ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನವಷ್ಟೇ ಬಾಕಿ ಇದೆ. ಈ ನಡುವೆ ಪಕ್ಷೇತರ ಅಭ್ಯರ್ಥಿಯೋರ್ವ ಕಲ್ಲಂಗಡಿ ಹಣ್ಣನ್ನು ಹೊತ್ತುಕೊಂಡು ನಾಮಪತ್ರ ಸಲ್ಲಿಸಲು ಬಂದಿದ್ದಾನೆ. ಕ್ಷೇತ್ರದ ಸಾರ್ವಜನಿಕರನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಈ ವ್ಯಕ್ತಿ ಕಲ್ಲಂಗಡಿ ಹಣ್ಣನ್ನು ಹೊತ್ತೊಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಆತ, ತಾನು ನಾಮಪತ್ರ ಸಲ್ಲಿಸಲು ಕಲ್ಲಂಗಡಿ ಹಣ್ಣಿನೊಂದಿಗೆ ಬಂದಿದ್ದೇನೆ. ಇದು ನನ್ನ ಪಕ್ಷದ ಚುನಾವಣಾ ಚಿಹ್ನೆಯಾಗಿದೆ. ಈ ಒಂದೇ ಚಿಹ್ನೆಯನ್ನು ಬಳಸಿಕೊಂಡು ನಾನು ನಾಲ್ಕನೇಯ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಪಕ್ಷಗಳು ಬದಲಾವಣೆ ಮಾಡುವಂತೆ ಭರವಸೆ ನೀಡುತ್ತದೆ. ಸಿನಿಮಾ ನಟರು ಮತ್ತು ರಾಜಕಾರಣಿಗಳಲ್ಲಿ ಯಾವುದೇ ಬದಲಾವಣೆ ನೋಡಲು ಆಗುವುದಿಲ್ಲ. ನಮ್ಮಂತ ಜನರಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
Advertisement
Advertisement
ಚುನಾವಣೆ ಪ್ರಕಾರ ನಡೆಸಲು ನನ್ನ ಬಳಿ ಹಣವಿಲ್ಲ. ಮೊದಲನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನಗೆ 100 ಮತ ಬಂದಿತ್ತು. 2ನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ 400 ಮತ ಗಳಿಸಿದ್ದೆ. ಆದರೆ ಈ ಬಾರಿ ಸುಮಾರು 10 ಸಾವಿರ ಮತ ಪಡೆಯುತ್ತೇನೆ ಎಂಬ ನಿರೀಕ್ಷೆ ಹೊಂದಿದ್ದೇನೆ. ಅಲ್ಲದೆ ಜನರು ಬೆಂಬಲಿಸಿದರೆ ನಾನು ಗೆದ್ದರು, ಗೆಲ್ಲುತ್ತೇನೆ ಎಂದು ನುಡಿದರು.
Advertisement
Advertisement
ತಮಿಳುನಾಡು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 19ರ ಮಧ್ಯಾಹ್ನ 3 ಗಂಟೆಯವರೆಗೂ ಅವಕಾಶವಿದೆ. ಏಪ್ರಿಲ್ 6 ರಂದು ತಮಿಳನಾಡು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಏಣಿಕೆ ನಡೆಯಲಿದೆ.