ನೆಲಮಂಗಲ: ಕಳೆದ ಎರಡು ದಿನಗಳಿಂದ 6ನೇ ವೇತನ ನೀಡುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ಮುಷ್ಕರದಿಂದ ಜನರು ಪರದಾಡುವಂತಾಗಿದೆ. ಇತ್ತ ಕೆಲ ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದ ಹಿನ್ನೆಲೆ ರಾಜ್ಯ ಸಾರಿಗೆ ಜಂಟಿ ಆಯುಕ್ತೆ ಓಂಕಾರೇಶ್ವರಿ ಖಾಸಗಿ ವಾಹನ ಚಾಲಕ ನಿರ್ವಾಹಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
Advertisement
ಸಾರ್ವಜನಿಕರಿಂದ ಖಾಸಗಿ ವಾಹನದವರು ದುಪ್ಪಟ್ಟು ಹಣ ಪಡೆದುಕೊಂಡು ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಕೂಡಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, ಓಂಕಾರೇಶ್ವರಿ ನೇತೃತ್ವದಲ್ಲಿ ನೆಲಮಂಗಲ ತುಮಕೂರು ರಸ್ತೆಯ ನವಯುಗ ಟೋಲ್ ಬಳಿ ಖಾಸಗಿ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ನಂತರ ನೆಲಮಂಗಲ ಆರ್.ಟಿ.ಓ ಅಧಿಕಾರಿಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ವಾಹನ ನಿರ್ವಾಕರಿಗೆ ವಾರ್ನಿಂಗ್ ನೀಡಿ ಹಣ ಮರುಪಾವತಿಸುವಂತೆ ಆದೇಶಿಸಿದರು.
Advertisement
Advertisement
ಓಂಕಾರೇಶ್ವರಿ ಅವರು ದಾಳಿಗೆ ಇಳಿಯುತ್ತಿದ್ದಂತೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ನಿರ್ವಾಹಕರೊಬ್ಬರು ಸಿಕಿಬಿದ್ದಿದ್ದಾರೆ. ನಂತರ ಕೈ ಮುಗಿದು ನಿಂತು ನನ್ನಿಂದ ತಪ್ಪಾಗಿದೆ ಹಣ ವಾಪಸ್ ನೀಡುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರಯಾಣಿಕರ ಸಮಸ್ಯೆ ಆಲಿಸಿದ ಆಯುಕ್ತರು, ಯಾರು ಕೂಡ ಹೆಚ್ಚು ಹಣ ನೀಡಿ ಪ್ರಯಾಣಿಸದಂತೆ ಮನವಿ ಮಾಡಿದರು. ನಂತರ ಇನ್ಯೂರೆನ್ಸ್ ಇಲ್ಲದ ವಾಹನಗಳಿಗೆ ಕಡ್ಡಾಯವಾಗಿ ಇನ್ಯೂರೆನ್ಸ್ ಮಾಡಬೇಕಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಂಟಿ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಅವರೊಂದಿಗೆ, ಆರ್ ಟಿ ಓ ಗುರುಮೂರ್ತಿ, ಡಾ.ಒಡೆಯರ್ ಮತ್ತು ತಿಪ್ಪೇಸ್ವಾಮಿ ವಾಹನಗಳನ್ನು ತಪಾಸಣೆ ನಡೆಸಿದರು.
Advertisement