ನವೆಂಬರಿನಲ್ಲಿ ಸುಶಾಂತ್ ಮದ್ವೆ ಮಾಡಲು ನಿರ್ಧರಿಸಿದ್ದ ಕುಟುಂಬ

Public TV
2 Min Read
sushanth 1

ಮುಂಬೈ: ಬಾಲಿವುಡ್ ನಟ ಸಶಾಂತ್ ಸಿಂಗ್ ರಜಪೂತ್ ಭಾನುವಾರ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ. ಆದರೆ ಅವರ ಕುಟುಂಬದವರು ಸುಶಾಂತ್ ಮದುವೆ ಮಾಡಲು ನಿರ್ಧರಿಸಿದ್ದರು ಎಂಬ ಸುದ್ದಿ ತಿಳಿದು ಬಂದಿದೆ. ಇದನ್ನೂ ಓದಿ: ಬಣ್ಣದ ಲೋಕದ 3 ನಟಿಯರ ಜೊತೆ ಸುಶಾಂತ್ ಹೆಸ್ರು ಥಳಕು

ಸುಶಾಂತ್ ಕುಟುಂಬದವರು ಇದೇ ವರ್ಷ ನವಂಬರಿನಲ್ಲಿ ಮದುವೆ ಮಾಡಲು ನಿರ್ಧರಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಕೆಲವು ದಿನಗಳಿಂದ ಸುಶಾಂತ್ ಸಿಂಗ್ ಹೆಸರು ನಟಿ ರಿಯಾ ಚಕ್ರವರ್ತಿಯೊಂದಿಗೆ ಕೇಳಿ ಬಂದಿತ್ತು. ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಹಲವೆಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲಾರಭಿಸಿದ್ದರು. ಸುಶಾಂತ್ ಮತ್ತು ರಿಯಾ ಡೇಟಿಂಗ್ ಮಾಡುತ್ತಿದ್ದಾರೆ. ಶೀಫ್ರದಲ್ಲೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ಬಗ್ಗೆ ಇಬ್ಬರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದನ್ನೂ ಓದಿ: ಕೊನೆ ಇನ್‍ಸ್ಟಾ ಪೋಸ್ಟ್ ನಲ್ಲಿ ಅಮ್ಮನ ಬಗ್ಗೆ ಭಾವುಕ ಮಾತು

Sushant Singh Rajput 7

ಈಗ ತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ರಿಯಾ, ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಹೆಚ್ಚು ಆಸಕ್ತಿ ತೋರಿದ್ದರು. ಹಾಗಾಗಿ ಮದುವೆಗೆ ಹಿಂದೇಟು ಹಾಕಿದ್ದರಂತೆ. ಹೀಗಾಗಿ ಸುಶಾಂತ್ ತಮ್ಮ ಪ್ರೀತಿಯನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ನಂತರ ಮಾರ್ಚ್ ತಿಂಗಳಿನಿಂದ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಸುಶಾಂತ್ ಮದುವೆಯ ಬಗ್ಗೆ ಅವರ ಸಂಬಂಧಿ ಸಹೋದರ ಮಾತನಾಡಿದ್ದಾರೆ.

sushant singh rajput 7591

ಸುಶಾಂತ್ ಈ ವರ್ಷ ನವಂಬರಿನಲ್ಲಿ ಮದುವೆಯಾಗಬೇಕಿತ್ತು. ಕುಟುಂಬದವರು ಕೂಡ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಶೀಘ್ರದಲ್ಲೇ ಮದುವೆ ಬಗ್ಗೆ ಮಾತನಾಡಲು ಮುಂಬೈಗೆ ಬರಲು ಸಜ್ಜಾಗಿದ್ದರು. ಜೊತೆಗೆ ಸುಶಾಂತ್ ವಿವಾಹ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮಾಡಲು ನಿರ್ಧಾರ ಮಾಡಲಾಗಿತ್ತು ಎಂದು ಸಹೋದರ ಹೇಳಿದ್ದಾರೆ. ಆದರೆ ಹುಡುಗಿ ಯಾರು ಎಂದು ಸಂಬಂಧಿ ಸಹೋದರ ರವೀಲ್ ಮಾಡಿಲ್ಲ.

sushanth singh

ಸದ್ಯಕ್ಕೆ ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯಾ ಪ್ರಕರಣ ಎಂಬ ತೀರ್ಮಾನಕ್ಕೆ ಬರಲಾಗಿದೆ. ಬಾಂದ್ರಾ ಅಪಾರ್ಟ್ ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಸುಶಾಂತ್ ಅವರ ಮೃತದೇಹವನ್ನು ಡಾ. ಆರ್‍ಎನ್ ಕೂಪರ್ ಜನರಲ್ ಆಸ್ಪತ್ರೆಗೆ ರಾತ್ರಿ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

 

ಸುಶಾಂತ್ ಸಾವಿಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ ಮತ್ತು ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಸಹ ಲಭ್ಯವಾಗಿಲ್ಲ. ಪೊಲೀಸರು ಮನೆಯಲ್ಲಿದ್ದ ಮೂವರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುಶಾಂತ್ ಸಿಂಗ್ ಬಳಸುತ್ತಿದ್ದ ಮೊಬೈಲ್ ಸಹ ಪರಿಶೀಲನೆ ನಡೆಸಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *