– ಬೆಂಗ್ಳೂರು, ಬೆಳಗಾವಿಗೆ ಸರ್ಕಾರ ಸೀಮಿತ ಆಗಿದೆ
– ಬೇಸರ ಆಗಿದೆ, ಯಾರೆದೂರು ಹೇಳಿಕೊಳ್ಳಲಿ
ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೊನ್ನಾಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ಕಣ್ಣೀರು ಹಾಕಿದ್ದಾರೆ.
ಇಂದು ಸಿಎಂ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನಾನು ನೇರ ಹಾಗೂ ನಿಷ್ಠುರವಾಗಿ ಮಾತಾಡುತ್ತೇನೆ. ಅದೇ ನನಗೆ ಇಂದು ಮುಳುವಾಗಿದೆ ಅನಿಸುತ್ತಿದೆ. ನಾನು ಲಾಬಿ ಮಾಡಬಹುದಾಗಿತ್ತು, ಆದರೆ ಎಂದು ನಾನು ಮಾಡಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಕ್ಷೇತ್ರ ಎಂದು ಕೆಲಸ ಮಾಡಿದವರು ಮನೆಯಲ್ಲಿದ್ದಾರೆ. ಲಾಬಿ ಮಾಡಿದವರು ಸಚಿವರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವ ಸ್ಥಾನಕ್ಕೆ ಅರ್ಜಿಯೂ ಇಂದೂ ಹಾಕಿಲ್ಲ, ಮುಂದೆಯೂ ಹಾಕಲ್ಲ. ಬೇಸರ ಆಗಿದ್ದು, ಯಾರ ಮುಂದೆ ಹೇಳಿಕೊಳ್ಳಿಲ್ಲ. ಕ್ಷೇತ್ರದ ಜನತೆಗೆ ಸಿಎಂ ನಿರ್ಧಾರ ಬೇಸರ ತರಿಸಿದೆ. ಸಚಿವರಾಗಲು ಅರ್ಹತೆ ಬೇಕು. ನಾನು ಅಸಮರ್ಥನಿರಬಹುದು, ಹಾಗಾಗಿ ಮಾಡಿರಲಿಕ್ಕಿಲ್ಲ. ಸಚಿವರಾಗಲು ಕೆಲವು ಕ್ವಾಲಿಫಿಕೇಷನ್ ಬೇಕು. ನಾನು ಜನರಲ್ ಕೋಟಾ ಹಾಗಾಗಿ ನಾನು ಮಂತ್ರಿಯಾಗಿಲ್ಲ ನಾನು ಅಸಮರ್ಥ ಎಂದರು.
ನನ್ನ ಮತದಾರರೇ ನನ್ನ ದೇವರು. ವೈಯಕ್ತಿಕವಾಗಿ ಬೇಸರ ಆಗಿದೆ. ಯಾರು ಹತ್ತಿರ ಹೇಳಿಕೊಳ್ಳಲಿ. ನಾನು ಶಾಸಕನಾಗಿ ಕೆಲಸ ಮಾಡಿಲ್ಲ, ಮಾಲಿಯಾಗಿ ಕೆಲಸ ಮಾಡ್ತೇನೆ. ನನಗೆ ಸ್ವಾಭಿಮಾನ ಇದೆ. ಸಂದರ್ಭ ಬಂದಾಗ ಸೂಕ್ತ ನಿರ್ಧಾರ ತೆಗೆದುಕೊsಳ್ಳತ್ತೇನೆ ನನಗೆ ಸಾಮಥ್ರ್ಯ ಎಂದು ಹೇಳಿದ್ದಾರೆ.
ನಮ್ಮ ಕ್ಷೇತ್ರದ ಜನತೆಗೆ ಬೇಸರವಾಗಿದೆ. ಸರ್ಕಾರ ಅಂದ್ರೇ ಬೆಳಗಾವಿ, ಬೆಂಗಳೂರು ಮಾತ್ರವಲ್ಲ, ಯಾವುದು ಸಭೆ ಮಾಡಲ್ಲ. ಮುಖ್ಯಮಂತ್ರಿಯನ್ನು ಭೇಟಿಯಾಗಲ್ಲ. ಮಂತ್ರಿಗಿರಿಗೆ ಅಪ್ಲಿಕೇಷನ್ ಹಾಕಲ್ಲ. ಸಂದರ್ಭ ಬಂದಾಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇನೆ. ನನ್ನ ಕ್ಷೇತ್ರದ ಜನತೆ ಜೊತೆ ಇರ್ತೇನೆ ಎಂದು ಹೇಳಿದ್ದಾರೆ.