ಬೀಜಿಂಗ್: ಹಾಲಿವುಡ್ ಖ್ಯಾತ ಆಕ್ಷನ್ ನಟ ಹಾಂಕಾಂಗ್ ಮೂಲದ ಜಾಕಿ ಚಾನ್ ರಾಜಕೀಯ ಸೇರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
ಕಳೆದ ವಾರ ನಡೆದ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಆಡಳಿತರೂಢ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ(ಸಿಪಿಸಿ)ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
Advertisement
ಜುಲೈ 1 ರಂದು ಪಕ್ಷದ ಶತಮಾನೋತ್ಸವ ಸಮಾರಂಭದಲ್ಲಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಮಾಡಿದ ಪ್ರಧಾನ ಭಾಷಣದ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭದಲ್ಲಿ ರಾಜಕೀಯ ಸೇರುವ ಬಗ್ಗೆ ಜಾಕಿ ಚಾನ್ ಮಾತನಾಡಿದರು. ಇದನ್ನೂ ಓದಿ : ರಾಜಕೀಯಕ್ಕೆ ನಾನು ಬರಲ್ಲ – ಸಂಘವನ್ನು ವಿಸರ್ಜಿಸಿದ ರಜನಿಕಾಂತ್
Advertisement
Advertisement
ಚೀನಾ ಫಿಲ್ಮ್ ಅಸೋಸಿಯೇಷನ್‍ನ ಉಪಾಧ್ಯಕ್ಷರೂ ಆಗಿರುವ ಜಾಕಿ ಚಾನ್, ಸಿಪಿಸಿಯ ಹಿರಿಮೆಯನ್ನು ನಾನು ನೋಡಬಲ್ಲೆ. ಪಕ್ಷ ಹೇಳಿದ್ದನ್ನು ಮಾಡಿ ತೋರಿಸಿದೆ. 100 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತಾನು ನೀಡಿದ ಭರವಸೆಯನ್ನು ಕೆಲವೇ ದಶಕಗಳಲ್ಲಿ ಈಡೇರಿಸಿದೆ. ಹೀಗಾಗಿ ನಾನು ಸಿಪಿಸಿ ಸದಸ್ಯನಾಗಬೇಕೆಂಬ ಆಸೆಯಿದೆ ಎಂದು ಹೇಳಿದರು.
Advertisement
2019ರಲ್ಲಿ ಮಾತನಾಡಿದ್ದ ಜಾಕಿ ಚಾನ್, ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದ ಕಡೆ ಎಲ್ಲ ನಾನು ಚೈನೀಸ್ ಎಂದು ಹೇಳಲು ಹೆಮ್ಮೆ ಆಗುತ್ತಿದೆ. ಐದು ನಕ್ಷತ್ರಗಳ ಕೆಂಪು ಧ್ವಜವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಹಾಂಕಾಂಗ್ ಹೋರಾಟವನ್ನು ವಿರೋಧಿಸಿ ಈ ಹಿಂದೆ ಜಾಕಿ ಚಾನ್ ಮಾತನಾಡಿದ್ದರು. ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹಾಂಕಾಂಗ್ ಮತ್ತು ಚೀನಾ ನನ್ನ ಜನ್ಮಸ್ಥಳ ಮತ್ತು ನನ್ನ ಮನೆ ಇದ್ದಂತೆ. ಚೀನಾ ನನ್ನ ದೇಶ, ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ನನ್ನ ಮನೆಯನ್ನು ಪ್ರೀತಿಸುತ್ತೇನೆ. ಹಾಂಕಾಂಗ್‍ನಲ್ಲಿ ಶೀಘ್ರ ಶಾಂತಿ ನೆಲಸಬಹುದು ಎಂದು ಭಾವಿಸುತ್ತೇನೆ ಎಂದು ಎಂದು ಹೇಳಿದರು.