ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯಗೂ ಕೊರೊನಾ ಸೋಂಕು ತಗುಲಿದೆ.
ಶನಿವಾರ ರಾತ್ರಿ ಬಿಗ್ ಬಿ ಅಮಿತಾಬ್ ಬಚ್ಚನ್ ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ತಂದೆ ಅಮಿತಾಬ್ ಬಚ್ಚನ್ ಬಳಿಕ ಟ್ವೀಟ್ ಮಾಡಿದ್ದ ಅಭಿಷೇಕ್ ತಮ್ಮ ವರದಿಯೂ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಇದೀಗ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ತಗುಲಿರುವುದು ಖಚಿತವಾಗಿದೆ.
Advertisement
Advertisement
ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗೋದು ಬೇಡ. ನಾವು ಆದಷ್ಟು ಬೇಗ ಗುಣಮುಖರಾಗಿ ಬರುತ್ತೇವೆ ಎಂದು ಬಚ್ಚನ್ ಕುಟುಂಬ ಹೇಳಿದೆ. ಇನ್ನು ಬಿಗ್ ಬಿ ಪತ್ನಿ ಜಯಾ ಬಚ್ಚನ್ ವರದಿ ನೆಗೆಟಿವ್ ಬಂದಿದೆ.
Advertisement
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ಗೆ ಕೊರೊನಾhttps://t.co/Koaqz8DHHo#AmitabhBachchan #CoronaVirus #COVID19 #Bollywood
— PublicTV (@publictvnews) July 11, 2020