ಲಕ್ನೋ: ಸರ್ಕಾರಿ ಆಸ್ಪತ್ರೆಯ ಹೊರಗೆ ವ್ಯಕ್ತಿಯೊಬ್ಬ ತನ್ನ 5 ತಿಂಗಳ ಮಗುವಿನ ಮೃತದೇಹವನ್ನು ತೋಳಲ್ಲಿ ಅಪ್ಪಿಕೊಂಡು, ಅಳುತ್ತ ನನ್ನ ಮಗುವಿಗೆ ಚಿಕಿತ್ಸೆ ನೀಡಿಲ್ಲ, ಜೀವವೇ ಹೋಯ್ತು ಎಂದು ತೋಳಲ್ಲಿ ಅಪ್ಪಿ ತಂದೆಯ ಕಣ್ಣೀರು ಹಾಕಿದ್ದಾರೆ.
Advertisement
ಉತ್ತರ ಪ್ರದೇಶದ ಬಾಬರ್ಂಕಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಬಳಿ ವ್ಯಕ್ತಿ ನನ್ನ ಮಗುವಿನ ಆರೋಗ್ಯ ಗಂಭೀರ ಸ್ಥಿತಿ ತಲುಪಿದ್ದರು, ಕೊರೊನಾ ಭಯದಿಂದ ಯಾರೊಬ್ಬರೂ ರೋಗಿಗಳನ್ನು ಮುಟ್ಟಲು ಬರುವುದಿಲ್ಲ. ಎರಡು ತಾಸುಗಳ ಬಳಿಕ ವೈದ್ಯರು ನೋಡಿದರೂ, ಅಷ್ಟರಲ್ಲಿ ನನ್ನ ಹೆಣ್ಣುಮಗುವಿನ ಜೀವ ಹೋಗಿತ್ತು. ಇದ್ಯಾವ ವ್ಯವಸ್ಥೆ ಎಂದು ತಂದೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಆಡಿಯೋಗೂ ನಮಗೂ ಯಾವುದೇ ಸಂಬಂಧವಿಲ್ಲ – ತನಿಖೆಗೆ ಆಗ್ರಹಿಸಿ ಆಸ್ಪತ್ರೆಯಿಂದ ದೂರು ದಾಖಲು
Advertisement
Advertisement
ಆಸ್ಪತ್ರೆ ಹೊರಗಡೆ ಅಳುತ್ತ ನಿಂತಿದ್ದ ವ್ಯಕ್ತಿಯ ಬಳಿ ಪೊಲೀಸ್ ಒಬ್ಬರು, ಏನಿದು ನಾಟಕ? ಎಂದು ಪ್ರಶ್ನಿಸುತ್ತಾರೆ. ನನ್ನ ಮಗು ಸಾವನ್ನಪ್ಪಿದೆ.. ನಾನ್ಯಾಕೆ ಡ್ರಾಮಾ ಮಾಡಲಿ ಎಂದು ಮಗುವಿನ ತಂದೆ ಹೇಳುವಂತ ವಿಡಿಯೋಗಳು ವೈರಲ್ ಆಗಿವೆ. ಅದಕ್ಕೆ ಪ್ರತಿಯಾಗಿ ಪೊಲೀಸರು ಒಂದು ಲಿಖಿತ ದೂರು ನೀಡುವಂತೆ ಕೇಳಿದ್ದಾರೆ. ಇದನ್ನೂ ಓದಿ: 1,200 ಕಿ.ಮೀ ಸೈಕಲಿನಲ್ಲೇ ಮಗಳೊಂದಿಗೆ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಸಾವು
Advertisement
ಆಸ್ಪತ್ರೆ ವ್ಯಕ್ತಿಯ ಆರೋಪವನ್ನು ತಳ್ಳಿ ಹಾಕಿದೆ. ಈ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಮೃತಪಟ್ಟಿತ್ತು ಎಂದು ಹೇಳಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಬಂದ ಮಗುವನ್ನು ತಪಾಸಣೆ ಮಾಡಲಾಯಿತು. ಆದರೆ ಮನೆಯಿಂದ ಕರೆದುಕೊಂಡು ಬರುವಷ್ಟರಲ್ಲಿಯೇ ಮಗು ಮೃತಪಟ್ಟಾಗಿತ್ತು. ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ಇಬ್ಬರೂ ಮಗುವನ್ನು ಪರೀಕ್ಷೆ ಮಾಡಿದ್ದಾರೆ ಎಂದು ನನಗೆ ಆಸ್ಪತ್ರೆಯ ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ. ಈ ಮಗು ಟೆರೇಸ್‍ನಿಂದ ಕೆಳಗೆ ಬಿದ್ದಿತ್ತು ಎಂದು ಪಾಲಕರೇ ತಿಳಿಸಿದ್ದಾರೆ ಎಂದು ಬಾಬರ್ಂಕಿ ಮುಖ್ಯ ವೈದ್ಯಾಧಿಕಾರಿ ಬಿಕೆಎಸ್ ಚೌಹಾಣ್ ತಿಳಿಸಿದ್ದಾರೆ.