ಬೆಂಗಳೂರು: ಸಂಪುಟ ಸರ್ಜರಿ ವಿಳಂಬಕ್ಕೆ ಬಿಜೆಪಿಯಲ್ಲಿ ಮತ್ತೆ ಬೇಗುದಿ ಸ್ಫೋಟವಾಗಿದೆ. ಈ ಮೂಲಕ ತಾಳ್ಮೆಯಿಂದಿದ್ದ ವಲಸಿಗ ಆಕಾಂಕ್ಷಿಗಳು ಸಿಡಿದೆದ್ರಾ ಅನ್ನೋ ಪ್ರಶ್ನೆ ಮೂಡಿದೆ.
ಹೌದು. ಸಿಎಂ ಹಾಗೂ ಸರ್ಕಾರದ ವಿರುದ್ಧವೇ ವಲಸಿಗ ಆಕಾಂಕ್ಷಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸಚಿವ ಸ್ಥಾನ ವಿಳಂಬದಿಂದ ಎಂಟಿಬಿ, ಶಂಕರ್ ಹಾಗೂ ಎಚ್.ವಿಶ್ವನಾಥ್ ಹತಾಶಾರಾಗಿದ್ದಾರೆ. ಹೀಗಾಗಿ ಮಂತ್ರಿಗಿರಿಗೆ ಜಾತಿ ಕಾರ್ಡ್ ಪ್ಲೇ ಮಾಡಲು ಮುಂದಾಗಿದ್ದಾರೆ.
Advertisement
Advertisement
ಕುರುಬ ಸಮುದಾಯದ ಚಿಂತನಾ ಸಭೆಯಲ್ಲಿ ಎಂಟಿಬಿ ನಾಗರಾಜ್ ಗುಡುಗಿದ್ದಾರೆ. ನಾವು ಕಂಬಳಿ ಬೀಸಿದ್ದಕ್ಕೇ ಯಡಿಯೂರಪ್ಪ ಸಿಎಂ ಆಗಿದ್ದು. ಬಿಜೆಪಿ ಅಧಿಕಾರಕ್ಕೆ ಬಂದಿದ್ದು ನಮ್ಮಿಂದ ಎಂದು ಕಿಡಿಕಾರಿದ್ದಾರೆ. ಸಮುದಾಯದ ಶಕ್ತಿ ಮೂಲಕ ಎಂಟಿಬಿ ಅವರು ಸಿಎಂಗೆ ವಾಗ್ದಾನ ನೆನಪಿಸಿದರು.
Advertisement
ಇತ್ತ ಎಮ್ಮೆಲ್ಸಿ ಎಚ್ ವಿಶ್ವನಾಥ್ ಸಹ ಸಿಎಂ ಬಿಎಸ್‍ವೈ ವಿರುದ್ಧ ಬೇಸರ ಹೊರಹಾಕಿದರು. ಮೊದಲೆಲ್ಲ ಸಿಎಂ ಭೇಟಿ ಮಾಡ್ತಿದ್ದ ವಿಶ್ವನಾಥ್ ಈಗ ದೂರ ಸರಿದಿದ್ದಾರೆ. ಈ ಮೂಲಕ ವಿಶ್ವನಾಥ್ ಅವರು ಸಿಎಂ ಬಿಎಸ್‍ವೈ ಅವರಿಂದ ಅಂತರ ಕಾಯ್ದುಕೊಂಡ್ರಾ ಎಂಬ ಪ್ರಶ್ನೆ ಮೂಡಿದೆ.
Advertisement
ಮತ್ತೊಬ್ಬ ವಲಸಿಗ ಆಕಾಂಕ್ಷಿ ಎಮ್ಮೆಲ್ಸಿ ಆರ್ ಶಂಕರ್ ಫುಲ್ ಸೈಲೆಂಟ್ ಆಗಿದ್ದಾರೆ. ಆರ್ ಶಂಕರ್ ಗೆ, ಬಿಜೆಪಿಗೆ ಬಂದು ತಪ್ಪು ಮಾಡಿದ್ನಾ ಅನ್ನೋ ಆಲೋಚನೆ ಬಂದಿದೆಯಂತೆ. ಸಚಿವಗಿರಿ ಇನ್ನೂ ಸಿಗದ ಹಿನ್ನೆಲೆಯಲ್ಲಿ ಶಂಕರ್ ಮೌನವಾಗಿದ್ದಾರೆ. ಯಾರ ಜತೆಗೂ ಹೆಚ್ಚು ಮಾತಾಡದೇ ಬೇಸರದಿಂದ ಮೌನಕ್ಕೆ ಜಾರಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.