುಹಬ್ಬ
Share This Article
Facebook Whatsapp Whatsapp Telegram

Cinema news

Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories
Chaitra Kundapura Ashwini Gowda 1
ಸೋಶಿಯಲ್‌ ಮೀಡಿಯಾದಲ್ಲಿ ಅಶ್ವಿನಿ, ಚೈತ್ರಾ ಪೋಸ್ಟ್‌ ವಾರ್‌!
Cinema Latest Sandalwood Top Stories
Tamanna Bhatia
ಮೈಸೂರು ಸ್ಯಾಂಡಲ್‌ ಸೋಪ್‌ಗೆ ಹೊಸ ರೂಪ – ಇಂದಿನಿಂದ 2 ವರ್ಷ ತಮನ್ನಾ ಪ್ರಚಾರ ರಾಯಭಾರಿ: ಎಂಬಿಪಿ
Bengaluru City Cinema Districts Karnataka Latest Main Post
Alpha Trailor Srimurali
ಅಲ್ಫಾ ಟ್ರೈಲರ್ ಮೆಚ್ಚಿ ಪ್ರಶಂಸಿಸಿದ ನಟ ಶ್ರೀಮುರಳಿ
Cinema Latest Top Stories

You Might Also Like

MOBILE
Bengaluru City

ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ – ತನಿಖೆ ವೇಳೆ ಪ್ರಿಯಕರನ ಮಾಸ್ಟರ್ ಪ್ಲ್ಯಾನ್‌ ಬಯಲು

Public TV
By Public TV
2 minutes ago
POLICE JEEP 1
Dakshina Kannada

ಮಂಗಳೂರು ಕಾಲೇಜಿಗೆ ಸೇರಿಸಲಿ ಅಂತ ಕಿಡ್ನ್ಯಾಪ್‌ ಕಥೆ ಕಟ್ಟಿದ ವಿದ್ಯಾರ್ಥಿನಿ

Public TV
By Public TV
5 minutes ago
Flight
Chikkamagaluru

ಕಳಸದ ಸುತ್ತಮುತ್ತ ಕೆಳಭಾಗದಲ್ಲಿ ಹಾರಾಡಿದ ಲಘು ವಿಮಾನ – ಸ್ಥಳೀಯರ ಆತಂಕ, ಫ್ಲೈಟ್‌ ಹಿಂದೆ ಬಿದ್ದ ಪೊಲೀಸರು!

Public TV
By Public TV
30 minutes ago
Prahlad Joshi 1
Latest

ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಪ್ರಚೋದನಕಾರಿ ನೀತಿ: ಕಾಂಗ್ರೆಸ್‌ ವಿರುದ್ಧ ಜೋಶಿ ಕಿಡಿ

Public TV
By Public TV
44 minutes ago
Vijayapura Plane crash
Districts

ಖಾಸಗಿ ವಿಮಾನ ಪತನವಾದ ಜಮೀನು ಮಾಲೀಕರ ಗೋಳಾಟ – 5 ಲಕ್ಷ ರೂ. ಪರಿಹಾರಕ್ಕೆ ಮನವಿ

Public TV
By Public TV
1 hour ago
Leopard 1
Chamarajanagar

ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಬಾಲಕನ ಮೇಲೆ ಚಿರತೆ ದಾಳಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?