ನವದೆಹಲಿ: ಕೆಂಪುಕೋಟೆ ಪ್ರವೇಶಿಸಿದ್ದ ರೈತರ ಜೊತೆ ಸಾಧ್ಯವಾದಷ್ಟು ನಾವು ಬಹಳ ಸಂಯಮದ ವರ್ತನೆ ತೋರಿದ್ದೆವು ಎಂದು ವಾಜಿರಾಬಾದ್ ಎಸ್‌ಎಚ್‌ಒ ಪಿಸಿ ಯಾದವ್ ಹೇಳಿದ್ದಾರೆ.
ಕೆಂಪುಕೋಟೆ ದಾಂಧಲೆಯಲ್ಲಿ ರೈತರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು ನಿನ್ನೆಯ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Advertisement
#WATCH | We were deployed at Red Fort when many people entered there. We tried to remove them from the rampart of the fort but they became aggressive….We didn't want to use force against farmers so we exercised as much restraint as possible: PC Yadav, SHO Wazirabad. #Delhi pic.twitter.com/v6o7D57EAk
— ANI (@ANI) January 27, 2021
Advertisement
ಬಹಳಷ್ಟು ಜನ ಪ್ರವೇಶಿಸಿದ ಸಂದರ್ಭದಲ್ಲಿ ಭದ್ರತೆಗಾಗಿ ನಮ್ಮನ್ನು ಕೆಂಪು ಕೋಟೆಯಲ್ಲಿ ನಿಯೋಜಿಸಲಾಗಿತ್ತು. ನಾವು ಅವರನ್ನು ತಡೆದು ಕೋಟೆಯಿಂದ ಹೊರ ಹಾಕಲು ಪ್ರಯತ್ನಪಟ್ಟೆವು. ಆದರೆ ಪ್ರತಿಭಟನಾಕಾರರು ಬಹಳ ಆಕ್ರಮಣಕಾರಿಯಾಗಿದ್ದರು. ನಾವು ರೈತರ ವಿರುದ್ಧ ಬಲವನ್ನು ಬಳಸಲಿಲ್ಲ. ನಾವು ಸಾಧ್ಯವಾದಷ್ಟು ಸಂಯಮವನ್ನು ಪ್ರದರ್ಶಿಸಿದ್ದೇವೆ ಎಂದು ಅವರು ನಿನ್ನೆ ಘಟನೆಯ ಬಗ್ಗೆ ಮಾತನಾಡಿದರು.
Advertisement
Many violent people reached Red Fort suddenly. Drunken farmers or whoever they were, attacked us suddenly with swords, lathis, and other weapons. The situation was worsening and it was too difficult for us to control the violent crowd: Sandeep, Operator of DCP North, Delhi pic.twitter.com/UKVkcKi0QI
— ANI (@ANI) January 27, 2021
Advertisement
ಕೆಂಪುಕೋಟೆ ಬಳಿ ಪೊಲೀಸರ ಮೇಲೆ ರೈತರು ನಡೆಸಿದ ದಾಳಿ ಬೆಚ್ಚಿಬೀಳಿಸುವಂತಿದೆ. ಪೊಲೀಸರ ಮೇಲೆಯೇ ದೊಣ್ಣೆ, ಕೋಲುಗಳಿಂದ ಪ್ರತಿಭಟನಾಕಾರರು ಬೀಸಿದ್ದಾರೆ. ಒಟ್ಟಿನಲ್ಲಿ ಉದ್ರಿಕ್ತರು ಪೊಲೀಸರನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಪೊಲೀಸರು ಎಲ್ಲೂ ತಪ್ಪಿಸಿಕೊಳ್ಳದಂತೆ ಪ್ರತಿಭಟನಾಕಾರರು ಲಾಕ್ ಮಾಡಿದ್ದಾರೆ. ಹೀಗಾಗಿ ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು 8-10 ಅಡಿ ಎತ್ತರದ ಗೋಡೆಯಿಂದ ಜಿಗಿದಿರುವ ವಿಡಿಯೋ ವೈರಲ್ ಆಗಿದೆ.
#WATCH | Protesters agitating against the farm laws, repeatedly ram their tractors into a Delhi Police vehicle overturning it, during yesterday's violence in Delhi (26.1.2021)
Video clip source(Delhi Police) pic.twitter.com/u7qXrCZDJO
— ANI (@ANI) January 27, 2021
ದೆಹಲಿ ಪೊಲೀಸರು ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 22 ಪ್ರಕರಣಗಳನ್ನು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 395 (ಡಕಾಯಿತಿ) 397( ಮಾರಣಾಂತಿಕ ಹಲ್ಲೆ) 120 ಬಿ (ಕ್ರಿಮಿನಲ್ ಪಿತೂರಿ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಕೇಸ್ ದಾಖಲಾಗಿದೆ.
#WATCH | Protesters vandalise a Delhi Police vehicle beating it with sticks, during yesterday's episode of violence (26.1.2021)
Video clip source(Delhi Police) pic.twitter.com/3KFYUOnwYo
— ANI (@ANI) January 27, 2021