ನನಗೂ ಸಿಎಂ ಆಗುವ ಅವಕಾಶ ಸಿಗಬಹುದು: ತನ್ವೀರ್ ಸೇಠ್

Public TV
1 Min Read
Tanveer Sait 3

ಮೈಸೂರು: ಈಗಲೇ ಸಿಎಂ ಯಾರಾಗಬೇಕು ಎಂದು ಮಾತಾಡುವುದು ಕಾಂಗ್ರೆಸ್ಸಿಗೆ ಹೆಚ್ಚು ಹಾನಿ ಮಾಡುತ್ತದೆ. ನಾಯಕರ ಮೆಚ್ಚಿಸಲು ಸಿಎಂ ವಿಚಾರ ಎತ್ತಬಾರದು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

Congress flag 2 e1573529275338

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಯಾರು ಎಂಬುದು ತೀರ್ಮಾನ ಆಗುತ್ತೆ. ಆಗ ನನಗೂ ಸಿಎಂ ಆಗುವ ಅವಕಾಶ ಸಿಗಬಹುದು. ಆದರೆ ಈಗಲೇ ಆ ಬಗ್ಗೆ ಮಾತನಾಡುವುದು ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದರು. ಇದನ್ನೂ ಓದಿ: ವೀಡಿಯೋ: ರಸ್ತೆ ಬದಿಯಲ್ಲಿ ಬ್ರೆಡ್ ಮಾರಿ ಸಣ್ಣ ವ್ಯಾಪಾರಿಗಳಿಗೆ ಸೋನು ಸೂದ್ ಪ್ರೋತ್ಸಾಹ

siddaramaiah 4 medium

ಇನ್ಮುಂದೆ ಯಾರು ಸಿಎಂ ವಿಚಾರ ಪ್ರಸ್ತಾಪ ಮಾಡಬಾರದು ಎಂದು ಹಿರಿಯ ನಾಯಕರು ಹೇಳಿದ್ದಾರೆ. ಅದನ್ನು ಮೀರಿಯೂ ಯಾರಾದರೂ ಮಾತಾಡಿದರೆ ಪಕ್ಷ ಅವರ ಮೇಲೆ ಕ್ರಮ ಕೈಗೊಳ್ಳುತ್ತೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *