ಬೆಂಗಳೂರು: ನನ್ನ ಮೇಲೆ ಕೆಲವರಿಗೆ ಪ್ರೀತಿ ಜಾಸ್ತಿ. ರಾಜಕೀಯ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬಿಎಸ್‍ವೈ ಪುತ್ರ, ಬಿಜೆಪಿ ಉಪಾಧ್ಯಕ್ಷ ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಪದೇ ಪದೇ ದೆಹಲಿಗೆ ಹಾರಿ, ನಾಯಕತ್ವ ಬದಲಾವಣೆ ಚರ್ಚೆಗೆ ಆಹಾರ ಒದಗಿಸಿರುವ ಸಚಿವ ಯೋಗೇಶ್ವರ್ ವಿರುದ್ಧ ಬಿಜೆಪಿ ಟೀಂ ಸಿಡಿದೆದ್ದಿದೆ. ತನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಸಚಿವ ಸಿಪಿ ಯೋಗೇಶ್ವರ್ ಆರೋಪಕ್ಕೆ ವಿಜಯೇಂದ್ರ ಕಿಡಿಕಾರಿದ್ದಾರೆ.
Advertisement
Advertisement
30-40 ವರ್ಷದ ಹೋರಾಟ, ಕಾರ್ಯಕರ್ತರ ಪರಿಶ್ರಮದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳುವ ಮೂಲಕ ಯೋಗೇಶ್ವರ್ ಅವರಿಂದ ಈ ಸರ್ಕಾರ ಬಂದಿಲ್ಲ. ನಾನು ಪಕ್ಷದ ಉಪಾಧ್ಯಕ್ಷ, ನನ್ನ ಮಿತಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಬಿಎಸ್‍ವೈ ಬದಲಾವಣೆ ವದಂತಿ – ಹೈಕಮಾಂಡ್ ಮುಂದಿರುವ 4 ಆಯ್ಕೆ ಏನು?
Advertisement
Advertisement
ವಿವರಣೆ ಪಡೆಯುತ್ತೇನೆ: ರಾಜ್ಯಾಧ್ಯಕ್ಷ ಕಟೀಲ್ ಪ್ರತಿಕ್ರಿಯಿಸಿ, ಶಾಸಕರಿಗೆ ಈ ಹಿಂದೆಯೇ ಸೂಚಿಸಿದ್ದೆ. ಈಗಲೂ ಅದೇ ಸೂಚನೆ ಕೊಡುತ್ತಿದ್ದೇನೆ. ಈಗ ಕೋವಿಡ್ ಕೆಲಸ ಮಾಡಬೇಕು. ಬೇರೆ ರಾಜಕೀಯ ಚಟುವಟಿಕೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. 3 ಪಾರ್ಟಿ ಸರ್ಕಾರ, ಮಕ್ಕಳ ಹಸ್ತಕ್ಷೇಪ ಎಂಬ ಯೋಗೇಶ್ವರ್ ಆರೋಪದ ಬಗ್ಗೆ ವಿವರಣೆ ಪಡೆಯುತ್ತೇನೆ ಅಂತ ಕಟೀಲ್ ಹೇಳಿದ್ದಾರೆ.
ಈಶ್ವರಪ್ಪ ಕಿಡಿ: ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರಿದ್ದ ಈಶ್ವರಪ್ಪ ಕೂಡ ಈಗ ಬಿಎಸ್‍ವೈ ಪರ ಬ್ಯಾಟ್ ಬೀಸಿದ್ದಾರೆ. ಹೈಕಮಾಂಡ್‍ಗೆ ದೂರು ನೀಡಿದ ಮೇಲೆ ಸುಮ್ಮನಿರಬೇಕು. ಮಾಧ್ಯಮಗಳ ಮುಂದೆ ಮಾತನಾಡುವುದಲ್ಲ. ನಿಮಗೆ ಸಮಾಧಾನ ಇಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೋಗಿ ಅಂದಿದ್ದಾರೆ.
ಅಂಬುಲೆನ್ಸ್ ಸೇವೆ: ಮೈ ಸೇವಾ ಸಂಘಟನೆ ಮೂಲಕ ಕೋವಿಡ್ ಸಂಕಷ್ಟಕ್ಕೆ ವಿಜಯೇಂದ್ರ ನೆರವಾಗಿದ್ದಾರೆ. ರಾಜ್ಯದ 16 ಕಡೆಗಳಲ್ಲಿ 18 ಅಂಬುಲೆನ್ಸ್, ಆಕ್ಸಿಜನ್ ಕಾನ್ಸಟ್ರೇಟರ್ ಗಳು ಸೇವೆಗೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದರು.