ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಮಾಧಿಗೆ ಇಂದು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮರಣದ ನಂತರದ ಕ್ರಿಯಾವಿಧಿಗಳನ್ನ ನೆರವೇರಿಸಿದ್ದಾರೆ.
Advertisement
ವಿಜಯ್ ಸಾವನ್ನಪ್ಪಿ ಇಂದಿಗೆ ಮೂರು ದಿನವಾದ ಹಿನ್ನೆಲೆ ಹಿಂದೂ ಸಂಪ್ರದಾಯದ ವೀರಶೈವ ಪದ್ಧತಿಯಂತೆ ಅವರ ಸಮಾಧಿಗೆ ಹಾಲು-ತುಪ್ಪ ಬಿಟ್ಟಿದ್ದಾರೆ. ವಿಜಯ್ ಸಹೋದರರು, ಕುಟುಂಬಸ್ಥರು, ವಿಜಯ್ ಆಪ್ತಮಿತ್ರ ರಘು ಹಾಗೂ ಸ್ನೇಹಿತರೊಡಗೂಡಿ ಸಮಾಧಿ ಸ್ಥಳಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಾಲು-ತುಪ್ಪ ಎರೆದಿದ್ದಾರೆ. ಇದೇ ವೇಳೆ, ಸ್ಥಳೀಯರು, ವಿಜಯ್ ಅಭಿಮಾನಿಗಳೂ ದುಃಖ ತಪ್ತರಾಗಿ ಸಮಾಧಿ ಸ್ಥಳದಲ್ಲಿ ನೆರೆದಿದ್ದರು. ವಿಜಯ್ ಅಣ್ಣನ ಚಿಕ್ಕ-ಚಿಕ್ಕ ಮಕ್ಕಳು ಕಣ್ಣೀರಾಕುತ್ತಲೇ ಚಿಕ್ಕಪ್ಪನ ಸಮಾಧಿಗೆ ಹಾಲು-ತುಪ್ಪ ಎರೆದ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸುವಂತಿತ್ತು. ಇದನ್ನೂ ಓದಿ: ಮತ್ತೆ ಹುಟ್ಟಿ ಬಾ ಗೆಳೆಯ ಎಂದ ಸ್ಯಾಂಡಲ್‍ವುಡ್
Advertisement
Advertisement
ಜೂನ್ 13ರಂದು ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂಚಾರಿ ವಿಜಯ್, ಜೂನ್ 15ರಂದು ಉಸಿರು ಚೆಲ್ಲಿದರು. ನಂತರ ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ಪಂಚನಹಳ್ಳಿಯಲ್ಲಿ ಅವರ ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು. ವಿಜಯ್ ಚಿಕ್ಕಂದಿನಿಂದಲೇ ನಟನೆ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದರು. ಬಾಲ್ಯದಲ್ಲಿಯೇ ಹೆತ್ತವರನ್ನು ಕಳೆದುಕೊಂಡಿದ್ದ ವಿಜಯ್, ಕೆಲಸ ಮಾಡುತ್ತಲೇ ಓದು ಮುಗಿಸಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಇದನ್ನೂ ಓದಿ: ಸ್ನೇಹಿತ ರಘು ತೋಟದಲ್ಲೇ ಮಣ್ಣಲ್ಲಿ ಮಣ್ಣಾದ ವಿಜಯ್
Advertisement
ಅತಿಥಿ ಉಪನ್ಯಾಸಕರಾಗಿ ಪಾಠವನ್ನು ಹೇಳಿಕೊಡುತ್ತಿದ್ದರು. ಕಲಾವಿದ ಕುಟುಂಬದ ಗೀಳು ಹೋಗದ ಕಾರಣ ರಂಗಭೂಮಿ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ್ದರು. ನಾನು ಅವನಲ್ಲ ಅವಳು ಸಿನಿಮಾದಲ್ಲಿ ನಟಿಸುವ ಮೂಲಕ ರಾಷ್ಟ್ರಪತಿ ಪಡೆದು ಸ್ಯಾಂಡಲ್‍ವುಡ್ ನಿಬ್ಬೆರಗಾಗುವಂತೆ ಮಾಡಿದ್ದರು. ದುರಾದೃಷ್ಟವಶತ್, ಬೆಂಗಳೂರಲ್ಲಿ ನಡೆದ ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಜೀವನ್ಮರದ ಮಧ್ಯೆ ಹೋರಾಡಿ ಕೊನೆಯುಸಿರೆಳೆದಿದ್ದರು. ಅಂಗಾಂಗ ದಾನ ಮಾಡುವ ಮೂಲಕ ಸಮಾಜದ ಕಣ್ಣಿಗೆ ಸಾವಲ್ಲೂ ಸಾರ್ಥಕತೆ ಮೆರೆದ ಆದರ್ಶ ನಟನಾಗಿ ಉಳಿದರು. ಸಂಚಾರಿ ವಿಜಯ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಜಿಲ್ಲೆಯ ಕಡೂರಿನ ತಾಲೂಕಿನ ಪಂಚನಹಳ್ಳಿಯಲ್ಲಿ ವಿಜಯ್ ಆಪ್ತಮಿತ್ರ ರಘು ಅವರ ತೋಟದಲ್ಲಿ ವೀರಶೈವ ಸಂಪ್ರದಾಯದಂತೆ ಕುಪ್ಪೂರು ಶ್ರೀಗಳು ನೇತೃತ್ವದಲ್ಲಿ ಅಂತ್ಯಸಂಸ್ಕಾರ ನೆರವೇರಿತ್ತು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?