– ಕಡಿಮೆ ಅಂಕಗಳಿಸಿದ್ದ ಹುಡುಗಿ
– ಮೊಬೈಲ್ ಕಸಿದು ಗದರಿಸಿದ್ದ ಹೆತ್ತವರು
ದುಬೈ: ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಹುಡುಕಾಟ ನಡೆಸುತ್ತಿದ್ದರೆ, ಇತ್ತ ಹುಡುಗಿ ಮನೆಯ ಟೇರಸ್ ಮೇಲೆ ಇದ್ದು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ದುಬೈನಲ್ಲಿ ನಡೆದಿದೆ.
ಹರಣಿ(15) ಮುಂಜಾನೆ ವಾಕಿಂಗ್ ಎಂದು ಹೊದವಳು ನಾಪತ್ತೆಯಾಗಿದ್ದಳು. ಈಕೆಯನ್ನು ಸುತ್ತಮೂತ್ತಲೂ ಹುಡುಕುತ್ತಿದ್ದರೆ ಈಕೆ ಮನೆಯ ಟೇರಸ್ ಮೇಲೆ ಅಡಗಿ ಕುಳಿತಿದ್ದಳು ಎಂದು ತಿಳಿದು ಬಂದಿದೆ.
ಕಳೆದ ಕೆಲವು ದಿನಗಳಿಂದ ಮಗಳು ಕಾಣುತ್ತಿಲ್ಲ ಎಂದು ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಮಗಳು ನಾಪತ್ತೆಯಾಗಿದ್ದಾಳೆ ಹುಡುಕಲು ಸಹಾಯ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿಯನ್ನು ಮಾಡಿದ್ದರು.
ಬಾಲಕಿ ಕಡಿಮೆ ಅಂಕವನ್ನು ಗಳಿಸಿದ್ದಳು. ಈ ವಿಚಾರವನ್ನು ತಿಳಿದ ಹೆತ್ತವರು ಗದರಿಸಿದ್ದರು. ಆಕೆಯ ಮೊಬೈಲ್ ಫೋನ್ ಕಸಿದುಕೊಂಡಿದ್ದರು. ಇದರಿಂದ ಬೇಸರಗೊಂಡ ಹರಿಣಿ ತನ್ನದೇ ಮನೆಯ ಟೇರಸ್ ಮೇಲೆ ಅವಿತು ಕುತಿದ್ದಳು. ಎಲ್ಲಾಕಡೆ ಹೆತ್ತವರು ಹುಡುಕಲು ಪ್ರಾರಂಭಿಸಿದ್ದರು. ಕೊನೆಗೆ ಹರಣಿ ಟೇರಸ್‍ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.