– ವಿಜಯೇಂದ್ರ ತಂದೆ ಸ್ಥಾನ ಉಳಿಸಿಕೊಳ್ಳಲಿ
ಹಾಸನ: ನಿಂಬೆಹಣ್ಣಿನ ಬಗ್ಗೆ ಮಾತಾಡೋರಿಗೆ ಹಿಂದುತ್ವದ ಕುರಿತು ಗೊತ್ತಿಲ್ಲ ಎಂದು ಹೇಳುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಸಂಸದ ಪ್ರಜ್ವಲ್ ರೇವಣ್ಣ ತಿರಗೇಟು ನೀಡಿದ್ದಾರೆ. ತಂದೆ, ಮಾಜಿ ಸಚಿವರಾಗಿರುವ ಹೆಚ್.ಡಿ.ರೇವಣ್ಣ ಅವರ ಬಗ್ಗೆ ಮಾತನಾಡೋರಿಗೆ ನಿಂಬೆಹಣ್ಣಿನ ಮಹತ್ವ ಹೇಳಿ ಕಿಡಿಕಾರಿದ್ದಾರೆ.
Advertisement
ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ರೇವಣ್ಣ, ಕೇಂದ್ರ ಸಚಿವ ರಾಜನಾಥ್ ಸಿಂಗ್ ರಫೆಲ್ ಖರೀದಿಸುವ ವೇಳೆ ವಿಮಾನದ ಚಕ್ರಕ್ಕೆ ನಿಂಬೆಹಣ್ಣು ಇರಿಸಿದ್ದರು. ಅವರು ಮಾಟ-ಮಂತ್ರ ಮಾಡಿ ನಿಂಬೆಹಣ್ಣು ಇಟ್ಟಿದ್ದರಾ ಎಂದು ಪ್ರಶ್ನಿಸಿದರು.
Advertisement
Advertisement
ಪ್ರತಿ ಗ್ರಾಮಕ್ಕೆ ಹೋದರು ಕೂಡ ಅಲ್ಲಿ ನಿಂಬೆಹಣ್ಣನ್ನ ಕೊಡುವ ಸಂಪ್ರದಾಯವಿದೆ. ಹಾಗಂತ ನಿಂಬೆಹಣ್ಣನ್ನು ಕೊಟ್ಟವರೆಲ್ಲ ಮಾಟ-ಮಂತ್ರ ಮಾಡಿಸುತ್ತಾರೆ ಅಂತ ಅಲ್ಲ. ಯಾವುದೇ ದೇವಸ್ಥಾನಗಳಿಗೆ ಹೋದರೂ ಅಲ್ಲಿ ಮೊದಲಿಗೆ ನಿಂಬೆಹಣ್ಣನ್ನು ಕೊಡುವುದು ಸಂಪ್ರದಾಯ. ಶೃಂಗೇರಿ ದೇವಾಲಯವನ್ನು ರೇವಣ್ಣನವರು ಬಹಳವಾಗಿ ನಂಬಿದ್ದಾರೆ. ಅಲ್ಲಿಯೂ ನಿಂಬೆಹಣ್ಣನ್ನು ಕೊಡುತ್ತಾರೆ. ಹಾಗಂತ ರೇವಣ್ಣನವರು ಮಾಟ-ಮಂತ್ರ ಮಾಡಿಸುತ್ತಿದ್ದಾರೆ ಅಂತ ಹೇಳುವುದಕ್ಕೆ ಆಗುತ್ತಾ? ಅವರಿಗೆ ಹಿಂದುತ್ವದ ಬಗ್ಗೆ ಗೊತ್ತಿಲ್ಲ ಅಂತ ಕಾಣಿಸುತ್ತದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
Advertisement
ಹಾಸನದ ಬೇಲೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಉಪಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡುತ್ತ ವಿಜಯೇಂದ್ರ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, 50 ವರ್ಷದಿಂದ ನಮ್ಮ ಕುಟುಂಬ ರಾಜಕೀಯ ನೋಡಿಕೊಂಡು ಬಂದಿದೆ. ಇಲ್ಲಿ ಗೆಲುವು ಸೋಲು ಶಾಶ್ವತವಲ್ಲ. ನಮ್ಮ ಬಗ್ಗೆ ಮಾತನಾಡುವ ಬದಲು ಅವರ ತಂದೆ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡಲಿ ಎಂದರು.
ಎಸ್.ಟಿ.ಸೋಮಶೇಖರ್ ಹೇಳಿದ್ದೇನು?: ಹಾಸನದಲ್ಲಿ ಪ್ರೀತಂಗೌಡ್ರೇ ಇರಬೇಕು. ನಿಂಬೆಹಣ್ಣಿಗೆ ಪ್ರತಿ ವಿರುದ್ಧ ನಿಂಬೆಹಣ್ಣು ತೋರಿಸುವಂತವರು ಪ್ರೀತಂಗೌಡ. ಹೀಗಾಗಿ ಹಾಸನ ಜಿಲ್ಲೆಗೆ ಅವರೇ ಸರಿ ಎಂದು ಪ್ರೀತಂಗೌಡರನ್ನು ಹಾಡಿಹೊಗಳಿದ್ದರು. ಇದನ್ನೂ ಓದಿ: ಎಲೆಕ್ಷನ್ ಅಂದ್ರೆ ಏನೂಂತ ಗ್ರಾ.ಪಂ ಚುನಾವಣೆಯಲ್ಲಿ ತೋರಿಸ್ತೇವೆ: ಪ್ರಜ್ವಲ್
ಆ ನಿಂಬೆಹಣ್ಣು ತೋರಿಸಿದರೆ ರಾಜ್ಯದ ಎಂತೆಂತಹ ನಾಯಕರೇ ತತ್ತರಿಸಿ ಹೋಗುತ್ತಾರೆ. ಆದರೆ ಆ ನಿಂಬೆಹಣ್ಣಿಗೆ ಪ್ರತಿ ನಿಂಬೆಹಣ್ಣು ತೋರಿಸಿ ಕಂಟ್ರೋಲ್ ಮಾಡುವ ಶಕ್ತಿ ಇದ್ದರೆ ಅದು ಪ್ರೀತಂಗೌಡರಿಗೆ ಮಾತ್ರ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ನಾವು ನೀಡುತ್ತೇವೆ ಎಂದು ಮಾಜಿ ಸಚಿವ ಹೆಚ್‍ಡಿ.ರೇವಣ್ಣ ನಿಂಬೆಹಣ್ಣಿನ ಶಕ್ತಿ ವಿರುದ್ಧ ಪರೋಕ್ಷವಾಗಿ ಮಾತನಾಡಿದ್ದರು.