‘ನಾನು ಅತ್ತಿದ್ದೇನೆ, ಈಗ ನಿನ್ನ ಸರದಿ’- ಮಾಜಿ ಲವ್ವರ್‌ಗೆ ಒಂದು ಟನ್ ಈರುಳ್ಳಿ ಕಳುಹಿಸಿದ ಪ್ರೇಯಸಿ

Public TV
1 Min Read
onion

ಬೀಜಿಂಗ್: ಪ್ರೇಯಸಿಯೊಬ್ಬಳು ತನಗೆ ಕೈಕೊಟ್ಟ ಪ್ರಿಯತಮನಿಗೆ ಒಂದು ಟನ್ ಈರುಳ್ಳಿ ಕಳುಹಿಸಿರುವ ಘಟನೆ ಚೀನಾದಲ್ಲಿ ನಡೆದಿದೆ.

ಯುವತಿ ತನ್ನ ಗೆಳೆಯ ಮೋಸ ಮಾಡಿದ್ದರಿಂದ ನೊಂದು ಆತನಿಗೆ ಒಂದು ಟನ್ ಈರುಳ್ಳಿ ಕಳುಹಿಸುವ ಮೂಲಕ ಶಿಕ್ಷೆ ನೀಡಲು ನಿರ್ಧರಿಸಿದ್ದಳು. ಅದರಂತೆಯೇ ಆಕೆ ಪ್ರಿಯತಮನ ಮನೆಗೆ ಒಂದು ಟನ್ ಈರುಳ್ಳಿ ಕಳುಹಿಸಿದ್ದಾಳೆ. ಯುವತಿ ಪ್ರಿಯತಮನಿಂದ ಬೇರೆಯಾದಾಗ ತುಂಬಾ ಕಣ್ಣೀರು ಹಾಕಿದ್ದಳು. ಹೀಗಾಗಿ ಆತನೂ ಕೂಡ ಕಣ್ಣೀರು ಹಾಕಬೇಕೆಂಬ ಉದ್ದೇಶದಿಂದ ಆತನಿಗೆ ಈರುಳ್ಳಿಯನ್ನು ಕಳುಹಿಸಿದ್ದಾಳೆ.

love breakup

ಲವ್ ಬ್ರೇಕಪ್ ಆದ ಒಂದು ವರ್ಷದಿಂದ ಯುವತಿ, ಪ್ರಿಯತಮನನ್ನು ನೋಡುತ್ತಿದ್ದಳು. ಅದರಲ್ಲೂ ಇಬ್ಬರ ಸಂಬಂಧ ಮುರಿದ ನಂತರ ತನ್ನ ಮಾಜಿ ಗೆಳೆಯ ಕಣ್ಣೀರು ಹಾಕಲಿಲ್ಲ ಎಂದು ತಿಳಿದ ನಂತರ ಯುವತಿ ಕೋಪಗೊಂಡು ಮೂರು ದಿನ ಅತ್ತಿದ್ದಾಳೆ. ನಂತರ ಒಂದು ಟನ್ ಈರುಳ್ಳಿಯನ್ನು ಅವನ ಮನೆ ಬಾಗಿಲಿಗೆ ತಲುಪಿಸಿದ್ದಾಳೆ. ಜೊತೆಗೆ “ನಾನು ಮೂರು ದಿನ ಅತ್ತಿದ್ದೇನೆ. ಈಗ ಅದು ನಿನ್ನ ಸರದಿ..” ಎಂಬ ಸಂದೇಶವನ್ನು ಕೂಡ ರವಾನಿಸಿದ್ದಾಳೆ.

onions 1502701155 3219871

ಚೀನಾದ ಶಾಂಡೊಂಗ್‍ನ ಜಿಬೊದಲ್ಲಿರುವ ವಸತಿ ಕಾಂಪೌಂಡ್‍ನಲ್ಲಿ ಒಂದು ಟನ್ ಈರುಳ್ಳಿಯನ್ನು ಕಾಣಬಹುದು. ಯುವತಿ, ಯುವಕನ್ನು ಭೇಟಿ ಮಾಡದಂತೆ ಮತ್ತು ಆತನ ಮನೆಯ ಮುಂಭಾಗದ ಬಾಗಿಲಲ್ಲಿ ಈರುಳ್ಳಿಯನ್ನು ಸುರಿದು ಬರುವಂತೆ ಡೆಲಿವರಿ ಮಾಡುವವರಿಗೆ ಸೂಚಿಸಿದ್ದಳು. ತನ್ನಂತೆ ಪ್ರಿಯತಮ ಕೂಡ ಕಣ್ಣೀರು ಹಾಕಬೇಕೆಂದು ಆಕೆ ಈರುಳ್ಳಿ ಕಳುಹಿಸಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *