ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಪ್ರತಿವಾರ ನಡೆಯುವಂತೆ ನಿನ್ನೆ ಕೂಡ ‘ಯೆಸ್’ ಆರ್ ‘ನೋ’ ರೌಂಡ್ಸ್ ನಡೆಯಿತು. ಈ ವೇಳೆ ಮನೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಕಿಚ್ಚ ಕೊನೆಯದಾಗಿ ನಿಧಿ ಸುಬ್ಬಯ್ಯ ಕೆಲವು ಸಲ ದಡ್ಡಿ ಎಂಬ ಪ್ರಶ್ನೆ ಕೇಳುತ್ತಾರೆ.
ಬಳಿಕ ನೋ ಯಾಕೆ ರಾಜೀವ್‍ರವರೇ ಎಂದು ಕೇಳಿದಾಗ, ನಿಧಿ ಯಾವಾಗಲೂ ನನ್ನ ಭಾವನೆಗಳನ್ನು ಹೇಗೆ ಎಕ್ಸ್‍ಪ್ರೆಸ್ ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿರುತ್ತಾರೆ. ಅವರು ಹೇಳಬೇಕೆಂದು ಕೊಂಡ ವಿಚಾರವನ್ನು ಕನ್ನಡದಲ್ಲಿ ಹೇಗೆ ಹೇಳಬೇಕೆಂದು ಗೊತ್ತಾಗದೇ ಯೋಚನೆ ಮಾಡುತ್ತಿರುತ್ತಾರೆ. ಈ ಗ್ಯಾಪ್‍ನಲ್ಲಿ ಕೆಲವೊಂದನ್ನು ಹೇಗೆ ಹೇಳಬೇಕೆಂದು ಗೊತ್ತಾಗದೇ ಹೇಳಿ ಬಿಡುತ್ತಾರೆ. ಆಗ ನಾವು ನಿಧಿ ಕನ್ಫೂಷನ್‍ನಲ್ಲಿ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತೇವೆ. ಆದರೆ ಅವರಿಗೆ ಏನು ಹೇಳುತ್ತಿದ್ದೇನೆ ಎಂಬ ವಿಚಾರದ ಬಗ್ಗೆ ಅವರಿಗೆ ಬಹಳ ಅರಿವಿರುತ್ತದೆ ಎನ್ನುತ್ತಾರೆ.
ನಂತರ ಯೆಸ್ ಬೋರ್ಡ್ ತೋರಿಸಿದ್ದ ರಘು, ನಿಧಿ ಕೆಲವು ಸಲ ನನ್ನ ರೀತಿಯೇ ಸ್ಲೋ ಮೋಷನ್. ಏನಾದರೂ ಹೇಳಲು ಸಮಯ ತೆಗೆದುಕೊಳ್ಳುತ್ತಾರೆ. ಯೋಚನೆ ಮಾಡುವ ಸಮಯದ ಮಧ್ಯೆ ಏನಾದರೂ ಹೇಳಿ ಬಿಡುತ್ತಾರೆ. ಅದಕ್ಕೆ ಅವರು ಒಂದು ರೀತಿ ಕ್ಯೂಟ್ ರೀತಿಯ ದಡ್ಡಿ ಎಂದು ಅವರತ್ತಾ ನೋಡುತ್ತಾರೆ. ಈ ವೇಳೆ ಕಿಚ್ಚ ಆಯಿತು ಆದರೆ ನೀವು ಯಾಕೆ ಅವರನ್ನು ಹಾಗೇ ನೋಡುತ್ತಿದ್ದೀರಾ? ನಿಧಿ ನಿಮಗೆ ಗೊತ್ತಾಗ್ತಿದ್ಯಾ ಅವರು ಯಾವ ರೀತಿ ನೋಡುತ್ತಿದ್ದಾರೆ ಎಂದು ಹಾಸ್ಯ ಮಾಡುತ್ತಾರೆ. ಈ ವೇಳೆ ನಿಧಿ ಮುಖ ಮುಚ್ಚಿಕೊಂಡು ನಗುತ್ತಾ ಗೊತ್ತಿಲ್ಲ ಸರ್ ಅವರು ಹೇಗೆ ನೋಡಿದ್ರು ಎನ್ನುತ್ತಾರೆ.
ನಂತರ ಮಾತನಾಡಿದ ಮಂಜು, ಒಂದೊಂದು ಬಾರಿ ನಿಧಿ ಏನು ಮಾತನಾಡುತ್ತಾರೆ ಎಂಬುವುದು ಅವರಿಗೆ ಗೊತ್ತಾಗುವುದಿಲ್ಲ. ಅಂದರೆ ಅವರಿಗೆ ಎಲ್ಲ ಗೊತ್ತಿದೆ. ಆದರೆ ಆ ಮಾತುಗಳನ್ನು ಹೇಗೆ ಆಡಬೇಕೆಂದು ತಿಳಿದಿರುವುದಿಲ್ಲ. ಥಟ್ ಅಂತ ಮಾತಾನಾಡಿಬಿಡುತ್ತಾರೆ. ಆಗ ಬೇರೆಯವರಿಗೆ ಬೇಸರವಾಗುತ್ತದೆ. 5 ನಿಮಿಷದ ನಂತರ ಹೌದು ನನಗೆ ಗೊತ್ತಾಗಲಿಲ್ಲ ಎಂದು ಅರ್ಥಮಾಡಿಕೊಂಡು ಹೇಳುತ್ತಾರೆ.
ಇದಕ್ಕೆ ಪ್ರತಿಯುತ್ತರ ನೀಡಿದ ನಿಧಿ, ಹೌದು, ನಾನು ಸಡನ್ ರಿಯಾಕ್ಟ್ ಮಾಡುವುದು, ಓವರ್ ಥಿಂಕ್ ಮಾಡುವುದು ನಿಜ. ನನ್ನ ಪ್ರಕಾರ ಇವರೆಲ್ಲರೂ ನನ್ನ ದಡ್ಡಿ ಅಂದುಕೊಂಡರೆ ಅದು ನನ್ನ ಸ್ಟ್ರೆಂಥ್. ಯಾಕಂದ್ರೆ ನನ್ನ ಆಯ್ಕೆ ಇವರ್ಯಾರಿಗೂ ಇನ್ನೂ ಗೊತ್ತಿಲ್ಲ ಎಂದು ಹೇಳುತ್ತಾರೆ.