ಬಿಗ್ಬಾಸ್ ಮನೆಯಲ್ಲಿ ಚಿಕ್ಕ ಮಕ್ಕಳಂತೆ ಕ್ಯೂಟ್ ಕ್ಯೂಟ್ ಆಗಿ ಎಲ್ಲರ ಮಧ್ಯೆ ಎಂಟರ್ಟೈನ್ ಮಾಡುವ ಶುಭಾ ಪೂಂಜಾಗೆ ಶ್ವಾನ ಎಂದರೆ ಬಹಳ ಇಷ್ಟ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಶುಭಾ ಟೈಗರ್ ವೊಂದನ್ನು ಕೂಡ ಸಾಕಿರುವುದಾಗಿ ದಿವ್ಯಾ ಉರುಡುಗ ಜೊತೆ ಹೇಳಿದ್ದಾರೆ.
Advertisement
ಬೆಳಗ್ಗೆ ಎದ್ದ ಕೂಡಲೇ ಕಿಚನ್ನಲ್ಲಿ ಟಿಫನ್ಗೆ ತಯಾರಿ ನಡೆಸುತ್ತಿದ್ದ ವೇಳೆ, ಶುಭಾ ಪೂಂಜಾ ನಾನು ಕನಸಿನಲ್ಲಿ ಟೈಗರ್ ಸಾಕಿದ್ದೆ, ಅದರ ಜೊತೆ ಆಟ ಆಡುತ್ತಿದ್ದೆ, ಅದಕ್ಕೆ ಚಿಕನ್ ಕೊಡುತ್ತಿದ್ದೆ. ನನಗೆ ಟೈಗರ್ ಬೇಕು ಎಂದು ಶುಭಾ ಪೂಂಜಾ ದಿವ್ಯಾ ಉರುಡುಗಗೆ ಕೇಳಿದ್ದಾರೆ.
Advertisement
Advertisement
ಆಗ ದಿವ್ಯಾ ಉರುಡುಗ ಟೈಗರ್ ಹೊರಗಡೆ ಕಾಫಿ ಕುಡಿಯುತ್ತಿದೆ ಎಂದು ಮಂಜುಗೆ ಪರೋಕ್ಷವಾಗಿ ಹೇಳುತ್ತಾರೆ. ಇದಕ್ಕೆ ಶುಭಾ ಅದು ಟೈಗರ್ ಅಲ್ಲ ಕೋತಿ ಮರಿ ಎಂದಾಗ ದಿವ್ಯಾ ಉರುಡುಗ ಅದನ್ನು ನೀನು ಯಾವ ಆಂಗಲ್ನಲ್ಲಿ ಬೇಕಾದರೂ ಮಾಡಿಕೊಳ್ಳಬಹುದು, ಅದು ಸ್ವಲ್ಪ ಪಗ್ ತರ ಕಾಣಿಸಬಹುದು, ಆದರೆ ಅದು ಟೈಗರ್ ರೇ ಎನ್ನುತ್ತಾರೆ. ಅದಕ್ಕೆ ಶುಭಾ ಪೂಂಜಾ ಫೇಕ್ ಟೈಗರ್ ಅದು, ಡಬಲ್ ಆ್ಯಕ್ಟಿಂಗ್ ಟೈಗರ್ ಎಂದಿದ್ದಾರೆ.
Advertisement
ನಂತರ ದಿವ್ಯಾ ಉರುಡುಗ ಅರವಿಂದ್ ತೋರಿಸಿ, ಸ್ಟ್ರಿಕ್ಟ್ ಆಗಿರುವ ಟೈಗರ್ ಬೇಕಾ ಎಂದು ಕೇಳುತ್ತಾರೆ. ಇದಕ್ಕೆ ಶುಭಾ ಅದು ಬರೀ ಕಚ್ಚುತ್ತೆ, ಗುರ್ ಅನ್ನುತ್ತೆ ಎಂದು ಹೇಳುತ್ತಾ ಇಬ್ಬರು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ:ಮಂಜುಗೆ ಊಟ ಮಾಡಿಸಲು ವೈಷ್ಣವಿ, ಪ್ರಶಾಂತ್ ಸರ್ಕಸ್