ನವದೆಹಲಿ: ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಇದೀಗ ಅವರು ಕೊಟ್ಟಿರುವ ಒಂದು ಹೇಳಿಕೆ ಸಖತ್ ಸುದ್ದಿಯಾಗುತ್ತಿದೆ.
ನೀರಜ್ ಚೋಪ್ರಾ ಅವರ ವೈಯಕ್ತಿಕ ಜೀವನ ಕುರಿತಾಗಿ ಎಲ್ಲವನ್ನೂ ತಿಳಿದುಕೊಳ್ಳಲು ಅಭಿಮಾನಿಗಳು ಆಸಕ್ತಿ ಹೊಂದಿದ್ದಾರೆ. ಚಿನ್ನವನ್ನು ಹೇಗೆ ಗೆದ್ದರು? ಇವರ ಸಾಧನೆ ಹಿಂದೆಯಾರಿದ್ದಾರೆ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದೀಗ ಇವರು ಸಂದರ್ಶನವೊಂದರಲ್ಲಿ ಹೇಳಿರುವ ಒಂದು ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲು ನಿಷೇಧ: ಬೊಮ್ಮಾಯಿ ಆದೇಶ
ಮಹಿಳಾ ಅಭಿಮಾನಿಗಳಿಂದ ಇಷ್ಟೊಂದು ಪ್ರಿತಿ, ಮೆಚ್ಚುಗೆ ಬರುತ್ತಿದೆ ಈ ಕುರಿತಾಗಿ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ನೀರಜ್, ಇದು ಒಳ್ಳೆಯದು. ಆದರೆ ಸತ್ಯವನ್ನು ಹೇಳಬೇಕು ಎಂದರೆ, ನಾನು ಇನ್ನೂ ಸೀಂಗಲ್. ನಾನು ಅಭಿಮಾನಿಗಳಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಇದು ಸಂತೋಷದ ವಿಚಾರವಾಗಿದೆ. ಮುಂಬರುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‍ಶಿಪ್ ಮೇಲೆ ಕಣ್ಣಿಟ್ಟಿದ್ದೇನೆ. ಹಾಗಾಗಿ ನಾನು ನನ್ನ ಆಟದ ಮೇಲೆ ಗಮನ ಹರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನಿಮಗೆ ಯಾರಾದ್ರೂ ಗರ್ಲ್ ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ನಾನು ಮುಂದಿನ ದಿನಗಳಲ್ಲಿ ಯೋಚನೆ ಮಾಡುತ್ತೇನೆ. ಸದ್ಯ ಈಗ ನನ್ನ ಗಮನ ನನ್ನ ಆಟ ಮತ್ತು ಗುರಿಯ ಮೇಲಿದೆ ಎಂದು ಹೇಳಿದ್ದಾರೆ.
ನಿಮ್ಮ ಉದ್ದನೆಯ ಕೂದಲಿಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ ಏನ್ ಹೇಳುತ್ತೀರಿ ಎಂದು ಕೇಳಿದಾಗ ನೀರಜ್ ಚೋಪ್ರಾ, ಚಿಕ್ಕವನಿದ್ದಾಗಿನಿಂದಲೂ ನನಗೆ ಉದ್ದನೆಯ ಕೂದಲು ಇದೆ. ಇತ್ತೀಚೆಗೆ ಅದು ನನ್ನನ್ನು ಕಾಡಲಾರಂಭಿಸಿತು. ಕೆಲವು ಸ್ಪರ್ಧೆಗಳ ಸಮಯದಲ್ಲಿ, ಅದು ನನ್ನ ಕಣ್ಣಿಗೆ ಬೀಳುತ್ತದೆ. ನಾನು ಅದನ್ನು ಇರಿಸಿಕೊಳ್ಳಲು ಹೆಡ್‍ಬ್ಯಾಂಡ್‍ಗಳು ಮತ್ತು ಕ್ಯಾಪ್‍ಗಳನ್ನು ಪ್ರಯತ್ನಿಸಿದೆ ಆದರೆ ಅದು ನನ್ನ ಕಣ್ಣಿಗೆ ಬರುತ್ತದೆ ಎಂದು ಹೇಳಿದ್ದಾರೆ.