ಈ ಬಾರಿ ಹೊಸ ವರ್ಷಾಚರಣೆಗೆ ಕೊರೊನಾ ಅಡ್ಡಗಾಲು ಹಾಕಿದೆ. ಕೊರೊನಾ ಜೊತೆ ಹೊಸ ತಳಿಯ ಆತಂಕ ಸಹ ಹೆಚ್ಚಾಗಿದೆ. ಮನೆಯಲ್ಲಿಯೇ ಇದ್ದು ಕುಟುಂಬಸ್ಥರ ಜೊತೆ ನೀವೇ ಕೇಕ್ ತಯಾರಿಸಿ 2021ನ್ನು ಸ್ವಾಗತಿಸಿಕೊಳ್ಳಿ. ಬೇಕರಿಯಿಂದ ಬಣ್ಣ ಬಣ್ಣದ ಕೆಮಿಕಲ್, ಕ್ರೀಮ್ ಲೇಪಿತ ಕೇಕ್ ತರುವ ಬದಲು ಆರೋಗ್ಯಕರವಾಗಿ ಹೊಸ ವರ್ಷ ಬರಮಾಡಿಕೊಳ್ಳಿ. ನಿಮಗಾಗಿ ಸರಳವಾಗಿ ಮಗ್ ಕೇಕ್ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಸಾಮಾಗ್ರಿಗಳು
* ಮೈದಾ – 1/2 ಕಪ್
* ಮೊಟ್ಟೆ -1
* ಸಕ್ಕರೆ – 3-4 ಸ್ಪೂನ್
* ಹಾಲು – ಸ್ವಲ್ಪ
* ವೆನಿಲಾ ಎಸೆನ್ಸ್- ಸ್ವಲ್ಪ
* ಬೇಕಿಂಗ್ ಪೌಡರ್ – ಚಿಟಿಕೆ
* ಸ್ಪ್ರಿಂಕಲ್ಸ್ – ಸ್ವಲ್ಪ
* ಬೆಣ್ಣೆ – 2 ಸ್ಪೂನ್
Advertisement
Advertisement
ಮಾಡುವ ವಿಧಾನ
* 2 ಕಾಫಿ ಮಗ್‍ಗೆ ಮೊದಲು ಬೆಣ್ಣೆ ಹಚ್ಚಿ.
* ಬಳಿಕ ಅದಕ್ಕೆ ಸ್ಪ್ರಿಂಕಲ್ಸ್ ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಮಿಕ್ಸ್ ಮಾಡಿ.
* ಈಗ ಮೈಕ್ರೋವೇವ್‍ನಲ್ಲಿಟ್ಟು 1 ನಿಮಿಷಗಳ ಕಾಲ ಬೇಯಿಸಿ.
* ಕೇಕ್ ಆದ್ಮೇಲೆ ಓವನ್‍ನಿಂದ ತೆಗೆದು ಕೇಕ್ ಮೇಲೆ ಫ್ರೆಶ್ ಕ್ರಿಮ್, ಸ್ಪ್ರಿಂಕಲ್ಸ್ ಹಾಕಿ ಸರ್ವ್ ಮಾಡಿ.