ಬೆಂಗಳೂರು: ನಾಳೆ ಕರ್ನಾಟಕ ಬಂದ್ ಇರುವ ಹಿನ್ನೆಲೆಯಲ್ಲಿ ಬಸ್ ಇರುತ್ತದೋ ಇಲ್ಲವೋ ಎನ್ನುವ ಗೊಂದಲಕ್ಕೆ ಕೆಎಸ್‌ಆರ್‌ಟಿಸಿ ಪ್ರತಿಕ್ರಿಯಿಸಿದೆ.
ನಾಳೆಯ ಬಂದ್‌ಗೆ ಸಂಬಂಧಪಟ್ಟಂತೆ, ಕೆಎಸ್ಆರ್‌ಟಿಸಿ ಬಸ್ಸುಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ, ಎಂದಿನಂತೆ ಕಾರ್ಯಾಚರಣೆ ಇರಲಿದೆ. ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಹಾಗೂ ಆತಂಕ ಬೇಡ ಎಂದು ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: ಕರಾವಳಿಯ ಮೂರು ಜಿಲ್ಲೆ ಬಿಟ್ಟು ಉಳಿದ ಕಡೆ ನಾಳೆ ಕರ್ನಾಟಕ ಬಂದ್
ಸಾರಿಗೆ ವ್ಯವಸ್ಥೆಯು ಅಗತ್ಯ ಸೇವೆಯಾಗಿರುವುದರಿಂದ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ, ಪ್ರಯಾಣಿಕರ ಬೇಡಿಕೆ ಹಾಗೂ ಅಗತ್ಯನುಸಾರ
ಬಸ್ಸುಗಳ ಕಾರ್ಯಾಚರಣೆಯನ್ನು ಮಾಡಲಾಗುವುದು.
(2/2)
— KSRTC (@KSRTC_Journeys) September 27, 2020
ಸಾರಿಗೆ ವ್ಯವಸ್ಥೆಯು ಅಗತ್ಯ ಸೇವೆಯಾಗಿರುವುದರಿಂದ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ, ಪ್ರಯಾಣಿಕರ ಬೇಡಿಕೆ ಹಾಗೂ ಅಗತ್ಯನುಸಾರ ಬಸ್ಸುಗಳ ಕಾರ್ಯಾಚರಣೆಯನ್ನು ಮಾಡಲಾಗುವುದು ಎಂದು ಹೇಳಿದೆ.
ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳ ಜೊತೆ ಹಲವು ಸಂಘಟನೆಗಳು ಪ್ರತಿಭಟನೆ ಮಾಡಲಿದ್ದು ಈಗಾಗಲೇ ರಸ್ತೆ ತಡೆ ನಡೆಸುವುದಾಗಿ ತಿಳಿಸಿದೆ. ಹೀಗಾಗಿ ರಾಜ್ಯದ ಹಲವೆಡೆ ರಸ್ತೆ ಸಂಚಾರದ ವೇಳೆ ಸಮಸ್ಯೆಯಾಗುವ ಸಾಧ್ಯತೆಯಿದೆ.