ಹಾವೇರಿ: ಅನುಮಾನಾಸ್ಪದ ರೀತಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹ ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಮೃತಪಟ್ಟವರನ್ನು ಪ್ರವೀಣ ಬಾಗಿಲದ(24) ಮತ್ತು ನೇತ್ರಾ ಬಾಳಿಕಾಯಿ(18) ಎಂದು ಗುರುತಿಸಲಾಗಿದೆ. ನೇತ್ರಾ ಮೂಲತಃ ಹಾವೇರಿ ತಾಲ್ಲೂಕು ಗೌರಾಪುರ ಗ್ರಾಮದ ನಿವಾಸಿಯಾಗಿದ್ದು, ಹಳೇರಿತ್ತಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಎಸ್.ಎಸ್‍ಎಲ್.ಸಿ ವಿದ್ಯಾಭ್ಯಾಸ ಮಾಡಿದ್ದಳು. ಪ್ರವೀಣ ಹಾವೇರಿ ತಾಲ್ಲೂಕು ಹಳೇರಿತ್ತಿ ಗ್ರಾಮದ ಯುವಕನಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಪ್ರೇಮಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
ಮೃತದೇಹಗಳ ಬಳಿ ಬೀಯರ್ ಬಾಟಲಿ, ವಿಷದ ಬಾಟಲಿ ಮತ್ತು ಚಾಕು ಪತ್ತೆಯಾಗಿದೆ. ಅಲ್ಲದೆ ಮೃತದೇಹಗಳಿಂದ ಇನ್ನೂರು ಮೀಟರ್ ಸಮೀಪದಲ್ಲಿ ಪ್ರವೀಣ ತಂದಿದ್ದ ಬೈಕ್ ನಿಂತಿತ್ತು.
Advertisement
ಕಳೆದ ಗುರುವಾರ ಮಗಳು ಮನೆ ಬಿಟ್ಟು ಹೋಗಿದ್ದಾಳೆ. ನಾವು ಊರು ಹಾಗೂ ಸಂಬಂಧಿಕರ ಮನೆಂiÀಲ್ಲೆಲ್ಲ ಹುಡುಕಾಟ ನಡೆಸಿ ಕೊನೆಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆದರೆ ಈಗ ಮೃತದೇಹ ಪತ್ತೆಯಾಗಿದೆ. ಎರಡು ಕುಟುಂಬ ಸದಸ್ಯರು ಮಕ್ಕಳನ್ನ ನೆನೆದು ಕಣ್ಣೀರು ಹಾಕುತ್ತಿದ್ದಾರೆ.
Advertisement
ಈ ಘಟನೆಯು ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಯುವಕನ ಸಂಬಂಧಿಕರು ಸಾವಿನ ವಿಚಾರವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ದು, ತನಿಖೆಯಾಗಬೇಕು ಆಗ್ರಹಿಸಿದ್ದಾರೆ.