ನಾನು ನನ್ನ ಹೆಂಡತಿಯನ್ನು ಮನವೊಲಿಸಬೇಕಾಗಿಲ್ಲ: ಕೆ.ಕಲ್ಯಾಣ್

Public TV
3 Min Read
kalyan 16

– ಕವನ, ಸಾಹಿತ್ಯದಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲ
– ನನ್ನ ಪತ್ನಿಯನ್ನ ತುಂಬಾ ಪ್ರೀತಿಸುವೆ

ಬೆಳಗಾವಿ: ನಾನು ನನ್ನ ಪತ್ನಿಯನ್ನು ಮನವೊಲಿಸಲು ಅವಳನ್ನ ತಬ್ಬಿಕೊಂಡು, ಮುತ್ತುಕೊಟ್ಟು. ತಲೆ ನೇವರಿಸಿ, ಕಾಲಿಗೆ ಬಿದ್ದು ಮನವೊಲಿಸಬಹುದು. ಆದರೆ ಇದೂ ನಮ್ಮ ಖಾಸಗಿ ಬದುಕು. ಈಗ ಸಾರ್ವಜನಿಕ ಆಗಿರುವುದರಿಂದ ಉತ್ತರಿಸುತ್ತಿರುವೆ. ನಮ್ಮಿಬ್ಬರ ಮಧ್ಯೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ ಎಂದು ಕೆ.ಕಲ್ಯಾಣ್ ಹೇಳಿದರು. ಇದನ್ನೂ ಓದಿ: ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ

k.kalyan

ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಆರೋಪಿಸಿದ್ದರು. ಆದರೆ ಕೆ.ಕಲ್ಯಾಣ್ ಪತ್ನಿಯ ಆರೋಪಿಗಳನ್ನು ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮಕವಿ, ಬೆಳಗಾವಿಗೆ ಬಂದ ಮೇಲೆ ಒಂದು ದಿನವೂ ನನ್ನ ವಿರುದ್ಧ ಮಾತನಾಡವರು ಇಂದು ಏಕಾಎಕಿ ಪತ್ನಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ನನ್ನ ಪತ್ನಿ ಅವರ ಕುಟುಂಬದವರ ಜೊತೆಗೂ ಸಂಪರ್ಕದಲ್ಲೂ ಇಲ್ಲ. ಪತ್ನಿಯ ಆಸ್ತಿಯ ಮೇಲೆ ನನಗೆ ಆ ಶಕ್ತಿ ಇದ್ದಿದ್ದರೆ 15 ವರ್ಷದಲ್ಲಿ ಬರೆಸಿಕೊಳ್ಳಬಹುದಿತ್ತು. ಆದರೆ ನಾನು ನನ್ನ ಪತ್ನಿಯನ್ನ ತುಂಬಾ ಪ್ರೀತಿಸುವೆ. ನಾನು ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಮಾಡಿಲ್ಲ. ಈ ಆರೋಪವನ್ನ ನಾನು ಒಪ್ಪಲ್ಲ ಎಂದು ಸ್ಪಷ್ಟಪಡಿಸಿದರು.

kalyan 14

ನನ್ನ ಹೆಂಡತಿ ತುಂಬಾ ಒಳ್ಳೆಯಳು. ನಾನು ಹಿಂಸೆ ಕೊಟ್ಟಿದ್ದರೆ ಇಷ್ಟು ವರ್ಷ ಸುಮ್ಮನೆ ಯಾಕೆ ಇರಬೇಕಿತ್ತು ಎಂದು ಪ್ರಶ್ನೆ ಮಾಡಿದರು. ಮೊದಲಿಗೆ ನಾನು ಮಾಟ, ಮಂತ್ರ ನಂಬಲ್ಲ. ಹೀಗಾಗಿ ನಾನೇ ಮಾಟ, ಮಂತ್ರದ ಮೂಲಕ ಯಾಕೆ ಆಸ್ತಿ ಪಡೆಯಲು ಪ್ಲ್ಯಾನ್ ಮಾಡಲಿ. ಒಂದು ವೇಳೆ ನನಗೆ ಬ್ಲ್ಯಾಕ್ ಮ್ಯಾಜಿಕ್ ಬಂದಿದ್ದರೆ ನನ್ನ ಪತ್ನಿ ಬೆಳಗಾವಿಗೆ ಹೋಗುವದನ್ನು ತಪ್ಪಿಸುತ್ತಿದ್ದೆ. ನಾನು ಬೆಂಗಳೂರಲ್ಲಿ ಇದ್ದುಕೊಂಡು ಆಕೆಯನ್ನು ವಾಪಸ್ ಕರೆಸಿಕೊಳ್ಳುತ್ತಿದ್ದೆ ಎಂದರು.

kalyan 8

ಕಳೆದ ನವೆಂಬರ್ ತಿಂಗಳಿನಲ್ಲಿ ಶಿವಾನಂದ ವಾಲಿಯರ ಹೆಸರು ಗೊತ್ತಾಗಿದ್ದು. ಶಿವಾನಂದ ವಾಲಿಗೆ 20 ಲಕ್ಷ ರೂಪಾಯಿ ಹೋಗಿದೆ. ಅಲ್ಲದೇ ನಾನು ಕೊಡಿಸಿದ ಒಡವೆಗಳು ಅವಳ ಬಳಿ ಇಲ್ಲ. ಶಿವಾನಂದ ವಾಲಿಗೆ ನನ್ನ ಸಂಬಂಧಿಕರು ಅಲ್ಲ. ನನ್ನ ಪತ್ನಿ ಬಳಿ ಮಾಂಗಲ್ಯ, ಕಾಲುಂಗುರ ಕೂಡ ಇಲ್ಲ. ಆದರೆ ನನ್ನ ಪತ್ನಿ ಆ ರೀತಿ ಮಾಡುವಂತರಲ್ಲ. ಹೀಗಾಗಿ ಏನೋ ನಡೆದಿದೆ. ನಮ್ಮ ಮನೆಯಲ್ಲಿ ದೆವ್ವ ಭೂತ ಕಾಣಿಸುತ್ತಾ ಇದೆ ಅಂತ ಗಂಗಾ ಕುಲಕರ್ಣಿ ನಮ್ಮ ಅತ್ತೆ ಮಾವನವರಿಗೆ ಹೆದರಿಸುತ್ತಿದ್ದರು ಎಂದು ಕೆ.ಕಲ್ಯಾಣ್ ಹೇಳಿದರು.

kalyan 11 1

ನನ್ನ ಪತ್ನಿಯ ಕುಟುಂಬಸ್ಥರು ನನ್ನ ಜೊತೆ ಸಂಪರ್ಕದಲ್ಲಿ ಇದ್ದಾರೆ. ಡೈವರ್ಸ್ ಅರ್ಜಿ ಹಾಕಿದ್ದರೆ ನನಗೆ ನೋಟಿಸ್ ಬರಬೇಕಿತ್ತು. ಆದರೆ ಶನಿವಾರ ನನಗೆ ಈ ವಿಚಾರ ಗೊತ್ತಾಗಿದೆ. ಪ್ರೀತಿಯನ್ನ, ಮನಸ್ಸುಗಳನ್ನ ಬಲವಂತವಾಗಿ ಕಟ್ಟಿ ಹಾಕಲು ಆಗಲ್ಲ. ನನ್ನ ಪತ್ನಿ ವಿವೇಚನೆಯಿಂದ ಮಾತನಾಡುತ್ತಿಲ್ಲ. ನನ್ನ ಪತ್ನಿಯ ಹೆಸರಿನ ಆಸ್ತಿ ಶಿವಾನಂದ ವಾಲಿ ಹೆಸರಿಗೆ ಹೋಗಿದೆ. ನಾನು ಮಾಟ ಮಂತ್ರ ನಂಬಲ್ಲ. ಆದರೆ ಶಿವಾನಂದ ವಾಲಿ ಮಾಟ ಮಂತ್ರದಿಂದ ನನ್ನ ಪತ್ನಿಯ ಮೇಲೆ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಇದರಿಂದ ಸಂಸಾರದಲ್ಲಿ ಬಿರುಕು ಹುಟ್ಟಿಸಿದ್ದಾರೆ. ನಮ್ಮ ಜೀವನದಲ್ಲಿ ಬಿರುಕು ಇರಲಿಲ್ಲ. ಆದರೆ ಶಿವನಂದ ಬಿರುಕು ತಂದಿದ್ದಾರೆ ಎಂದಿದ್ದಾರೆ.

kalyan 7

ನಾನು ನನ್ನ ಪತ್ನಿಯನ್ನ ಮನವೊಲಿಸಬೇಕಾಗಿಲ್ಲ. ಆದರೆ ನನ್ನ ಪತ್ನಿ ನನ್ನ ಜೊತೆ ಮಾತನಾಡಲು ಬಿಡುತ್ತಿಲ್ಲ. ನಮ್ಮಿಬ್ಬರ ಮಧ್ಯೆ ಬಿರುಕು ಅನ್ನೋದೇ ಇಲ್ಲ. ಪತ್ನಿಯ ಜೊತೆ ಕೆಲ ಗಂಟೆಗಳ ಕಾಲ ಜೊತೆಗೆ ಇದ್ದರೆ ಸಾಕು ಸರಿ ಹೋಗುತ್ತದೆ. ನಾನು ನನ್ನ ಪತ್ನಿಯನ್ನ ಮನವೊಲಿಸಲು ಅವಳನ್ನ ತಬ್ಬಿಕೊಂಡು, ಮುತ್ತುಕೊಟ್ಟು. ತಲೆ ನೇವರಿಸಿ, ಕಾಲಿಗೆ ಬಿದ್ದು ಮನವೊಲಿಸಬಹುದು. ಆದರೆ ಇದೂ ನಮ್ಮ ಖಾಸಗಿ ಬದುಕು. ಈಗ ಸಾರ್ವಜನಿಕ ಆಗಿರುವುದರಿಂದ ಉತ್ತರಿಸುತ್ತಿರುವೆ. ನಮ್ಮಿಬ್ಬರ ಮಧ್ಯೆ ಕಮ್ಯೂನಿಕೇಷನ್ ಗ್ಯಾಪ್ ಆಗಿದೆ. ಕವನ, ಸಾಹಿತ್ಯದಿಂದ ಪ್ರೀತಿ ಪಡೆಯಲು ಸಾಧ್ಯವಿಲ್ಲ. ತೀರಾ ಮೀತಿ ಮೀರಿ ಡೈವರ್ಸ್ ಅಂತ ಬಂದರೆ ನ್ಯಾಯಾಲಯದಲ್ಲಿ ಕೌನ್ಸಲಿಂಗ್ ವೇಳೆ ನಾನು ಮನವೊಲಿಸುವ ಪ್ರಯತ್ನ ಮಾಡುವೆ ಎಂದರು.

kalyan 3

ಬಿರುಕುಗಳು ಸಹಜ. ಆದರೆ ಒತ್ತಡದಿಂದ ಬಗೆಹರಿಸಲು ಸಾಧ್ಯವಿಲ್ಲ. ಎಲ್ಲವೂ ಒಳ್ಳೆಯದಾಗುತ್ತೆ ಅನ್ನೋ ನಂಬಿಕೆ ಇದೆ. ಗಂಡ ಹೆಂಡತಿಯನ್ನ ಬದುಕಲು ಬಿಡಿ. ಹಣ ಹೋದರೆ ಗಳಿಸಬಹುದು. ಆದರೆ ಮನಸ್ಸುಗಳು ಒಡೆದರೆ ಒಂದಾಗೋದು ಕಷ್ಟ. ನನ್ನ ಪತ್ನಿಯ ಸಂಬಂಧಿಕರು ನನ್ನ ಜೊತೆ ಇದ್ದಾರೆ. ನನ್ನ ಪತ್ನಿಯನ್ನ ಕೌನ್ಸಲಿಂಗ್ ಮಾಡುತ್ತಿದ್ದಾರೆ. ಸದ್ಯಕ್ಕೆ ನನ್ನ ಪತ್ನಿ ಭಯದ ವಾತಾವರಣದಲ್ಲಿ ಇದ್ದಾರೆ. ಆಪ್ತ ಸಮಾಲೋಚನೆಗೆ ಕರೆದರೆ ನಾನು ಹೋಗುವೆ. ಪತ್ನಿಯೂ ಸಹ ಸುಧಾರಿಸಿಕೊಳ್ಳಲಿ, ನಾನು ಭೇಟಿ ಮಾಡಿ ಮನವೊಲಿಸುವೆ ಎಂದು ಕೆ.ಕಲ್ಯಾಣ್ ತಿಳಿಸಿದರು.

Share This Article