ಲಿಮಾ: ಕಂದಕಕ್ಕೆ ಬಸ್ ಉರುಳಿ ಬಿದ್ದು ಸ್ಥಳದಲ್ಲೇ 27ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಪೆರುವಿಯನ್ ಪ್ರದೇಶದ ಅಯಾಕುಚೊದಲ್ಲಿ ನಡೆದಿದೆ.
ಮೃತರೆಲ್ಲ ವಾರಿ ಪಲೋಮಿನೋ ಕಂಪನಿಯ ಗಣಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಎಂದು ತಿಳಿದುಬಂದಿದೆ. ಇವರೆಲ್ಲರೂ ಅಯಾಕುಚೊ ಪ್ರದೇಶದಿಂದ ಅರೆಕ್ವಿಪಾಗೆ ಬಸ್‍ನಲ್ಲಿ ಹೋಗುತ್ತಿದ್ದರು. ಮಾರ್ಗಮದ್ಯೆ ಸುಮಾರು 250 ಮೀಟರ್ ಆಳದ ಕಂದಕಕ್ಕೆ ಬಸ್ ಉರುಳಿದ್ದು, ಅಪಾರ ಪ್ರಮಾಣದ ಸಾವು -ನೋವು ಉಂಟಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ, ಅಗ್ನಿಶಾಮಕದಳ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್ ಚಾಲಕ ನಿದ್ರೆಗೆ ಜಾರಿರುವುದು ಅಪಘಾತಕ್ಕೆ ಕಾರಣವಾಗಿರಬಹುದು. ನನ್ನ ಸಹೋದರನನ್ನು ಕಿಟಕಿಯ ಮೂಲಕ ಹೊರಹಾಕಲಾಯಿತು. ಅವನ ದೇಹದ ಮೇಲೆ ಕಲ್ಲುಗಳು ಬಿದ್ದಿದ್ದವು. ಹೀಗಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಎಂಬ ಮಹಿಳೆಯೊಬ್ಬರು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ – ವಾಹನಗಳ ಓಡಾಟಕ್ಕೆ ಬಿದ್ದಿಲ್ಲ ಬ್ರೇಕ್
ಕಳೆದ 10 ದಿನಗಳ ಹಿಂದೆ ಇಲ್ಲಿ ಇಂತಹದ್ದೇ ರಸ್ತೆ ಅಪಘಾತ ಸಂಭವಿಸಿತ್ತು. 17 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರು. ವೇಗವಾಗಿ ವಾಹನ ಚಾಲನೆ ,ಹೆದ್ದಾರಿಗಳು ಸರಿಯಾದ ಚಿಹ್ನೆಗಳ ಕೊರತೆ ಮತ್ತು ಸಂಚಾರ ಸುರಕ್ಷತೆಯ ಕೊರತೆಯಿಂದಾಗಿ ವಾಹನ ಅಪಘಾತಕ್ಕೋಳಗಾಗುತ್ತಿವೆ ಎನ್ನಲಾಗುತ್ತಿದೆ.